ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶ್ರೀವೆಂಕಟೇಶ್ವರಸ್ವಾಮಿ ದೇವಾಲಯ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮ ಸುಭಿಕ್ಷಾ ಕಾರ್ಯಕ್ರಮ ನಡೆಯಿತು.ಭಾರತೀನಗರದ ಸುತ್ತಮುತ್ತಲ ಗ್ರಾಮಗಳು ಸುಭಿಕ್ಷವಾಗಿರಲಿ ಎಂದು ಸಂಕಲ್ಪ ಮಾಡಿ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇವರಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಯು.ವಿ.ಗಿರೀಶ್ ಹಾಗೂ ಅರ್ಚಕ ವೆಂಕಟೇಶ್ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಈ ವೇಳೆ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ವೇಳೆ ಯೋಜನೆ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ್ ನೆಲ್ಲಿತ್ತಾಯ, ಮಂಡ್ಯ ಜಿಲ್ಲಾ ನಿರ್ದೇಶಕಿ ಚೇತನಾ, ಭಾರತೀನಗರ ವೃತ್ತದ ಯೋಜನಾಧಿಕಾರಿ ಸುವರ್ಣಾ ಭಟ್, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಮೆಣಸಗೆರೆ ಧರಣಿ ಪುಟ್ಟೇಗೌಡ, ಕ್ಯಾತಘಟ್ಟ ರವಿಕುಮಾರ್, ಶ್ರೀ ವೆಂಕಟೇಶ್ವರ ಸೇವಾ ಸಮಿತಿ ಅಧ್ಯಕ್ಷ ಪೂಜೂರಿ ವೆಂಕಟೇಗೌಡ, ಯೋಜನೆ ಒಕ್ಕೂಟದ ಅಧ್ಯಕ್ಷೆ ವೆಂಕಟಲಕ್ಷ್ಮೀ, ಮೇಲ್ವಿಚಾರಕರಾದ ಚಿತ್ರಾವತಿ, ಸುಮಾ, ಅಶ್ವಿನಿ ವೀಣಾ, ಮನೀಶ್, ಗಿರೀಶ್, ಆದರ್ಶ, ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.ಚನ್ನಪ್ಪನದೊಡ್ಡಿಯಲ್ಲಿಂದು ಸಾಮೂಹಿಕ ಬಾಡೂಟ ಅನ್ನಸಂತರ್ಪಣೆ
ಮಂಡ್ಯ: ತಾಲೂಕಿನ ಚನ್ನಪ್ಪನದೊಡ್ಡಿ ಗ್ರಾಮದಲ್ಲಿ ಮಾ.21ರಂದು ಶ್ರೀಏಳೂರಮ್ಮ ಶ್ರೀಮಾರಮ್ಮ ಶ್ರೀಚೌಡೇಶ್ವರಿ ದೇವರ ಪೂಜಾ ಮಹೋತ್ಸವ ಮತ್ತು ಶ್ರೀಅಂಕನಾಥೇಶ್ವರ ದೇವರ ಪಲ್ಲಕಿ ಉತ್ಸವದ ಹಬ್ಬವು ವಿಜೃಂಭಣೆಯಿಂದ ನಡೆಯಲಿದೆ.ಮಾ.20ರಂದು ರಾತ್ರಿ 8 ಗಂಟೆಗೆ ಗ್ರಾಮದ ಬೀದಿ ಬೀದಿಗಳಲ್ಲಿ ಪಲ್ಲಕಿ ಉತ್ಸವ, ಪೂಜಾಕುಣಿತ ಮತ್ತು ವಿರಗಾಸೆ ಕುಣಿತವು ತಮಟೆ ನಗಾರಿ ನಾದಮೇಳದೊಂದಿಗೆ ನಡೆಯಿತು.
ಮಾ.21ರಂದು ಮುಂಜಾನೆ 5ಗಂಟೆಗೆ ಮಡೆ, ತಂಬಿಟ್ಟಿನ ಆರತಿಯೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ಗ್ರಾಮದೇವತೆಗಳಿಗೆ ತಂಪು ತೋರಿ, ಪೂಜೆ ಸಲ್ಲಿಸಲಾಗುವುದು, ಮಧ್ಯಾಹ್ನ 1 ರಿಂದ 5ಗಂಟೆವರಗೆ ಬಾಡೂಟದ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು. ಅಕ್ಕ ಪಕ್ಕದ ಗ್ರಾಮಸ್ಥರು, ಬಂಧು-ಬಳಗದವರು ನೆರೆಹೊರೆಯವರು ಸೇರಿ ಸುಮಾರು 5 ಸಾವಿರ ಮಂದಿಗೆ ಬಾಡೂಟದ ಅನ್ನಂತರ್ಪಣೆ ನಡೆದು ಭಾವೈಕ್ಯತೆ ಬೆಸೆಯುವುದು ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.