ಕನ್ನಡಪ್ರಭ ವಾರ್ತೆ ಹರಿಹರ ಇಲ್ಲಿಯ ಇಂದಿರಾ ನಗರದ ಗ್ರಾಮದೇವತೆ ದೇವಸ್ಥಾನದಲ್ಲಿ ಫೆ.18ರಂದು ಬೆಳಗ್ಗೆ ಗ್ರಾಮದೇವತೆ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಮಂಜುನಾಥ ಚುಂಚಳ್ಳಿ ಹೇಳಿದರು.
ಈ ಭಾಗದ ಭಕ್ತರ ಒತ್ತಾಸೆ ಹಾಗೂ ನಗರದ ಕಸಬಾ ಮತ್ತು ಮಹಜೇನಹಳ್ಳಿ ಗ್ರಾಮದ ಗೌಡರ ಸಮ್ಮತಿ ಮೇರೆಗೆ ದೇವಿಯ ನೂತನ ಮೂರ್ತಿಯನ್ನು ಮಾಡಿಸಿದ್ದು, ಫೆ.18ರಂದು ಬೆಳಗ್ಗೆ 6.30 ರಿಂದ ವಿವಿಧ ಹೋಮ ಹವನ ನೆರವೇರಿಸುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು ಎಂದರು.
ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಸ್. ರಾಮಪ್ಪ, ಎಚ್.ಎಸ್. ಶಿವಶಂಕರ್, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಬಿಜೆಪಿಯ ಚಂದ್ರಶೇಖರ್ ಪೂಜಾರ್, ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಉಪಾಧ್ಯಕ್ಷ ಎಂ. ಜಂಬಣ್ಣ, ಗ್ರಾಮದೇವತೆ ಉತ್ಸವ-2025ರ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಇತರರಿಗೆ ಆಹ್ವಾನ ನೀಡಲಾಗಿದೆ. ಸರ್ವರು ಆಗಮಿಸುವ ನಿರೀಕ್ಷೆಯಿದೆ ಎಂದರು.ದೇವಸ್ಥಾನ ಸಮಿತಿಯ ಜೆ. ಕೃಷ್ಣಮೂರ್ತಿ ಮಾತನಾಡಿದರು. ಸುದ್ದಿಗೋಷ್ಟಿಯಲ್ಲಿ ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ವಕೀಲ ಮಾರುತಿ ಬೇಡರ್, ದೇವಸ್ಥಾನ ಸಮಿತಿಯ ಎನ್. ಟೇಕೋಜಿರಾವ್, ಜಿ.ಪ್ರದೀಪ್ ಇತರರಿದ್ದರು.
- - - -17ಎಚ್‍ಆರ್‍ಆರ್02:ಹರಿಹರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಂದಿರಾ ನಗರ ಗ್ರಾಮದೇವತಾ ದೇವಸ್ಥಾನದ ಪದಾಧಿಕಾರಿಗಳು ಮಾತನಾಡಿದರು.