ಹೊಸಪೇಟೆ: ಮಹಾತ್ಮ ಗಾಂಧೀಜಿ ಜಯಂತಿಯಂದು ಗ್ರಾಮ ಸ್ವರಾಜ್ಯ ಅನುಷ್ಠಾನಕ್ಕೆ ಆಗ್ರಹಿಸಿ ಜಿಲ್ಲಾ ಗ್ರಾಪಂ ಸದಸ್ಯರ ಒಕ್ಕೂಟ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೂಲಕ ಸಿಎಂಗೆ ಸೋಮವಾರ ಮನವಿ ರವಾನಿಸಿದರು.
ರಾಜ್ಯದ ಮಹಿಳಾ ಜನಪ್ರತಿನಿಧಿಗಳಿಗಳಿಗೆ ಗ್ರಾಪಂಗಳಲ್ಲಿ ನಡೆಯುವಂತಹ ಶೋಷಣೆ, ನಿರ್ಲಕ್ಷ್ಯ, ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಮಹಿಳಾ ಸಹಾಯವಾಣಿ ತೆರೆಯಬೇಕು. ಪಂಚಾಯಿತಿಗಳಲ್ಲಿ ಪಾರದರ್ಶಕತೆ ತರಲು, ಪ್ರತಿ ಪಿಡಿಒ, ಕಾರ್ಯದರ್ಶಿ, ಬಿಲ್ ಕಲೆಕ್ಟರ್, ಡಾಟಾ ಎಂಟ್ರಿ ಆಪರೇಟರ್ ಗಳನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಬೇರೆ ಪಂಚಾಯಿತಿಗಳಿಗೆ ವರ್ಗಾವಣೆ ಮಾಡುವುದು ಅವಶ್ಯಕವಾಗಿದೆ. ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿರುವ ಅಡಳಿತವನ್ನು ಸಂವಿಧಾನ ಮತ್ತು ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಕಾಯ್ದೆ ಅನ್ವಯ ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ನಮ್ಮ ಬೇಡಿಕೆಗಳನ್ನು ಅ.2ರೊಳಗಾಗಿ ಈಡೇರಿಸದಿದ್ದಲ್ಲಿ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಪಂ ಸದಸ್ಯರ ನಿರ್ಣಾಯಕ ಹೋರಾಟವನ್ನು ರಾಜ್ಯದ ಎಲ್ಲ ಗಾಪಂಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿ ಮಹಾತ್ಮ ಗಾಂಧೀಜಿ ಜಯಂತಿಯಂದು ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಣ್ಣಕ್ಕಿ ಲಕ್ಷ್ಮಣ, ಮುಖಂಡರಾದ ಜಂಬಣ್ಣ, ಮುರಳಿರಾಜ್, ಮಮತಾ ತಳವಾರ್, ಗಡ್ಡಿನಾಗರಾಜ್, ಗೋವಿಂದ ನಾಯ್ಕ್, ದೂಪದಹಳ್ಳಿ ಮಂಜುನಾಥ, ರಮೇಶ್ ಗದ್ದಿಕೇರಿ, ಸುರೇಶ್, ಹನುಮಂತಪ್ಪ, ಬಾಬು, ಶ್ರೀಧರ್, ರವಿಕುಮಾರ್, ರೇವಣ ಸಿದ್ದೇಶ್ವರ, ಶಶಿಕಲಾ, ವೆಂಕಟೇಶ್, ಸುರೇಶ್, ತಿಪ್ಪೇಸ್ವಾಮಿ, ಕರಿಯಪ್ಪ, ಕೋಟೆಪ್ಪ, ಚನ್ನಬಸಪ್ಪ, ಸುಧಾ ಜೋಗತಿ, ಮಂಜುನಾಥ, ಹುಲುಗಪ್ಪ ಇದ್ದರು.