ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಕೆ
ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್‌ನಲ್ಲಿ ಕೆಲವು ಬದಲಾವಣೆ ಕೋರಿ ಹಿರೇಮಗಳೂರು, ದೋಣಿಖಣ, ಚಿಕ್ಕ ಕುರುಬರಹಳ್ಳಿ, ದೊಡ್ಡ ಕುರುಬರಹಳ್ಳಿ, ದಂಟರಮಕ್ಕಿ ಗ್ರಾಮಸ್ಥರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥ ಶ್ರೀಧರ್ ಜಮೀನು ಈ ಹಿಂದೆ ಹಸಿರು ವಲಯದಲ್ಲಿದ್ದು, ಇದೀಗ ಹೊಸದಾಗಿ ಸಿಡಿಎ ಪ್ಲಾನ್ ತಯಾರಿಸಿದ್ದು ಈ ಪ್ಲಾನ್‌ನಲ್ಲಿ ಮೇಲ್ಕಂಡ ಗ್ರಾಮಗಳ ಜಮೀನುಗಳನ್ನು ಕೆಂಪು ವಲಯಕ್ಕೆ ಬದಲಾವಣೆ ಮಾಡಲಾಗಿದೆ. ಇದರಿಂದ ಮುಂದೆ ತೀವ್ರ ತೊಂದರೆಯಾಗಲಿದೆ ಎಂದರು.
ಬಹುತೇಕ ಗ್ರಾಮಗಳಲ್ಲಿ 5-10 ಗುಂಟೆಗಳ ಜಮೀನುಗಳನ್ನು ಗ್ರಾಮಸ್ಥರು ಹೊಂದಿದ್ದಾರೆ. ಅಲ್ಲದೇ ಕುಟುಂಬದಲ್ಲಿ 4-5 ಮಂದಿ ಅಣ್ಣ ತಮ್ಮಂದಿರುವ ಕಾರಣ ಕೆಂಪು ವಲಯಕ್ಕೆ ಜಮೀನನ್ನು ನಿಗದಿಗೊಳಿಸಿದರೆ ಬಹಳಷ್ಟು ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಆ ಜಮೀನುಗಳನ್ನು ನಂಬಿಕೊಂಡು ಮಕ್ಕಳ ಮದುವೆ, ವಸತಿ ನಿರ್ಮಿಸುವ ಉದ್ದೇಶವಿದೆ. ಆದ್ದರಿಂದ ಸಿಡಿಎ ಆಯುಕ್ತರು ದಾಖಲಾತಿ ಪರಿಶೀಲಿಸಿ ಮೇಲ್ಕಂಡ ಗ್ರಾಮಗಳನ್ನು ಕೆಂಪು ವಲಯದಿಂದ ಹಳದಿ ವಲಯಕ್ಕೆ ಭೂ ಪರಿವರ್ತನೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶಶಿಕುಮಾರ್, ದಾಸೇಗೌಡ, ರಾಮಣ್ಣ, ಬಿ.ಟಿ.ಲಕ್ಷ್ಮಣ್, ರಿಯಾಜ್, ಜಯಣ್ಣ, ಕುಮಾರ್, ಪುಟ್ಟರಾಜು, ಶಿವಣ್ಣ, ಚಂದ್ರಶೇಖರ್, ಸಿದ್ದೇಗೌಡ, ಕಾಳೇಗೌಡ ಇದ್ದರು.3 ಕೆಸಿಕೆಎಂ 2ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್‌ನಲ್ಲಿ ಕೆಲವು ಬದಲಾವಣೆ ಕೋರಿ ಹಿರೇಮ ಗಳೂರು, ದೋಣಿಖಣ, ಚಿಕ್ಕ ಕುರುಬರಹಳ್ಳಿ, ದೊಡ್ಡ ಕುರುಬರಹಳ್ಳಿ, ದಂಟರಮಕ್ಕಿ ಗ್ರಾಮಸ್ಥರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಸಿ ದರು.