ಕನ್ನಡಪ್ರಭ ವಾರ್ತೆ ಮೂಗೂರು ಗ್ರಾಮದ ಉಪ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಎಸ್ಸಿ ಮತ್ತು ಎಸ್ಟಿ ಕುಂದು ಕೊರತೆ ಸಭೆ ನಡೆಯಿತು.ಅಕ್ರಮ ಮದ್ಯ ಮಾರಾಟ ಮೂಗೂರು ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಪೆಟ್ಟಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಗ್ರಾಮದ ಮುಖಂಡರಾದ ಎಂ. ಜಗದೀಶ ಹಾಗೂ ಕುರುಬೂರು ಗ್ರಾಮದ ಪುಟ್ಟಮಾದಯ್ಯ ಹಾಗೂ ಅಕ್ಕಪಕ್ಕದ ಗ್ರಾಮದ ಮುಖಂಡರು ತಿಳಿಸಿದರು. ಅಂಗಡಿಗಳಲ್ಲಿ ಬೆNಗಿನ ಜಾವದಿಂದ ರಾತ್ರಿ 11ರವರೆಗೆ ಮದ್ಯ ಮಾರಾಟ ಮಾಡುತ್ತಾರೆ ಎಂದು ದೂರಿದರು.ವಿದ್ಯಾರ್ಥಿಗಳು ಉದ್ಯೋಗ ಹಾಗೂ ವ್ಯವಸಾಯಕ್ಕೆ ಹೋಗದೆ ಕುಡಿದು ತಮ್ಮ ಆರೋಗ್ಯ ಹಾಗೂ ಭವಿಷ್ಯವನ್ನು ಹಾಳು ಮಾಡಿಕೊಳುತ್ತಿದ್ದಾರೆ ಎಂದು ಸಭೆಯಲ್ಲಿ ತಿಳಿಸಿದರು. ಗ್ರಾಮದ ಮಾಜಿ ಉಪಾಧ್ಯಕ್ಷ ಎಂ.ಬಿ. ಕೃಷ್ಣಸ್ವಾಮಿ, ಕೆ. ಬಸವರಾಜು ಹಾಗೂ ಪಾಪಣ್ಣ ಮಾತನಾಡಿ, ಮೂಗೂರು ಗ್ರಾಮದಲ್ಲಿ ಹಾಗೂ ಅಕ್ಕಪಕ್ಕದ ಗ್ರಾಮಗಳಲ್ಲಿ ಸಹ ಖಾಸಗಿ ಫೈನಾನ್ಸ್ ಸಂಸ್ಥೆಗಳಿಂದ ಸಾಲ ಪಡೆದು ಜನರು ಸಕಾಲದಲ್ಲಿ ಮರುಪಾವತಿ ಮಾಡಲಾಗದೆ ಹೋದರೆ ಸಾರ್ವಜನಿಕರಿಗೆ ರಾತ್ರಿ ಸಮಯದಲ್ಲಿ ಮನೆಗಳಿಗೆ ಬಂದು ಫೈನಾನ್ಸ್ ಸಂಸ್ಥೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದರು. ಗ್ರಾಮದ ಮಹದೇವ ಮೂರ್ತಿ ಮಾತನಾಡಿ, ಮುಖ್ಯ ರಸ್ತೆಗಳಲ್ಲಿ ಆಡ್ಡದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಿ ಪಾದಚಾರಿಗಳಿಗೆ ಹೋಗುವ ವಾಹನಗಳಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ದೂರು ಹೇಳಿದರು. ದೂರುಗಳನ್ನು ಕುರಿತು ಟಿ. ನರಸೀಪುರ ಠಾಣೆಯ ಎಸ್ಐ ಧನಂಜಯ ಮಾತನಾಡಿ, ಪೊಲೀಸ್ ಇಲಾಖೆ ಜೊತೆ ಸಾರ್ವಜನಿಕರು ಕೈಜೋಡಿಸಿದರೆ ಸಮಸ್ಯೆಗಳನ್ನು ಪರಿಹರಿಸಬಹುದು ಹಾಗೂ ಅದಕ್ಕೆ ಪರಿಹಾರ ಕಂಡು ಹಿಡಿಯಬಹುದು ಎಂದರು. ಗ್ರಾಪಂ ಅಧ್ಯಕ್ಷ ಎಂ.ಡಿ. ಲೋಕೇಶ, ಮುಖಂಡರಾದ ಎಂ.ಆರ್. ಸುಂದರ್ ಎಂ ಪಿ ಮರಿಸ್ವಾಮಿ . ಎಂ ರಾಜು. ಎಂ ಜಗದೀಶ ಎಂ .ಬಿ . ಕೃಷ್ಣಸ್ವಾಮಿ. ಕೆ. ಶೇಷಣ್ಣ, ಮಹದೇವಮೂರ್ತಿ, ಸ್ವಾಮಿ ಲಿಂಗರಾಜು, ನಾಗೇಂದ್ರ, ಮಹೇಶ, ಚೇತನ್, ಚಿನ್ನಸ್ವಾಮಿ, ಎಂ.ಎನ್. ರಾಜು, ಜಗದೀಶ, ಅಶೋಕ, ಸಿದ್ದರಾಜು ಮುಖ್ಯಪೇದೆ ಚಂದ್ರಶೇಖರ್, ಸಿದ್ದರಾಜು, ಸತೀಶ, ಪುಟ್ಟಸ್ವಾಮಿ, ಮಹದೇವ ಕುಮಾರ್ ಇದ್ದರು.--------------