ಗ್ರಾಮಸ್ಥರೇ ಅಗತ್ಯ ಸೌಲಭ್ಯಗಳ ಪಟ್ಟಿ ಮಾಡಿಕೊಡಿ

KannadaprabhaNewsNetwork |  
Published : Sep 11, 2026, 03:45 AM IST
ಫೋಟೋ: 10 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಚೋಳಪ್ಪನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿ ಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ತಾಲೂಕಿನ ಚೋಳಪ್ಪನಹಳ್ಳಿ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಡೇರಿ ನಿರ್ಮಾಣ, ಯುವೈಟೆಡ್ ವೇ ಸಂಸ್ಥೆ ಸಹಯೋಗದಲ್ಲಿ 50 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ, 60 ಲಕ್ಷ ವೆಚ್ಚದಲ್ಲಿ 2 ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, 50 ಲಕ್ಷ ಅನುದಾನದಲ್ಲಿ ಸ್ಮಶಾನಕ್ಕೆ ಸಂಪರ್ಕಿಸುವ ಸಿಸಿ ರಸ್ತೆ, ಹೈಮಾಸ್ಟ್‌ ದೀಪ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು

ಹೊಸಕೋಟೆ: ತಾಲೂಕಿನ ಚೋಳಪ್ಪನಹಳ್ಳಿ ಗ್ರಾಮದಲ್ಲಿ 30 ಲಕ್ಷ ವೆಚ್ಚದ ಡೇರಿ ನಿರ್ಮಾಣ, ಯುವೈಟೆಡ್ ವೇ ಸಂಸ್ಥೆ ಸಹಯೋಗದಲ್ಲಿ 50 ಲಕ್ಷ ವೆಚ್ಚದ ಕೆರೆ ಅಭಿವೃದ್ಧಿ, 60 ಲಕ್ಷ ವೆಚ್ಚದಲ್ಲಿ 2 ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, 50 ಲಕ್ಷ ಅನುದಾನದಲ್ಲಿ ಸ್ಮಶಾನಕ್ಕೆ ಸಂಪರ್ಕಿಸುವ ಸಿಸಿ ರಸ್ತೆ, ಹೈಮಾಸ್ಟ್‌ ದೀಪ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಅಗತ್ಯ ಮೂಲ ಸೌಕರ್ಯಗಳನ್ನು ಹಂತಹಂತವಾಗಿ ನೀಡಲಾಗುತ್ತಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಚರ್ಚಿಸಿ ನಿಮ್ಮ ಗ್ರಾಮಕ್ಕೆ ಅಗತ್ಯವಿರುವ ಸೌಲಭ್ಯಗಳ ಪಟ್ಟಿ ಮಾಡಿ ನೀಡಿದಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ಮುಂದಿನ ನವೆಂಬರ್ - ಡಿಸಂಬರ್ ತಿಂಗಳಲ್ಲಿ ಪಂಚಾಯತಿ ಚುನಾವಣೆ ಬರಲಿದೆ. ಇಂದಿನಿಂದಲೇ ಗ್ರಾಮಸ್ಥರು ಸಣ್ಣಪುಟ್ಟ ವೈಮನಸ್ಯಗಳನ್ನು ಬದಿಗಿಟ್ಟು ಗ್ರಾಮದ ಅಭಿವೃದ್ದಿಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದರು.

ಬಮುಲ್ ಹೊಸಕೋಟೆ ಶಿಬಿರದ ಉಪ ವ್ಯವಸ್ಥಾಪಕ ಮಧುಸುದನ್ ಮಾತನಾಡಿ, ಬಮುಲ್ ಕಲ್ಯಾಣ ಟ್ರಸ್ಟ್ ವತಿಯಿಂದ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಹೈಮಾಸ್ಟ್ ದೀಪ ಅಳವಡಿಸಿದ್ದು, ಡೇರಿ ಸ್ವಂತ ಹಣದಲ್ಲಿ 30 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸಲ್ಲಿಸಲಾಗಿದೆ. ಶಾಸಕ ಶರತ್ ಬಚ್ಚೇಗೌಡ, ಬಮುಲ್ ನಿರ್ದೇಶಕ ಬಿವಿ.ಸತೀಶ್‌ಗೌಡರು ಹೈನೋದ್ಯಮದ ಪ್ರೋತ್ಸಾಹಕ್ಕೆ ಸಾಕಷ್ಟು ಒತ್ತು ನೀಡಿ ಅಗತ್ಯ ಸಹಕಾರ ನೀಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ನಿರ್ದೇಶಕ ರಾಜ್ ಗೋಪಾಲ್, ಡೇರಿ ಅಧ್ಯಕ್ಷ ರಾಜಣ್ಣ, ಮುಖಂಡರಾದ ನಾರಾಯಣಗೌಡ, ನಾಗರಾಜ್, ರಾಮಾಂಜಿನಪ್ಪ, ತಮಣ್ಣ, ಮಹೇಶ್‌ ಹಾಜರಿದ್ದರು.

ಫೋಟೋ: 10 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ಚೋಳಪ್ಪನಹಳ್ಳಿ ಡೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು. ಬಮೂಲ್ ನಿರ್ದೇಶಕ ಎಲ್‌ಎನ್‌ಟಿ ಮಂಜುನಾಥ್, ನಿರ್ದೇಶಕ ರಾಜ್ ಗೋಪಾಲ್, ಡೇರಿ ಅಧ್ಯಕ್ಷ ರಾಜಣ್ಣ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭೆ ಅನಾವರಣಕ್ಕೆ ಜ್ಞಾನವೇ ಪ್ರಬಲ ಚೈತನ್ಯ
ಕೈ ಮುಗಿಯುತ್ತೇನೆ ದಸರಾದಲ್ಲಿ ಚಲನಚಿತ್ರೋತ್ಸವ ಕೈಬಿಡದಿರಿ