ಇಂಡಿ ಜಿಲ್ಲೆಗೆ ಆಗ್ರಹಿಸಿ ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork |  
Published : Dec 24, 2023, 01:45 AM ISTUpdated : Dec 24, 2023, 01:46 AM IST
23ಐಎನ್‌ಡಿ3,ಇಂಡಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸಬೆಕು ಎಂದು ಆಗ್ರಹಿಸಿ ಇಂಡಿ ತಾಲೂಕಿನ ಇಂಗಳಗಿ ಹಾಗೂ ಬಬಲಾದ ಗ್ರಾಮಸ್ಥರು ಎಸಿ ಅಬೀದ್ ಗದ್ಯಾಳ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಇಂಡಿ: ಇಂಡಿ ಜಿಲ್ಲೆಯಾಗಬೇಕು ಎಂದು ಒತ್ತಾಯಿಸಿ ತಾಲೂಕಿನ ಇಂಗಳಗಿ, ಬಬಲಾದ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಇಂಡಿ: ಇಂಡಿ ಜಿಲ್ಲೆಯಾಗಬೇಕು ,ಇಂಡಿ ಉಪವಿಭಾಗವನ್ನು ಸಂವಿಧಾನದ ವಿಧಿ 371 ಜೆ ಅಡಿ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ಇಂಗಳಗಿ, ಬಬಲಾದ ಗ್ರಾಮಸ್ಥರು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ಟಿಪ್ಪುಸುಲ್ತಾನ, ಬಸವೇಶ್ವರ ವೃತ್ತದ ಮೂಲಕ ನಡೆದು ತಾಲೂಕು ಆಡಳಿತ ಸೌಧ ತಲುಪಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಇಂಗಳಗಿ ಗ್ರಾಮದ ಮುಖಂಡ ಪ್ರಭು ಹೊಸಮನಿ, ತಾಪಂ ಸದಸ್ಯ ಗಣಪತಿ ಬಾಣಿಕೋಲ ,ಉಮೇಶ ಬಳಬಟ್ಟಿ , ಬಾಪುರಾಯಗೌಡ ಬಿರಾದಾರ, ನಂಜುಂಡಪ್ಪ ವರದಿಯಂತೆ ಇಂಡಿ ತಾಲೂಕು ಗಡಿ ಭಾಗದಲ್ಲಿದ್ದು, ಸಾಕಷ್ಟು ಅಭಿವೃದ್ಧಿಯಾಗಬೇಕಾಗಿದೆ. ಜಿಲ್ಲೆಯಾಗಲು ಇಂಡಿ ಪಟ್ಟಣಕ್ಕೆ ಎಲ್ಲಾ ಅರ್ಹತೆಗಳು, ಮಾನದಂಡಗಳು ಇದ್ದು, ಸರ್ಕಾರ ಕೂಡಲೇ ಇಂಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಅಣ್ಣಪ್ಪ ಅಹಿರಸಂಗ, ಮಲ್ಲಿಕಾರ್ಜುನ ಕುಂಬಾರ, ಸುನೀಲಗೌಡ ಬಿರಾದಾರ, ರಾಜು ಚಾಬುಕಸವಾರ, ಭೀಮಣ್ಣ ಕೌಜಲಗಿ , ಹಣಮಂತ ಅರವತ್ತು, ಸೇರಿದಂತೆ ಇಂಗಳಗಿ, ಬಬಲಾದ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು