ಹಳ್ಳಿಗಳೇ ಇತಿಹಾಸ, ಸಾಂಸ್ಕೃತಿಗೆ ಮೂಲ ಕೇಂದ್ರಗಳು

KannadaprabhaNewsNetwork |  
Published : Sep 11, 2025, 01:00 AM IST
(ಫೋಟೊ 10ಬಿಕೆಟಿ8, ನಮ್ಮೂರ ತಿಳಿಯೋಣ ಬಾರ-1 ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿರುವ ಡಾ. ವಿಜಯಕುಮಾರ. ಎಸ್ ಕಟಿಗಿಹಳ್ಳಿಮಠ ಹಾಗೂ ಇತರರು ) | Kannada Prabha

ಸಾರಾಂಶ

ನಾಡಿನ ಸಾಂಸ್ಕೃತಿಕ ಪರಂಪರೆ ಹಳ್ಳಿಗಳಲ್ಲಿ ಅಡಗಿದೆ. ಈ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿ ಇತಿಹಾಸದಲ್ಲಿ ಸಿಗುವ ಮೂಲ ಆಕರಗಳು ಅದಕ್ಕೆ ಪೂರಕ ಸಾಧನೆಗಳಾಗಿವೆ ಎಂದು ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾಡಿನ ಸಂಸ್ಕೃತಿಕ ಪರಂಪರೆ ಹಳ್ಳಿಗಳಲ್ಲಿ ಅಡಗಿದೆ. ಈ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿ ಇತಿಹಾಸದಲ್ಲಿ ಸಿಗುವ ಮೂಲ ಆಕರಗಳು ಅದಕ್ಕೆ ಪೂರಕ ಸಾಧನೆಗಳಾಗಿವೆ ಎಂದು ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು.

ಸೀಮಿಕೇರಿ ಗ್ರಾಮದಲ್ಲಿ ಹಂಪೆ ಕಟ್ಟಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೂಟ ಹಮ್ಮಿಕೊಂಡಿದ್ದ ನಮ್ಮೂರ ತಿಳಿಯೋಣ ಬಾರ-1 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾಗರಿಕತೆಗಳು ಅರಳಿದ್ದು, ನದಿಗಳ ತೀರದಲ್ಲಿ ಅನಂತರ ಕಾಲಾನುಕ್ರಮದಲ್ಲಿ ಪ್ರಗತಿಯ ಸೋಗಿನಲ್ಲಿ ಹಾಗೂ ಆಧುನಿಕತೆಯ ಭರಾಟೆಯಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಖೇದ ವ್ಯಕ್ತಪಡಿಸಿದರು. ಅದಕ್ಕೆ ನಾವು ಈಗ ಆಧುನಿಕತೆಯೊಂದಿಗೆ ಮೂಲ ಪರಿಕಲ್ಪನೆ ಅರಿತುಕೊಂಡು ನಡೆಯಬೇಕಾಗಿದೆ ಎಂದು ಸೂಚಿಸಿದರು.

ಮುಖ್ಯ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಅಶೋಕ ಕಂದಗಲ್ಲ ಅವರು, ಸಣ್ಣ ಸಣ್ಣ ಸ್ಥಾನಿಕ ಸಂಗತಿಗಳು ಇತಿಹಾಸಕ್ಕೆ ಪುಷ್ಟಿ ನೀಡಿ ಮೌಲ್ಯವರ್ಧನೆಗೆ ಪೂರಕ ಐತಿಹಾಸಿಕ ವಾತಾವರಣ ನಿರ್ಮಿಸಲು ಸಹಕಾರಿಯಾಗಿದೆ. ಗ್ರಾಮಗಳಲ್ಲಿ ಸಿಗುವ ಐತಿಹಾಸಿಕ ಕುರುಹುಗಳಿಂದ ಇತಿಹಾಸ ರಚಿಸಲು ತುಂಬಾ ಸಹಕಾರಿಯಾಗಿದೆ ಎಂದ ಅವರು, ಭಾರತ ದೇಶ ಹಳ್ಳಿಗಳಿಂದ ಕೂಡಿದ ರಾಷ್ಟ್ರ ಆ ಹಳ್ಳಿಗಳಲ್ಲಿ ಸಿಗುವ ಐತಿಹಾಸಿಕ ಕುರುಹುಗಳಿಂದ ಇತಿಹಾಸದ ಕಾಲಾನುಕ್ರಮ ವ್ಯವಸ್ಥಿತವಾಗಿ ರೂಪಿಸಲು ಸಹಾಯಕಾರಿಯಾಗಿದೆಯೆಂದ ಅವರು, ವೀರಗಲ್ಲುಗಳು, ಮಾಸ್ತಿ ಗಲ್ಲುಗಳು ತಿಳಿಸುವ ವಿಚಾರಗಳು ನಾಡಿನ ಜನರ ಶೌರ್ಯ ಪರಾಕ್ರಮ ವಿಶ್ಲೇಷಿಸಲು ತುಂಬಾ ಸಹಾಯಕಾರಿಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮದ ಹಿರಿಯರಾದ ಮಹದೇವಪ್ಪ ತಳವಾರ ಮಾತನಾಡಿ, ಹಂಪೆಕಟ್ಟೆ ಸಾಹಿತ್ಯ ಹಾಗೂ ಸಂಸ್ಕೃತಿಕ ಕೂಟ ಹಾಗೂ ಗ್ರಾಮದಲ್ಲಿರುವ ಸಂಸ್ಕೃತಿಕ ಘಟಕಗಳನ್ನು ಸಂರಕ್ಷಿಸುವ ಕೆಲಸವನ್ನು ಗ್ರಾಪಂಚಾಯಿತಿಯಿಂದ ಮಾಡಲಾಗುವುದೆಂದು ಆಶ್ವಾಸನೆ ನೀಡಿದರು.

ಸಂವಾದ ಕಾರ್ಯಕ್ರಮದಲ್ಲಿ ಎಚ್.ಐ. ನಾಯಕ, ಕಲ್ಲಪ್ಪ ಸಿರಬಡಗಿ, ರಮೇಶ ತಳವಾರ, ಶಂಕ್ರಪ್ಪ ಅಗಸರ, ಕೆಂಚಪ್ಪ ತೆಗ್ಗಿ, ಈರಣ್ಣ ಶಿ.ನಾಯಕ, ಬಸವರಾಜ ಕುಂಬಾರ, ಈರಪ್ಪ ಜಂಗನ್ನವರ, ಬಾಲಪ್ಪ ಜಮ್ಮನಕಟ್ಟಿ, ರಮೇಶ ತೆಗ್ಗಿ ಭಾಗವಹಿಸಿದ್ದರು. ಹನುಮಂತರಾವ ದೇಸಾಯಿ, ಮಲ್ಲಿಕಾರ್ಜುನ ತಳವಾರ, ಪ್ರಕಾಶ ಖಾಡೆ ಉಪಸ್ಥಿತರಿದ್ದರು.

ಗುರುನಾಥ ತಳವಾರ ಗುರುತಿಸಿರುವ ವೀರಗಲ್ಲು ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ವಿಠ್ಠಲ ತಳವಾರ ಪ್ರಾರ್ಥಿಸಿದರು. ಬಸವರಾಜ ನಾಯಕ ಸ್ವಾಗತ ಗೀತೆ ಹಾಡಿದರು. ವಿರುಪಾಕ್ಷಿ ಗಂಗೂರ ಸ್ವಾಗತಿಸಿದರು. ಮುತ್ತಣ್ಣ ಇಂಗಳಗಿ ಪರಿಚಯಿಸಿದರು. ಬಸವರಾಜ ನಾಯಕ ನಿರೂಪಿಸಿದರು. ಮಲ್ಲಿಕಾರ್ಜುನ ತಳವಾರ ವಂದಿಸಿದರು. ಶಿವಣ್ಣ ಅವರಾದಿ, ಬಸಪ್ಪ ಚಿನ್ನಾಪುರ, ರಾಮನ್ನ ಸುನಗದ, ಮಲ್ಲಪ್ಪ ಕಪಲಿ, ಗ್ರಾಮದ ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!