ನಾಳೆ ಪಟ್ಟಲದಮ್ಮ ದೇಗುಲದ ವಿಮಾನಗೋಪುರ ಲೋಕಾರ್ಪಣೆ

KannadaprabhaNewsNetwork |  
Published : Feb 16, 2024, 01:48 AM IST
15ಕೆಎಂಎನ್ ಡಿ21ಪಾಂಡವಪುರ ತಾಲೂಕಿನ ಹೆಗ್ಗಡಹಳ್ಳಿಯಲ್ಲಿ ಜೀರ್ಣೋದ್ಧಾರಕ್ಕೆ ಸಿದ್ದಗೊಂಡಿರುವ ಶ್ರೀಪಟ್ಟಲದಮ್ಮ ದೇವಸ್ಥಾನ. | Kannada Prabha

ಸಾರಾಂಶ

ನಾಳೆ ಪಟ್ಟಲದಮ್ಮ ದೇಗುಲದ ವಿಮಾನಗೋಪುರ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಹೆಗ್ಗಡಹಳ್ಳಿ ಹೊರವಲಯದ ಕಾವೇರಿ-ಹೇಮಾವತಿ ಹಾಗೂ ಲೋಕಪಾವನಿ ಸಂಗಮದ ದಡದಲ್ಲಿರುವ ಶ್ರೀಪಟ್ಟಲದಮ್ಮನವರ ವಿಮಾನ ಗೋಪುರ, ಶ್ರೀ ಬೋರೇದೇವರ ದೇವಸ್ಥಾನ ಜೀರ್ಣೋದ್ಧಾರ ಹಾಗೂ ಸಮುದಾಯ ಭವನ, ಬಯಲು ರಂಗಮಂದಿರ ಲೋಕಾರ್ಪಣೆ ಕಾರ್‍ಯಕ್ರಮವು ಫೆ.17 ರಂದು ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಕಾರ್‍ಯದರ್ಶಿ ಎಚ್.ಜೆ. ರಾಮಕೃಷ್ಣ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ಬವ ಮೂರ್ತಿ ಶ್ರೀಪಟ್ಟಲದಮ್ಮ ದೇವಿಗೆ ಹಲವು ವರ್ಷಗಳ ಇತಿಹಾಸವಿದೆ. ಗ್ರಾಮಸ್ಥರು ಸೇರಿ ಪಟ್ಟಣದಮ್ಮ ದೇವಸ್ಥಾನದ ವಿಮಾನ ಗೋಪುರ ನಿರ್ಮಿಸಿದ್ದು ಜೀರ್ಣೋದ್ಧಾರ ಮಾಡಲಾಗುತ್ತಿದೆ ಎಂದರು.

ದೇವಸ್ಥಾನದ ಆವರಣದಲ್ಲಿಯೇ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅನುದಾನ ಹಾಗೂ ಗ್ರಾಮಸ್ಥರ ಸಹಕಾರದಿಂದ ನಿರ್ಮಾಣಗೊಂಡಿರುವ ಸಮುದಾಯ ಭವನವನ್ನು ಸಹ ಉದ್ಘಾಟಿಸಲಾಗುತ್ತಿದೆ. ಗ್ರಾಮದ ಬಯಲು ರಂಗ ಮಂದಿರ ಉದ್ಘಾಟನೆ ಹಾಗೂ ಗ್ರಾಮದ ಹೊರವಲಯದ ಶ್ರೀಬೋರೇದೇವರ ಸ್ಥಾನದ ಜೀರ್ಣೋದ್ಧಾರವನ್ನು ಸಹ ನಡೆಸಲಾಗುತ್ತಿದೆ ಎಂದು ಹೇಳಿದರು.

ಕಾರ್‍ಯಕ್ರಮದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧಪಡಿಸಲಾಗಿದೆ. 5 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದರು.

ಫೆ.16ರ ಸಂಜೆ ಪಟ್ಟಲದಮ್ಮ ದೇವರ ಉತ್ಸವ ಗ್ರಾಮದಲ್ಲಿ ವಿಜೃಂಭಣೆಯಿಂದ ಜರುಗಲಿದೆ. ಕಾರ್‍ಯಕ್ರಮದ ಅಂಗವಾಗಿ ಗಿಚ್ಚಿಗಿಲಿಗಲಿ ಖ್ಯಾತಿಯ ಕಲಾವಿದರಾದ ಚಂದ್ರಪ್ರಭ ಹಾಗೂ ಗೊಬ್ಬರಗಾಲ ಅವರಿಂದ ಹಾಸ್ಯ ಮನರಂಜನೆ ಹಾಗೂ ಶಾಂತ ನಂಜುಂಡಸ್ವಾಮಿ ತಂಡದಿಂದ ಸಾಂಸ್ಕೃತಿಕ ಕಾರ್‍ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಕೊಮ್ಮೇರಹಳ್ಳಿ ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀಪುರುಷೋತ್ತಮನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಅತಿಥಿಗಳಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ದರ್ಶನ್‌ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಪಂ ಮಾಜಿ ಸದಸ್ಯ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್. ಇಂದ್ರೇಶ್, ಗ್ರಾಪಂ ಅಧ್ಯಕ್ಷೆ ಭಾಗ್ಯ, ಉಪಾಧ್ಯಕ್ಷ ರಂಗಸ್ವಾಮಿ, ಗ್ರಾಪಂ ಸದಸ್ಯ ಹಾಗೂ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರ ಎಚ್.ಜೆ. ರಾಮಕೃಷ್ಣ, ಜನತಾಬಂಡಾರ ಮಾಲೀಕ ಎಚ್.ಇ. ರಾಮಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎನ್.ಉದಯಕುಮಾರ್, ಜೆಡಿಎಸ್ ಮುಖಂಡ ಚಿಕ್ಕಾಡೆ ಚೇತನ್, ಲಯನ್ ಕ್ಲಬ್ ಮಾಜಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಪಿಡಿಒ ಪುರುಷೋತ್ತಮ್, ಚಿಕ್ಕಹೊನ್ನೇಗೌಡ, ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿಮಹೇಶ್, ಮಾಜಿ ಸದಸ್ಯ ಈರೇಗೌಡ, ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷೆ ಜಯಶೀಲಮ್ಮ, ಉಪಾಧ್ಯಕ್ಷ ಸಿ.ನಾಗರಾಜು, ಕೆ.ಎಂ. ಪುಟ್ಟಸ್ವಾಮಿಗೌಡ, ಡೇರಿ ಅಧ್ಯಕ್ಷೆ ದೇವಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಕೇಬಲ್ ಚಂದ್ರು ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಯಜಮಾನರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...