36 ಬಾರಿ ಸಂಚಾರಿ ನಿಯಮ ಉಲ್ಲಂಘನೆ: ₹9 ಸಾವಿರ ದಂಡ

KannadaprabhaNewsNetwork |  
Published : Sep 02, 2025, 01:00 AM IST
1ಡಿಡಬ್ಲೂಡಿ1ಟ್ರಾಫಿಕ್‌ ಪ್ರಕರಣಗಳ  ಮೇಲಿನ ಶೇ.50ರ ರಿಯಾಯ್ತಿ ಬಳಸಿಕೊಂಡ ಬೈಕ್‌ ಸವಾರನೊಬ್ಬ ಟ್ರಾಫಿಕ ಪೊಲೀಸರಿಗೆ ದಂಡ ತುಂಬುತ್ತಿರುವುದು.  | Kannada Prabha

ಸಾರಾಂಶ

ಕಳೆದ ಆ. 23 ರಿಂದ ಸೆ. 12ರ ವರೆಗೆ ಈ ಅವಕಾಶ ಕಲ್ಪಿಸಿದ್ದು, ಯಾರ ವಾಹನಗಳ ಮೇಲೆ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಿವೆಯೋ ಅವರು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಕರ್ನಾಟಕ ಓನ್‌ ಸೆಂಟರ್‌, ಟ್ರಾಫಿಕ್ ಎಸೈ, ಸಿಪಿಐ ಅವರ ಬಳಿ ಬಂದು ದಂಡದ ಹಣ ಪಾವತಿ ಮಾಡಬಹುದು.

ಧಾರವಾಡ: ಸಂಚಾರಿ ನಿಯಮಗಳನ್ನು ಪಾಲಿಸದೇ ದಂಡಕ್ಕೆ ಒಳಗಾದವರಿಗೆ ರಾಜ್ಯ ಗೃಹ ಇಲಾಖೆಯು ಅರ್ಧ ದಂಡ ತುಂಬಲು ಅವಕಾಶ ನೀಡಿದ್ದರ ಪ್ರಯೋಜನವನ್ನು ಇಲ್ಲೊಬ್ಬ ಬೈಕ್‌ ಸವಾರ ಸರಿಯಾಗಿಯೇ ಉಪಯೋಗಿಸಿಕೊಂಡಿದ್ದಾನೆ.

ತಾಲೂಕಿನ ನರೇಂದ್ರ ಗ್ರಾಮದ ಕರೆಪ್ಪ ಕಾಳೆ ಎಂಬುವರು ಬರೋಬ್ಬರಿ 36 ಬಾರಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ₹18 ಸಾವಿರ ದಂಡ ಕಟ್ಟಬೇಕಿತ್ತು. ಧಾರವಾಡದ ಹಳೇ ಬಸ್‌ ನಿಲ್ದಾಣ ಹಾಗೂ ಸುತ್ತಮುತ್ತಲೂ ಹೆಲ್ಮೆಟ್‌ ಹಾಗೂ ಇತರೆ ಸಂಚಾರಿ ನಿಯಮಗಳ ಪಾಲನೆ ಮಾಡದ ಹಿನ್ನೆಲೆಯಲ್ಲಿ ಟ್ರಾಫಿಕ್‌ ಪೊಲೀಸರು ಈತನ ವಾಹನ ನಂಬರ್‌ ಆಧರಿಸಿ ಪ್ರಕರಣಗಳನ್ನು ದಾಖಲು ಮಾಡಿದ್ದರು.

ಹಲವು ಬಾರಿ ದಂಡ ಕಟ್ಟಲು ಸೂಚಿಸಿದ್ದರೂ ನಿರ್ಲಕ್ಷ್ಯ ಮಾಡಿದ್ದ ಕೆರಪ್ಪ, ಇದೀಗ ದಂಡ ತುಂಬಲು ಶೇ. 50ರ ರಿಯಾಯ್ತಿ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತನಾಗಿ ಟ್ರಾಫಿಕ್‌ ಪೊಲೀಸರ ಬಳಿ ಬಂದು ಕರೆಪ್ಪ ₹9 ಸಾವಿರ ದಂಡ ತುಂಬಿ ದಂಡದಿಂದ ಮುಕ್ತನಾಗಿದ್ದಾನೆ ಎಂದು ಟ್ರಾಫಿಕ್‌ ಇನಸ್ಪೆಕ್ಟರ್‌ ಶ್ರಿನಿವಾಸ ಮೇಟಿ ತಿಳಿಸಿದರು.

ಇದರೊಂದಿಗೆ ಕಳೆದ ಆ. 23 ರಿಂದ ಸೆ. 12ರ ವರೆಗೆ ಈ ಅವಕಾಶ ಕಲ್ಪಿಸಿದ್ದು, ಯಾರ ವಾಹನಗಳ ಮೇಲೆ ಸಂಚಾರಿ ನಿಯಮ ಉಲ್ಲಂಘನೆಯ ಪ್ರಕರಣಗಳಿವೆಯೋ ಅವರು ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು. ಕರ್ನಾಟಕ ಓನ್‌ ಸೆಂಟರ್‌, ಟ್ರಾಫಿಕ್ ಎಸೈ, ಸಿಪಿಐ ಅವರ ಬಳಿ ಬಂದು ದಂಡದ ಹಣ ಪಾವತಿ ಮಾಡಬಹುದು. ಧಾರವಾಡ ಟ್ರಾಫಿಕ್ ಠಾಣೆ ವ್ಯಾಪ್ತಿಯಲ್ಲಿ 20 ಸಾವಿರ ಪ್ರಕರಣಗಳು ದಾಖಲಾಗಿದ್ದು, ಹೆಲ್ಮೆಟ್‌, ಸಂಚಾರದಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ಸಿಗ್ನಲ್‌ ಜಂಪ, ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಬೇರೆ ವಾಹನಗಳ ಚಾಲನೆ ಅಂತಹ ಪ್ರಕರಣಗಳಲ್ಲಿ ₹5 ಕೋಟಿ ಬಾಕಿ ಇದೆ ಎಂದು ಶ್ರೀನಿವಾಸ ಮೇಟಿ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ