ಕಾಶ್ಮೀರದಲ್ಲಿ ಉಗ್ರಹ ಅಟ್ಟಹಾಸ ಖಂಡನೀಯ: ರಮೇಶ್‌ ಕಾಂಚನ್‌

KannadaprabhaNewsNetwork | Published : Apr 24, 2025 12:05 AM

ಸಾರಾಂಶ

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಕನ್ನಡಿಗರು ಸೇರಿದಂತೆ 26 ಜನರ ಮಾರಣ ಹೋಮ ನಡೆಸಿದ ಭಯೋತ್ಪಾದಕರ ಹೇಯ ಕೃತ್ಯ ತೀರಾ ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಮೂವರು ಕನ್ನಡಿಗರು ಸೇರಿದಂತೆ 26 ಜನರ ಮಾರಣ ಹೋಮ ನಡೆಸಿದ ಭಯೋತ್ಪಾದಕರ ಹೇಯ ಕೃತ್ಯ ತೀರಾ ಖಂಡನೀಯ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಭಯೋತ್ಪಾದಕರ ಈ ಭೀಕರ ದಾಳಿಯನ್ನು ಇಡೀ ದೇಶದ ಜನತೆ ಒಕ್ಕೊರಲಿನಿಂದ ಬಲವಾಗಿ ಖಂಡಿಸುತ್ತಿದ್ದಾರೆ. ಈ ದುರ್ಘಟನೆಯಲ್ಲಿ ಸಾವಿಗೀಡಾದವರಿಗೆ ತೀವ್ರ ಸಂತಾಪ ಸೂಚಿಸುತ್ತ ಗಾಯಗೊಂಡವರು ಅದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.

ಹಾಗೆಯೇ ಕಾಶ್ಮೀರದಲ್ಲಿ ಈ ದುರ್ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಅಧಿಕಾರಿಗಳ ಸಭೆ ನಡೆಸಿ ಅಲ್ಲಿನ ಮಾಹಿತಿ ಪಡೆದು ಸಚಿವ ಸಂತೋಷ್ ಲಾಡ್ ಸಹಿತ ಅಧಿಕಾರಿಗಳ ತಂಡವನ್ನು ಅಲ್ಲಿಗೆ ಕಳುಹಿಸಿ ಕನ್ನಡಿಗರ ರಕ್ಷಣೆಗೆ ಕೂಡಲೇ ಕಾರ್ಯಪ್ರವತ್ತರಾಗುವಂತೆ ಸೂಚಿಸಿರುತ್ತಾರೆ. ಈ ಘೋರ ಕೃತ್ಯದ ಹಿಂದಿರುವ ಎಲ್ಲ ದುಷ್ಟ ಶಕ್ತಿಗಳನ್ನು ಸದೆಬಡಿಯುವಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ. ದೇಶ ರಕ್ಷಣೆಯ ವಿಚಾರದಲ್ಲಿ ಪಕ್ಷ, ಧರ್ಮಗಳನ್ನು ಬದಿಗಿಟ್ಟು ಎಲ್ಲರೂ ಒಂದಾಗಿ ರಾಷ್ಟ್ರದ ರಕ್ಷಣೆಗೆ ನಿಲ್ಲಲ್ಲಿದ್ದಾರೆ ಎಂದು ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

..........

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಉಗ್ರವಾದಿಗಳಿಂದ ನಡೆದಿರುವ ಹೃದಯ ವಿದ್ರಾವಕ ಘಟನೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಖಂಡಿಸಿದ್ದಾರೆ.ಈ ಘಟನೆಯಿಂದ ಆಮಾಯಕರ ಜೀವಗಳನ್ನು ಬಲಿಯಾಗುವುದರೊಂದಿಗೆ ಅನೇಕ ಕುಟುಂಬಗಳನ್ನು ಧ್ವಂಸಗೊಂಡಿವೆ. ಇಂತಹ ಹಿಂಸಾಚಾರಗಳು ಸಂಪೂರ್ಣವಾಗಿ ಅಮಾನವೀಯವಾಗಿದ್ದು, ನ್ಯಾಯ, ಘನತೆ ಮತ್ತು ಶಾಂತಿಯನ್ನು ಬಯಸುವ ಸಮಾಜದಲ್ಲಿ ಹಿಂಸೆಗೆ ಸ್ಥಾನವಿಲ್ಲ. ಪ್ರತಿಯೊಂದು ಜೀವವೂ ಕೂಡ ಅಮೂಲ್ಯವಾಗಿದ್ದು ಹಿಂಸಾಚಾರದಿಂದ ಉಂಟಾಗುವ ಜೀವ ನಷ್ಟವು ನಮ್ಮ ಸಾಮೂಹಿಕ ಆತ್ಮಸಾಕ್ಷಿಗೆ ಆಗುವ ಗಾಯವಾಗಿದೆ ಎಂದವರು ಹೇಳಿದ್ದಾರೆ.‘ಶಾಶ್ವತ ಶಾಂತಿಯ ನಿಜವಾದ ಅಡಿಪಾಯವೇ ಸಹೋದರತ್ವ’ ಎಂದು ಪವಿತ್ರ ಪೋಪ್ ಫ್ರಾನ್ಸಿಸ್ ನಮಗೆ ಆಗಾಗ್ಗೆ ನೆನಪಿಸಿದ್ದಾರೆ. ಈ ಮಾತುಗಳು ನಂಬಿಕೆಯ ಜನರಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಮತ್ತು ಸಹಾನುಭೂತಿ ಮತ್ತು ಪರಸ್ಪರ ಗೌರವದಲ್ಲಿ ನೆಲೆಗೊಂಡ ಭವಿಷ್ಯವನ್ನು ನಿರ್ಮಿಸುವ ತುರ್ತು ಅಗತ್ಯ ನೆನಪಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Share this article