ವಕ್ಫ್ ತಿದ್ದುಪಡಿ ಕಾಯ್ದೆ ಕೈಬಿಡದಿದ್ದರೆ ಉಗ್ರ ಪ್ರತಿಭಟನೆ

KannadaprabhaNewsNetwork |  
Published : Jul 06, 2025, 01:48 AM IST
4ಕೆಡಿವಿಜಿ4, 5-ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ, ತಕ್ಷಣವೇ ತಿದ್ದುಪಡಿ ಕಾಯ್ದೆ ಕೈಬಿಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ದಾವಣಗೆರೆಯಲ್ಲಿ ಶುಕ್ರವಾರ ಮುಸ್ಲಿಂ ಸಮಾಜ, ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಿದವು. | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ವಿರೋಧಿಸಿ, ತಕ್ಷಣ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ದಾವಣಗೆರೆ ತಂಜೀಮ್‌ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್, ಮುಸ್ಲಿಂ ಒಕ್ಕೂಟದಿಂದ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಲಾಯಿತು.

- ತಂಜೀಮ್‌ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್, ಮುಸ್ಲಿಂ ಒಕ್ಕೂಟ ಎಚ್ಚರಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ-2025 ಅನ್ನು ವಿರೋಧಿಸಿ, ತಕ್ಷಣ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ದಾವಣಗೆರೆ ತಂಜೀಮ್‌ ಉಲ್ ಮುಸ್ಲಿಮೀನ್ ಫಂಡ್ ಅಸೋಸಿಯೇಷನ್, ಮುಸ್ಲಿಂ ಒಕ್ಕೂಟದಿಂದ ನೇತೃತ್ವದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟಿಸಲಾಯಿತು.

ನಗರದ ಮದೀನಾ ಮಸೀದಿ ಬಳಿಯಿಂದ ಹಾಗೂ ಚಾರ್ಲಿ ಪೈಲ್ವಾನ್ ಆಟೋ ನಿಲ್ದಾಣದಿಂದ ಎಸ್ಸೆಸ್ಸೆಂ ನಗರದ ಹೊಸ ಖಬರಸ್ಥಾನ ಬಳಿ ಹಾಗೂ ಹಳೇ ಪಿ.ಬಿ. ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ವಕ್ಫ್ ತಿದ್ದುಪಡಿ ಕಾಯ್ದೆ-2025 ಕೈಬಿಡುವಂತೆ ಘೋಷಣೆಗಳನ್ನು ಕೂಗಲಾಯಿತು.

ಸಮಾಜದ ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದ ವಕ್ಫ್ ತಿದ್ದುಪಡಿ ಕಾಯ್ದೆ-2025 ತಕ್ಷಣ ಹಿಂಪಡೆಯಬೇಕು. ಮುಸ್ಲಿಮರ ಸಬಲೀಕರಣಕ್ಕಾಗಿ ದಾನ ಮಾಡಿದ ಜಮೀನು ವಕ್ಫ್ ಆಸ್ತಿಯಾಗಿದೆ. ವಕ್ಫ್‌ಗೆ ಸೇರಿದ ಜಮೀನುಗಳನ್ನು ಯಾರಿಂದಲೂ, ಯಾರೂ ಕಬಳಿಸಿಲ್ಲ. ಯಾರಿಂದಲೋ ಕಬಳಿಸಿದ ಜಮೀನು ವಕ್ಫ್ ಆಸ್ತಿಯಾಗಲು ಸಾಧ್ಯವೂ ಇಲ್ಲ. ಧರ್ಮದ ಗೋಡೆ ಬದಿಯಲ್ಲಿಟ್ಟು, ಎಲ್ಲ ಭಾರತೀಯರು ಹೋರಾಟಕ್ಕೆ ಕೈ ಜೋಡಿಸಬೇಕು. ಇಂದು ಮುಸ್ಲಿಮರು ಸರ್ಕಾರದ ಗುರಿಯಾಗಿದ್ದರೆ, ನಾಳೆ ಎಲ್ಲ ಶೋಷಿತ, ದಮನಿತ ವರ್ಗಗಳು ಗುರಿಯಾಗಬಹುದು ಎಂದು ಎಚ್ಚರಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಈಗಾಗಲೇ ವಕ್ಫ್ ತಿದ್ದುಪಡಿ ಕಾಯ್ದೆ-2025ರ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಇನ್ನೂ ದೊಡ್ಡಮಟ್ಟದ ಹೋರಾಟ ರೂಪಿಸುತ್ತೇವೆ ಎಂದು ನೇತೃತ್ವ ವಹಿಸಿದ್ದ ಮುಖಂಡರು ಘೋಷಿಸಿದರು.

ಪ್ರತಿಭಟನೆಯಲ್ಲಿ ಮೌಲಾನಾ ನಸೀರ್ ಅಹಮ್ಮದ್, ತಂಜೀಮ್‌ ಅಧ್ಯಕ್ಷ ದಾದು ಸೇಟ್, ಶಂಷುದ್ದೀನ್ ರಜ್ವಿ, ಕಾರ್ಯದರ್ಶಿ ಮೊಹಮ್ಮದ್ ಜಬೀವುಲ್ಲಾ. ಸಾಬಿರ್ ಅಲಿ, ಖಾದರ್ ಬಾಷಾ ರಜ್ವಿ, ವಕೀಲ ಶೌಕತ್ ಅಲಿ, ಮಟನ್ ಮಹಮ್ಮದ್ ಅಲಿ, ಇಮ್ರಾನ್ ರಜಾ ಮತ್ತಿತರರು ಪಾಲ್ಗೊಂಡಿದ್ದರು.

- - -

-4ಕೆಡಿವಿಜಿ4, 5:

ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ ತಕ್ಷಣವೇ ತಿದ್ದುಪಡಿ ಕಾಯ್ದೆ ಕೈಬಿಡುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಕರೆ ಮೇರೆಗೆ ದಾವಣಗೆರೆಯಲ್ಲಿ ಶುಕ್ರವಾರ ಮುಸ್ಲಿಂ ಸಮಾಜ, ಸಂಘಟನೆಗಳಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಯಿತು.

PREV