ವಿರಾಜಪೇಟೆ: ವಿಶೇಷ ಅನುದಾನ ಕಾಮಗಾರಿಗೆ ಚಾಲನೆ

KannadaprabhaNewsNetwork |  
Published : Oct 28, 2025, 12:44 AM IST
ಚಿತ್ರ : 25ಎಂಡಿಕೆ4 : ರು.20 ಕೋಟಿಗಳ ವಿಶೇಷ ಅನುದಾನಗಳ ಕಾಮಗಾರಿ ಚಾಲನೆ ನೀಡಿದ ಶಾಸಕ ಎ.ಎಸ್. ಪೊನ್ನಣ್ಣ.  | Kannada Prabha

ಸಾರಾಂಶ

ವಿಶೇಷ ಮುತುವರ್ಜಿಯಿಂದ ಮಂಜೂರಾದ 20 ಕೋಟಿ ರು.ಗಳ ವಿಶೇಷ ಅನುದಾನ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ಸರ್ಕಾರದ ಎಸ್.ಎಫ್.ಸಿ ಅನುದಾನದಲ್ಲಿ, ವಿರಾಜಪೇಟೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆಯ್ದ ವಾರ್ಡ್ ಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ವಿಶೇಷ ಮುತುವರ್ಜಿಯಿಂದ ಮಂಜೂರಾದ ರು.20 ಕೋಟಿಗಳ ವಿಶೇಷ ಅನುದಾನಗಳ ಕಾಮಗಾರಿಗಳಿಗೆ ಕಲ್ಲು ಬಾಣೆ, ತಿಮ್ಮಯ್ಯ ಬಡಾವಣೆ, ಶಿವಕೇರಿ, ಬೋಯಿಕೇರಿ, ಗಾಂಧಿ ನಗರ, ಮಹಿಳಾ ಸಮಾಜ, ಸುಣ್ಣದ ಬೀದಿ, ನಿಸರ್ಗ ಬಡಾವಣೆ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.

ಪುರಸಭಾ ವ್ಯಾಪ್ತಿಯ ಪ್ರಜೆಗಳಿಗೆ ಅನುಕೂಲ ಆಗಲಿ ಎಂದು ಶಾಸಕರು ಈ ಭಾಗದ ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಹಲವು ವಿಶೇಷ ಅನುದಾನಗಳನ್ನು ಒದಗಿಸಿದ್ದು, ಇದೀಗ ಎಸ್ ಎಫ್ ಸಿ ಅನುದಾನ ಮೂಲಕ ಮತ್ತಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷ ಮದಂಡ ತಿಮ್ಮಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷ ಜಲೀಲ್, ಪೂರ್ಣಿಮಾ, ಪುರಸಭೆ ಸದಸ್ಯರು ದಿನೇಶ್, ಮತೀನ್, ರಾಫಿ, ರಾಜೇಶ್, ಪೃಥ್ವಿನಾಥ್, ಅತಿಫ್ ಮನ್ನ, ರವಿ, ಮೋಹನ್, ನಿಸರ್ಗ, ರಜಿನಿಕಾಂತ್, ಬೆನ್ನಿ ಆಗಸ್ಟಿನ್, ಹಮೀದ್, ಜಗತ್, ಜಗದೀಶ್, ಸುಮಂತ್, ಅಯ್ಯಪ್ಪ, ಸಲಾಂ, ಜಾಫರ್, ಫಾತಿಮಾ, ರಾಜೇಶ್ ನಾಯರ್, ಶಶಿ, ಜೋಕಿಮ್, ನರೇಂದ್ರ ಕಾಮತ್, ಚೆಕು, ಕುಂಡಚ್ಚಿರ ಮಂಜು ದೇವಯ್ಯ, ಹರೀಶ್, ಮಂಜುನಾಥ್, ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಶಬೀರ್, ಬೋಪಯ್ಯ, ಸೂರಿ, ಕಾಳಮಾಡ ಬೇಬಿ, ಅಮುಣಿಚಂಡ ರವಿ, ಅಯೂಬ್, ರಾಕೇಶ್ ಚುಮ, ಸಚಿನ್, ಡಿಸಿಸಿ ಸದಸ್ಯರು ಸತೀಶ್ ಉಪಸ್ಥಿತರಿದ್ದರು.

PREV

Recommended Stories

ವಾಲ್ಮೀಕಿಗೆ ದೇವರ ಪಟ್ಟ ಕೊಡದಿರುವುದು ದುರಂತ: ಡಾ.ಗೋಪಾಲ
ಚರ್ಚ್‌ನಲ್ಲಿ ನಡೆದಿರುವುದು ಆತ್ಮಹತ್ಯೆಯಲ್ಲ, ಕೊಲೆ: ಆರೋಪ