ಉಲುಕ್ ಉಪ್ಪಿನಂಗಡಿ
ನಮ್ಮಂತೆ ಪ್ರಾಣಿಗಳಿಗೂ ಹಸಿವು ಇದೆ.. ಬದುಕು ಇದೆ, ಭಾವನೆಗಳಿಗೆ ಎನ್ನುತ್ತಾರೆ ಅನಾಥ ಮೂಕಪ್ರಾಣಿಗಳ ಪಾಲಿಗೆ ಸಂರಕ್ಷಕನಾಗಿರುವ ಎಂ.ಕೆ. ವಿರಂಜಯ್ ಹೆಗ್ಡೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಜೆಗೋಳಿ ಮುಡಾರ್ ಗ್ರಾಮದ ಸುಮ್ಮಬಂಡಸಾಲೆಗೆ ಒಮ್ಮೆ ಭೇಟಿ ನೀಡಬೇಕು. ಅಲ್ಲಿ ೩೫೦ಕ್ಕೂ ಹೆಚ್ಚು ವಿವಿಧ ಸ್ಥಿತಿಯಲ್ಲಿರುವ ನಾಯಿಗಳು, ಅಂಗಊನಗೊಂಡ ದನಕರುಗಳನ್ನು ಆರೈಕೆ ಮಾಡುವ ಅಹಿಂಸಾ ಎನಿಮಲ್ ಕೇರ್ ಟ್ರಸ್ಟ್ ಎಂಬ ಸಂಸ್ಥೆ ಕಾಣಿಸುತ್ತದೆ. ಅಪಘಾತಕ್ಕೀಡಾಗಿ ಅಂಗವೈಕಲ್ಯತೆಗೆ ಒಳಗಾದ ನಾಯಿಗಳ್ನು ಚಿಕಿತ್ಸೆ ನೀಡಿ ಇಲ್ಲಿ ಆರೈಕೆ ಮಾಡಲಾಗುತ್ತಿದೆ. ಕಂಡ ಕಂಡವರ ಮೇಲೇರಿ ಹೋಗುವ ಆಕ್ರಮಣಕಾರಿ ಸ್ವಭಾವದ ನಾಯಿಗಳನ್ನು ಕೊಲ್ಲುವ ಅನಿವಾರ್ಯತೆ ಉಂಟಾದಾಗ ಕೊಲ್ಲಬೇಡಿ ಅವುಗಳನ್ನು ತಂದುಕೊಡಿ ಎನ್ನುತ್ತಾರೆ ಎಂ.ಕೆ. ವಿರಂಜಯ್ ಹೆಗ್ಡೆ ಆಲಿಯಾಸ್ ವೀರು ಜೈನ್. ಇವರು ಅನಾಥ, ಅನಾರೋಗ್ಯಪೀಡಿತ ಮೂಕಪ್ರಾಣಿಗಳ ಪಾಲಿಗೆ ನೈಜ ರಕ್ಷಕರಾಗಿದ್ದಾರೆ.ಬಾಲ್ಯದಿಂದಲೇ ಪ್ರಾಣಿಗಳ ಬಗ್ಗೆ ಕಾಳಜಿ: ಪ್ರಾಣಿ ಮೇಲಿನ ಪ್ರೀತಿ, ಬೀದಿಗಳಲ್ಲಿ ಅಪಘಾತಕ್ಕೀಡಾಗಿ ಕೈಕಾಲು ಮುರಿದುಕೊಂಡು ವೇದನೆ ಪಡುವ ಮೂಕಪ್ರಾಣಿಗಳ ಬಗ್ಗೆ ಇವರಿಗೆ ಬಾಲ್ಯದಿಂದಲೇ ಆಸಕ್ತಿ. ಕೊರೋನಾ ಲಾಕ್ ಡೌನ್ ಕಾರಣದಿಂದ ಎಲ್ಲೆಡೆ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಾಗ ಬೀದಿ ನಾಯಿಗಳಿಗೆ ತಿನ್ನಲು ಏನೂ ಸಿಗುತ್ತಿಲ್ಲವೆಂಬುದನ್ನು ಅರಿತ ಇವರು ಬೇಕರಿಗಳಿಂದ ತಿಂಡಿ ಖರೀದಿಸಿ ಪರಿಸರದ ಮೂರು ಗ್ರಾಮಗಳ ಬೀದಿ ನಾಯಿಗಳಿಗೆ ನೀಡುತ್ತಿದ್ದರು. ಈ ವೇಳೆ ಅನಾಥ ನಾಯಿ, ದನಕರುಗಳು ಪಡುವ ಸಂಕಷ್ಟವನ್ನು ಕಣ್ಣಾರೆ ಕಂಡ ಅವರು ಇಂತಹ ಪ್ರಾಣಿಗಳಿಗೆ ಚಿಕಿತ್ಸೆ ಸಹಿತ ಪುನರ್ವಸತಿ ಕಲ್ಪಿಸಬೇಕೆಂದು ಸಂಕಲ್ಪಿಸಿ ತಮ್ಮ ಭೂಮಿಯಲ್ಲಿಯೇ ಅಹಿಂಸಾ ಎನಿಮಲ್ ಕೇರ್ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು.
ಜನತೆಯ ತಿರಸ್ಕಾರಕ್ಕೆ ತುತ್ತಾದ ಕಜ್ಜಿ ನಾಯಿ, ಸೊಂಟ ಮುರಿದುಕೊಂಡ , ಕಾಲು ಸೊಟ್ಟಾಗಿರುವ ನಾಯಿಗಳೂ ಕೂಡಾ ಅವರ ಆರೈಕೆಯಲ್ಲಿದ್ದು, ಅವೆಲ್ಲದಕ್ಕೂ ದಿನದ ಮೂರು ಹೊತ್ತು ಪೌಷ್ಟಿಕ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ೩೫೦ ನಾಯಿಗಳ ಪೈಕಿ ಒಂದು ನಾಯಿ ಮಾತ್ರ ಎಲ್ಲರನ್ನೂ ಕಂಡಾಗಲೂ ಬೊಗಳುತ್ತಿದ್ದರೆ, ಉಳಿದೆಲ್ಲಾ ನಾಯಿಗಳು ಇವರನ್ನು ಕಂಡಾಗ ಬಾಲ ಅಲ್ಲಾಡಿಸುತ್ತಾ ಆತ್ಮೀಯತೆಯನ್ನು ತೋರುತ್ತಿವೆ.
ಉತ್ತಮ ಕ್ರೀಡಾಪಟು
ಮೂಕಪ್ರಾಣಿಗಳ ಆರೈಕೆ ಮಾಡುತ್ತಿರುವ ಎಂ.ಕೆ. ವಿರಂಜಯ್ ಹೆಗ್ಡೆ ಆಲಿಯಾಸ್ ವೀರು ಜೈನ್ ಅವರಿಗೆ ಸಹಾಯ ಮಾಡ ಬಯಸುವವರು ಅವರ ಮೊಬೈಲ್ ನಂಬರ್ ೯೬೧೧೯೪೪೭೬೩ ನ್ನು ಸಂಪರ್ಕಿಸಬಹುದು.