ಉಳುವರೆ ಸಂತ್ರಸ್ತರಿಗೆ ವೀರೇಂದ್ರ ಹೆಗ್ಗಡೆ ಸಾಂತ್ವನ

KannadaprabhaNewsNetwork |  
Published : Aug 14, 2024, 12:59 AM IST
ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಎದ್ದ ಅಲೆಗೆ ಮನೆ ಮಠ ಕಳೆದುಕೊಂಡ ಉಳುವರೆ ಗ್ರಾಮದ ಸಂತ್ರಸ್ತರಿಗೆ ರಾಜ್ಯ ಸಭಾ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಾಂತ್ವನ ಹೇಳಿದರು. | Kannada Prabha

ಸಾರಾಂಶ

ರಾಜ್ಯಸಭಾ ಸದಸ್ಯ ವೀರೇಂದ್ರ ಹೆಗ್ಗಡೆಯವರು ಉಳುವರೆಯಲ್ಲಿ ಬಿದ್ದ ೬ ಮನೆಗಳ ಸಂತ್ರಸ್ತರ ಸಮಸ್ಯೆ ಆಲಿಸಿದರು. ನದಿ ತಟದಲ್ಲಿ ಅಬ್ಬರದ ಅಲೆಗಳು ಮಾಡಿರುವ ಹಾನಿಯನ್ನು ಪರಿಶೀಲಿಸಿ ಮಾಹಿತಿ ಪಡೆದರು.

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಎದ್ದ ಅಲೆಗೆ ಮನೆಗಳನ್ನು ಕಳೆದುಕೊಂಡ ಉಳುವರೆ ಗ್ರಾಮಕ್ಕೆ ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಉಳವರೆಯಲ್ಲಿ ಬಿದ್ದ ೬ ಮನೆಗಳ ಸಂತ್ರಸ್ತರ ಸಮಸ್ಯೆ ಆಲಿಸಿದರು. ನದಿ ತಟದಲ್ಲಿ ಅಬ್ಬರದ ಅಲೆಗಳು ಮಾಡಿರುವ ಹಾನಿಯನ್ನು ಪರಿಶೀಲಿಸಿ ಮಾಹಿತಿ ಪಡೆದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವೀರೇಂದ್ರ ಹೆಗ್ಗಡೆ ಅವರು, ಎನ್‌ಎಚ್ಎಐ ಕೇವಲ ಬೇಸಿಗೆ ಕಾಲದ ಪರಿಸ್ಥಿತಿಯನ್ನು ಇಟ್ಟುಕೊಂಡು ಚತುಷ್ಪಥದ ಹೆದ್ದಾರಿ ನಿರ್ಮಾಣ ಮಾಡಿದೆ. ಮಳೆಗಾಲದ ಸಂದರ್ಭದಲ್ಲಿ ಆಗುವ ಅವಘಡದ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡುಬಂದಿಲ್ಲ ಎಂದ ಅವರು, ಶಿರೂರು ದುರ್ಘಟನೆಯ ಬಗ್ಗೆ ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿ ಕೇಂದ್ರ ಸರ್ಕಾರದ ಸಹಾಯಕ್ಕೂ ಪ್ರಯತ್ನಿಸುತ್ತೇನೆ. ಧರ್ಮಸ್ಥಳ ಟ್ರಸ್ಟ್‌ನಿಂದಲೂ ಆರ್ಥಿಕ ಸಹಾಯ ಮಾಡಲಾಗುವುದು. ನಾಪತ್ತೆಯಾದ ಮೂರು ಮೃತದೇಹಗಳ ಪತ್ತೆ ಕಾರ್ಯಾಚರಣೆಗೆ ಒತ್ತಡ ತರಲಾಗುವುದು ಎಂದರು.

ಉಳುವರೆಯಲ್ಲಿ ಬಿದ್ದ ಆರು ಮನೆಗಳ ಸಂತ್ರಸ್ತರು ಧರ್ಮಸ್ಥಳ ಸಂಘದಿಂದ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಇದನ್ನು ಮನ್ನಾ ಮಾಡುವ ಪ್ರಶ್ನೆ ಇಲ್ಲ. ನಾವು ಅವರಿಗೆ ಸಾಲ ಕೊಟ್ಟಿಲ್ಲ. ಅವರಿಗೆ ಬ್ಯಾಂಕ್‌ನವರು ಸಾಲ ನೀಡಿದ್ದಾರೆ. ನಾವು ಕೇವಲ ಗ್ಯಾರಂಟೆರ್ ಅಷ್ಟೇ ಎಂದರು.

ಶಾಸಕ ದಿನಕರ ಶೆಟ್ಟಿ, ಪ್ರಮುಖರಾದ ಭಾಸ್ಕರ ನಾರ್ವೇಕರ್, ಹನುಮಂತ ಗೌಡ, ಉಮೇಶ ನಾಯ್ಕ, ಗ್ರಾಪಂ ಅಧ್ಯಕ್ಷ ಶ್ರವಣ ನಾಯಕ, ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಯೋಜನಾಧಿಕಾರಿಗಳಾದ ಮಮತಾ ನಾಯ್ಕ, ಜನಜಾಗೃತಿ ಸಮಿತಿ ಅಧ್ಯಕ್ಷ ಮಹೇಶ ನಾಯ್ಕ, ಮಾಜಿ ಶಾಸಕ ಗಂಗಾಧರ ಭಟ್, ಯೋಗಾನಂದ ಗಾಂಧಿ, ಮಹಾಲಸಾ ದೇವಸ್ಥಾನದ ಧರ್ಮದರ್ಶಿ ಸುನೀಲ ಪೈ ಮತ್ತಿತರರು ಇದ್ದರು.ವಿಚಾರಣೆಗೆ ಹಾಜರಾಗಲು ಐಆರ್‌ಬಿ ನಿರ್ದೇಶರಿಗೆ ಕೋರ್ಟ್‌ ಸೂಚನೆ

ಅಂಕೋಲಾ: ಶಿರೂರು ಗುಡ್ಡ ಕುಸಿತ ದುರಂತ ಪ್ರಕರಣಕ್ಕೆ ಸಂಬಸಿದಂತೆ ಐಆರ್‌‌ಬಿ ಕಂಪನಿಯ 8 ನಿರ್ದೇಶಕರನ್ನು ವಿಚಾರಣೆ ಮಾಡಲು ಅಂಕೊಲಾದ ಜೆಎಂಎಫ್‌ಸಿ ನ್ಯಾಯಾಲಯ ಸೂಚನೆ ನೀಡಿದೆ.

ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಪೊಲೀಸರಿಗೆ ನ್ಯಾಯಾಲಯ ಆದೇಶಿಸಿದೆ. ಶಿರೂರು ಗುಡ್ಡ ದುರಂತಕ್ಕೆ ಸಂಬಂಧಿಸಿದಂತೆ ಐಆರ್‌ಬಿ ಕಂಪನಿ ವಿರುದ್ಧ ಇತ್ತೀಚೆಗೆ ಪ್ರಣವಾನಂದ ಸ್ವಾಮೀಜಿ ನ್ಯಾಯಾಲಯದಲ್ಲಿ ಪ್ರಕರಣ ಹೂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಟ್ಟಿಗೆಹಾರ ಚರ್ಚ್ ವ್ಯಾಪ್ತಿಯಲ್ಲಿ ಕ್ರಿಸ್ಮಸ್ ಜಾಗೃತಿ ಆರಂಭ
ಮಾಗಿ ಕಾಲದ ಕಾಳು, ಗೆಡ್ಡೆ ಗೆಣಸುಗಳು ನಮ್ಮ ಅನ್ನದ ತಟ್ಟೆಗೆ ಬರಲಿ