ಸರಳ ವಿವಾಹ ಆಚರಣೆಯಿಂದ ಪುಣ್ಯಪ್ರಾಪ್ತಿ: ಸೈಯದ್

KannadaprabhaNewsNetwork |  
Published : Aug 26, 2024, 01:41 AM IST
25 ಎಚ್‍ಆರ್‍ಆರ್ 3ಹರಿಹರದಲ್ಲಿ ಭಾನುವಾರ ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲಿಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ದಾಂಪತ್ಯ ಜೀವನಕ್ಕೆ ಪ್ರವೇಶ ಪಡೆದರು. | Kannada Prabha

ಸಾರಾಂಶ

ವಿವಾಹ ಮಹೋತ್ಸವಗಳ ಸರಳೀಕರಣಕ್ಕೆ ಇಸ್ಲಾಂ ಧರ್ಮ ಬೆಂಬಲ ನೀಡುತ್ತದೆ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು. ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರವಾದಿ ಮೊಹಮ್ಮದ್ ಅವರೂ ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹರಿಹರ

ವಿವಾಹ ಮಹೋತ್ಸವಗಳ ಸರಳೀಕರಣಕ್ಕೆ ಇಸ್ಲಾಂ ಧರ್ಮ ಬೆಂಬಲ ನೀಡುತ್ತದೆ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.

ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲೀಕರು ಮತ್ತು ಚಾಲಕರ ಸಂಘದಿಂದ ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ ಮಹೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರವಾದಿ ಮೊಹಮ್ಮದ್ ಅವರೂ ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ಸಂಸ್ಥೆಯವರು ಬಹಳ ಪರಿಶ್ರಮದಿಂದ ವಿವಾಹ ಮಹೋತ್ಸವ ಆಯೋಜಿಸಿದ್ದಾರೆ. ವಿವಾಹಕ್ಕೆ ಮಾಡಬೇಕಿದ್ದ ಖರ್ಚನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ, ಆದರ್ಶ ಜೀವನ ನಡೆಸಿರಿ ಎಂದು ನವದಂಪತಿಗಳಿಗೆ ಸಲಹೆ ನೀಡಿದರು.

ಕಾಂಗ್ರೆಸ್ ಯುವ ಮುಖಂಡ ಸಮರ್ಥ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳ ವಿವಾಹಗಳನ್ನು ನೆರೆವೇರಿಸಿದ ಕುಟುಂಬದವರು ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಾರೆ. ವಿವಾಹಗಳನ್ನು ಸರಳವಾಗಿ ಆಚರಿಸುವ ಪರಂಪರೆ ಸಮಾಜದಲ್ಲಿ ಬೆಳೆಯಬೇಕೆಂದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್ ಮಾತನಾಡಿ, ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ನವದಂಪತಿಗಳಿಗೆ ತಲಾ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ದಿನನಿತ್ಯದ ವಸ್ತುಗಳನ್ನು ಆಯೋಜಕರು ನೀಡಿರುವುದು ಶ್ಲಾಘನೀಯ ಎಂದರು.

ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಆಸಿಫ್ ಜುನೈದಿ, ನಗರಸಭಾ ಸದಸ್ಯರಾದ ಎಂ.ಎಸ್. ಬಾಬುಲಾಲ್, ಸೈಯದ್ ಅಲೀಂ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಯೂಸುಫ್ ಕಾರ್ಯದರ್ಶಿ ಜಕಾಉಲ್ಲಾ, ಪದಾಧಿಕಾರಿಗಳಾದ ಜಪಾನ್ ರಫೀಕ್, ಮೊಹ್ಮದ್ ರಫೀಕ್, ಫಯಾಜ್ ಅಹ್ಮದ್, ಸೈಯದ್ ಅಬೂಜರ್, ಕರೀಂ ಸಾಬ್, ಸೈಯದ್ ಇಸ್ಮಾಯಿಲ್, ಮಹಬೂಬ್ ಸಾಬ್, ಬಿಸ್ಮಿಲ್ಲಾ ರಫೀಕ್, ಅಸ್ಲಾಂ, ಮೊಹ್ಮದ್ ರಫೀಕ್, ಶಶಿ ನಾಯ್ಕ್, ದೋಸ್ತಾನಾ ಖಲೀಲ್ ಸಾಬ್, ಹಾಜಿ ಅಲಿ, ಸೈಯದ್ ಸನಾಉಲ್ಲಾ, ಗುತ್ತೂರು ನಾಸಿರ್ ಪೈಲ್ವಾನ್, ಕೆ.ರಿಯಾಜ್ ಅಹ್ಮದ್, ಸೈಯದ್ ಜಬೀಉಲ್ಲಾ, ಗೌಸ್‍ಪೀರ್, ಸೈಯದ್ ಮುಜಮ್ಮಿಲ್, ಆಸಿಫ್ ಅಖ್ತರ್, ರಹಮಾನ್ ಸಾಬ್, ಅಬು ಸೈಯದ್, ಅಬು ಸ್ವಾಲೇಹಾ, ದಾದಾಪೀರ್ ಭಾನುವಳ್ಳಿ ಇದ್ದರು.

- - -

ಬಾಕ್ಸ್‌ * ಪ್ರೋತ್ಸಾಹಧನ ಯೋಜನೆ ಜಾರಿಯಾಗಲಿಹಿಂದುಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ ಮುಖಂಡ ಅಬು ತುರಾಬ್ ಮಾತನಾಡಿ, ಎಲ್ಲಿಯೂ ದೇಣಿಗೆ ಎತ್ತದೇ ಲಾರಿ ಮಾಲೀಕರು, ಚಾಲಕರು ಹಾಗೂ ಕೆಲವು ವ್ಯಾಪಾರಿಗಳು ಸಮಾಜ ಸೇವೆ ದೃಷ್ಟಿಯಿಂದ ಹಣ ಹಾಕಿ, ಈ ಮಹೋತ್ಸವ ಆಯೋಜಿಸಲಾಗಿದೆ. ಇಂತಹ ಮಹೋತ್ಸವಗಳಲ್ಲಿ ಮದುವೆಯಾದ ದಂಪತಿಗಳಿಗೆ ವಕ್ಫ್ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹಧನ ನೀಡುವ ಯೋಜನೆ ಸರ್ಕಾರ ಜಾರಿ ಮಾಡಬೇಕೆಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ