ವಿಶ್ವಕರ್ಮ ಜಯಂತಿ ಉದ್ಘಾಟನೆ
ಪ್ರಾಚೀನಕಾಲದ ಕಲೆಗಳ ವೈಭವಕ್ಕೆ ವಿಶ್ವಕರ್ಮರು ಸಾಕ್ಷಿ. ಬೇಲೂರು, ಹಳೇಬೀಡಿನ ಕಲೆಗಳು ವಿಶ್ವಕರ್ಮರ ಶ್ರೇಷ್ಠರು ಎನ್ನುವುದಕ್ಕೆ ಜ್ವಲಂತ ನಿದರ್ಶನ ಎಂದು ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿಶ್ರಿನಿವಾಸ್ ತಿಳಿಸಿದರು.
ಪಟ್ಟಣದ ತಾಪಂನಲ್ಲಿ ಗುರುವಾರ ನಡೆದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿ ವಿಶ್ವಕರ್ಮರ ಕೆಲಸಗಳು ಎಲ್ಲಾ ಜನಮನದವರಿಗೂ ಅಗತ್ಯ.ವಿಶ್ವಕ್ಕೆ ಮಾದರಿ ಸಮಾಜ ಎಂದರೆ ವಿಶ್ವಕರ್ಮ. ಧಾರ್ಮಿಕ ಕಾರ್ಯಕ್ರಮಗಳಿಗೆ ಅವರ ಸಹಕಾರ ಇದ್ದೇ ಇರುತ್ತದೆ. ದೇವರ ವಿಗ್ರಹ ಕೆತ್ತನೆ, ಮನೆ ನಿರ್ಮಾಣ ಕೆಲಸದಲ್ಲಿ ಬೆಳ್ಳಿ, ಬಂಗಾರ ಆಭರಣಗಳ ತಯಾರಿಕೆ ಯಲ್ಲಿ ಅವರ ಶ್ರೇಷ್ಠತೆ ಹೆಚ್ಚಾಗಿದೆ. ಸರ್ವ ಜನಾಂಗಕ್ಕೂ ಕೊಡುಗೆ ನೀಡುತ್ತಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.ಕಾಳಿಕಾಂಭ ಸಮುದಾಯ ಭವನಕ್ಕೆ ಹಾಸನ ಸಂಸದರು ಮೇಲ್ಚಾವಣಿ ನಿರ್ಮಾಣಕ್ಕೆ ಅನುದಾನ ನೀಡಿದ್ದು ತಾವು ಸಹ ಅವರ ಸಮುದಾಯಕ್ಕೆ ಸಹಕಾರ ನೀಡಿದ್ದೇನೆ. ಬೇಡಿಕೆಯಂತೆ ತಂಗಲಿ ಸಮೀಪ ಮಹಾದ್ವಾರಕ್ಕೆ ವಿಶ್ವಕರ್ಮರ ಹೆಸರಿಡಲು ಶಾಸಕರೊಂದಿಗೆ ಚರ್ಚಿಸಿ ತೀರ್ಮಾನಿಸುತ್ತೇವೆ ಎಂಬ ಭರವಸೆ ನೀಡಿದರು.
ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದು, ನಿವೃತ್ತ ಶಿಕ್ಷಕ ಕುಬೇಂದ್ರಚಾರ್ ವಿಶ್ವಕರ್ಮರ ಬಗ್ಗೆ ಉಪನ್ಯಾಸ ನೀಡಿದರು. ವಿಶ್ವಕರ್ಮ ಸಮಾಜದ ಸಖರಾಯಪಟ್ಟಣದ ಓಂಕಾರಮೂರ್ತಿ, ಚಿಕ್ಕವೀರಆಚಾರ್, ಗಿರಿಧರ ಚಾರ್, ಮೌನೇಶ್ಆಚಾರ್, ಪ್ರಕಾಶಚಾರ್,ಮಹೇಶ್ಆಚಾರ್, ಕಲ್ಲೇಶ್ಆಚಾರ್, ನಾಗರಾಜಚಾರ್, ಆರ್.ಟಿ.ಮಂಜುನಾಥ್, ನಿಡಗಟ್ಟ ಶಿವಮೂರ್ತಿಆಚಾರ್ ಮತ್ತಿತರರು ಇದ್ದರು.
ಕಡೂರು ತಾಪಂನಲ್ಲಿ ವಿಶ್ವಕರ್ಮ ಜಯಂತಿ ನೆರವೇರಿತು ವಿಶ್ವಕರ್ಮರ ಭಾವಚಿತ್ರಕ್ಕೆ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಭಂಡಾರಿಶ್ರೀನಿವಾಸ್, ತೀರ್ಥಆಚಾರ್ ಪುಷ್ಪಾರ್ಚನೆ ಮಾಡಿದರು.