ದೇವಾನುದೇವತೆಗಳ ಇಂಜಿನಿಯರ್ ವಿಶ್ವಕರ್ಮರು

KannadaprabhaNewsNetwork |  
Published : Sep 23, 2024, 01:30 AM IST
ಹೊಸದುರ್ಗ ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭವನ್ನು ಅರೇಮಾದೇನಹಳ್ಳಿ ಸಂಸ್ಧಾನದ ಶ್ರೀ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಶ್ವಕರ್ಮರು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಎಲ್ಲಾ ಸಮಾಜಕ್ಕೂ ಅವರು ಸರ್ವ ಶ್ರೇಷ್ಠರು ಎಂದು ಅರೇಮಾದೇನಹಳ್ಳಿ ಸಂಸ್ಧಾನದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿಶ್ವಕರ್ಮರು ಕೇವಲ ಒಂದು ಜಾತಿಗೆ ಸೀಮಿತವಲ್ಲ. ಎಲ್ಲಾ ಸಮಾಜಕ್ಕೂ ಅವರು ಸರ್ವ ಶ್ರೇಷ್ಠರು ಎಂದು ಅರೇಮಾದೇನಹಳ್ಳಿ ಸಂಸ್ಧಾನದ ವಿಶ್ವಕರ್ಮ ಜಗದ್ಗುರು ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ತಿಳಿಸಿದರು.

ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಶ್ರೀ ಕಾಳಿಕಾಂಬ ಸೇವಾ ಸಮಿತಿ ,ತಾಲೂಕು ವಿಶ್ವಕರ್ಮ ಸಮಾಜ ಹೊಸದುರ್ಗ ಅವರ ಆಶ್ರಯದಲ್ಲಿ ಭಾನುವಾರ ತಾಲೂಕು ಮಟ್ಟದ ಶ್ರೀ ಭಗವಾನ್‌ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಕರ್ಮ ಎಂಬ ಹೆಸರೇ ಒಂದು ಅದ್ಬುತವಾದದ್ದು. ದೇವಾನುದೇವತೆಗಳ ಇಂಜಿನಿಯರ್ ಎನಿಸಿಕೊಂಡಿರುವ ವಿಶ್ವಕರ್ಮರು, ನಮ್ಮ ಸಮಾಜಕ್ಕೆ ಹೆಮ್ಮಯ ವಿಷಯ, ವಿಶ್ವಕರ್ಮರು ಭೂಮಿಯಲ್ಲಿ ಅರಮನೆಗಳು, ಮಹಲುಗಳು, ವಾಹನಗಳು ಹಾಗೂ ಆಯುಧಗಳು ಸೇರಿದಂತೆ ಇನ್ನಿತರೆ ತಾಂತ್ರಿಕ ವಸ್ತಗಳನ್ನು ನಿರ್ಮಿಸಿದವರು ಎಂದರು.ವಿಶ್ವಕರ್ಮ ಸಮಾಜ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಹಾಗೂ ಆರ್ಥಿಕತೆ ಸೇರಿದಂತೆ ಸಾಕಷ್ಟು ಮೂಲಭೂತ ಸೌಲಭ್ಯಗಳಿಂದ ಹಿಂದುಳಿದಿದೆ. ಈ ನಿಟ್ಟಿನಲ್ಲಿ ಸಮಾಜದವರು ಸದಾ ಜಾಗೃತರಾಗಿರಬೇಕಾಗುತ್ತದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸಮಾಜದ ಮುಖ್ಯ ವಾಹಿನಿಗೆ ಕರೆ ತನ್ನಿ. ಸಮಾಜ ಬಾಂಧವರು ಯಾವ ಪಕ್ಷದಲ್ಲಾದರೂ ಇರೀ ಸಂಘಟನೆ ವಿಚಾರದಲ್ಲಿ ಎಲ್ಲರೂ ಪಕ್ಷಬೇಧ ಮರೆತು ಸಂಘಟಿತರಾಗಿ. ಸಮಾಜದಲ್ಲಿ ಸಂಘಟನೆ ಇಲ್ಲದಿದ್ದರೆ ಯಾವುದನ್ನೂ ಸಹ ಸಾಧಿಸಲು ಆಗುವುದಿಲ್ಲ ಎಂದರು.

ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಂ.ಪಿ. ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಗಳೂರು ಮಲ್ಲೇಶ್ವರಂ ನ ಶಿಕ್ಷಣ ಇಲಾಖೆಯ ಬಿ.ಆರ್.ಸಿ ಶೈಲಾ ಪಿ, ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ 2023-24 ನೇ ಸಾಲಿನಲ್ಲಿ ಶೇ.85 ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭಗವಾನ್ ವಿಶ್ವಕರ್ಮರ ಭಾವಚಿತ್ರವನ್ನ ಸರೋಟಿನಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಮುಖ್ಯ ಅತಿಥಿಗಳಾಗಿ ದಾವಣಗೆರೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಕೆ.ಪಿ. ಪರಮೇಶ್ವರಪ್ಪ, ಸಮಾಜದ ಮುಖಂಡರಾದ ಎಚ್.ಬಿ. ವಿಶ್ವನಾಥಚಾರ್, ವಿ. ವಿಜಯಕುಮಾರ್, ಆರ್. ಸತ್ಯನಾರಾಯಣರಾಯ್ಕರ್, ಡಿ. ಮಂಜುನಾಥ ದಿವಾಕರ್, ಶ್ರೀಮತಿ ಸರಸ್ವತಿ ಮಂಜುನಾಥಚಾರ್, ಕೆ.ಎಸ್. ರಾಘವೇಂದ್ರಚಾರ್, ಗಾಯಕ ಬಸವರಾಜ್, ಲಲಿತ, ಸಮಾಜದ ಗೌರವಾಧ್ಯಕ್ಷ ಎಂ. ಮಹೇಶ್ವರಯ್ಯ, ಅದ್ಯಕ್ಷ ಎಂ.ಪಿ. ನಾಗರಾಜಚಾರ್, ಕಾರ್ಯದರ್ಶಿ ಎಸ್. ಪ್ರಸನ್ನ, ಎಚ್.ಬಿ. ವಿಶ್ವನಾಥಚಾರ್, ಪುರಸಭಾ ಅಧ್ಯಕ್ಷೆ ಶ್ರೀ ರಾಜೇಶ್ವರಿ ಆನಂದ್, ಸದಸ್ಯ ಜಾಫರ್‌ ಸಾಧಿಕ್, ಎಂ. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಧಿತರಿದ್ದರು.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?