ಕನ್ನಡಪ್ರಭ ವಾರ್ತೆ ಮುಂಡರಗಿ
ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಹಾಗೂ ಶ್ರೀ ಕಾಳಿಕಾದೇವಿ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಆಯೋಜಿಸಿದ್ದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿಶ್ವಕರ್ಮರು ಇತರ ಸಮಾಜದೊಟ್ಟಿಗೆ ಸಹಬಾಳ್ವೆಯಿಂದ ಜೀವಿಸಿ ಅವರ ಮನಸ್ಸು ಗೆದ್ದು ಪ್ರಾಮಾಣಿಕವಾಗಿ ಕಾಯಕ ನಿಷ್ಠೆಯಲ್ಲಿ ತೊಡಗಬೇಕು. ಸಮಾಜದಲ್ಲಿರುವವರೆಲ್ಲರೂ ಸಂಘಟಿತರಾಗಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕವಾಗಿ ಬಲಿಷ್ಠರಾಗಬೇಕು ಎಂದು ಕರೆ ನೀಡಿದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಇಡೀ ವಿಶ್ವ ನಿರ್ಮಾಣವಾಗುವಲ್ಲಿ ವಿಶ್ವಕರ್ಮರ ಪಾತ್ರ ದೊಡ್ಡದು. ಅವರನ್ನು ಬರೀ ಒಂದೇ ಸಮುದಾಯಕ್ಕೆ ಸಿಮೀತಗೊಳಿಸಬಾರದು. ವಿಶ್ವಕರ್ಮರು ಎಲ್ಲ ಸಮಾಜಕ್ಕೂ ಸೀಮಿತವಾದವರು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ತಮ್ಮ ಮೂಲ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಲು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.
ಮಹಾದೇವಪ್ಪ ಪತ್ತಾರ, ಪಾಂಡುರಂಗ ಪತ್ತಾರ, ನಾರಾಯಣಪ್ಪ ಸೂಡಿ, ರಾಮಚಂದ್ರಪ್ಪ ಬಡಿಗೇರ ಉಪಸ್ಥಿತರಿದ್ದರು. ಜಯಶ್ರೀ ಅಳವಂಡಿ ಪ್ರಾರ್ಥಿಸಿದರು. ರಾಜೇಶ ಅಥಣಿ ಸ್ವಾಗತಿಸಿದರು. ಎನ್.ಎಂ. ಬಡಿಗೇರ ನಿರೂಪಿಸಿದರು. ರಾಘವೇಂದ್ರ ಕಮ್ಮಾರ ವಂದಿಸಿದರು.