ಕುಶಾಲನಗರ: ವಿಶ್ವಕರ್ಮ ಪೂಜಾ ಮಹೋತ್ಸವ, ಪ್ರತಿಭಾ ಪುರಸ್ಕಾರ

KannadaprabhaNewsNetwork |  
Published : Oct 14, 2026, 02:30 AM IST
ಕಾರ್ಯಕ್ರಮ ಸಂದರ್ಭ | Kannada Prabha

ಸಾರಾಂಶ

ಕುಶಾಲನಗರ ತಾಲೂಕು ಶ್ರೀ ವಿಶ್ವಕರ್ಮ ಸಮಾಜ ವತಿಯಿಂದ 23ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ, ದುರ್ಗಾ ನಮಸ್ಕಾರ ಪೂಜೆ, ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಮಹಾಸಭೆ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನೆರವೇರಿತು.

ಕುಶಾಲನಗರ: ಕುಶಾಲನಗರ ತಾಲೂಕು ಶ್ರೀ ವಿಶ್ವಕರ್ಮ ಸಮಾಜ ವತಿಯಿಂದ 23ನೇ ವರ್ಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ, ದುರ್ಗಾ ನಮಸ್ಕಾರ ಪೂಜೆ, ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಮಹಾಸಭೆ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನೆರವೇರಿತು.ಎರಡು ದಿನಗಳ ಕಾಲ ವಿಶೇಷ ಪೂಜಾ ವಿಧಿ-ವಿಧಾನಗಳು ಪುರೋಹಿತ ರಾಜೇಶ್ ಆಚಾರ್ಯ ಮತ್ತು ರಾಮಸ್ವಾಮಿ ಆಚಾರ್ಯ ನೇತೃತ್ವದಲ್ಲಿ ನಡೆಯಿತು.

ಮಹಿಳಾ ಘಟಕದ ವತಿಯಿಂದ ನಡೆದ ದುರ್ಗಾ ನಮಸ್ಕಾರ ಪೂಜೆ ಕುಂಕುಮಾರ್ಚನೆ ಸಂದರ್ಭ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪಾಲ್ಗೊಂಡಿದ್ದರು. ಹೆಬ್ಬಾಲೆಯಲ್ಲಿರುವ ಶ್ರೀ ಕಾಳಿಕಾಂಬ ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘಕ್ಕೆ ಸರ್ಕಾರದ ವತಿಯಿಂದ ಸಮುದಾಯ ಭವನಕ್ಕಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಧನಸಹಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಎರಡನೇ ದಿನ‌ ನಡೆದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಅರೆಮಾದನಹಳ್ಳಿ ಶ್ರೀ ವಿಶ್ವಕರ್ಮ ಜಗದ್ಗುರು ಪೀಠ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಮಠ ಸುಜ್ಞಾನ ವಿದ್ಯಾತೀರ್ಥ‌ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ದುರ್ಗೇಶ್ ಸಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಪಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸದಾಕಾಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು .

ಪಿರಿಯಾಪಟ್ಟಣದ ಶಿಕ್ಷಣ ಇಲಾಖೆ ಸಹಾಯಕ‌ ನಿರ್ದೇಶಕ ಪ್ರಶಾಂತ್ ಎಂ ಸಿ. ಹಾಗೂ ಬೆಂಗಳೂರ ದೈಹಿಕ ಶಿಕ್ಷಣ ಶಿಕ್ಷಕ ಕೆ.ಎಸ್ ಶಾಸ್ತ್ರಿ ಉಪನ್ಯಾಸ ನೀಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. 2025 -26 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆ ಹೊಂದಿದ ಸಮಾಜದ ವಿದ್ಯಾರ್ಥಿಗಳನ್ನು ಸಮಾಜದ ಯುವ ಘಟಕ ಹಾಗೂ ಹಾಗೂ ಎಚ್.ಎನ್. ಸುಬ್ರಹ್ಮಣ್ಯ ಮತ್ತು ಕಾಂತಾಮಣಿಯವರ ದತ್ತಿನಿಧಿಯಡಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ರಾಜ್ಯ ವಿಶ್ವಕರ್ಮ ಕಾನೂನು ಸಲಹೆಗಾರ ಕೆ.ಎಸ್. ಚಂದ್ರಶೇಖರ್,‌ ನಿಕಟಪೂರ್ವ ಅಧ್ಯಕ್ಷ ಎಚ್. ಬಿ. ಲಿಂಗಮೂರ್ತಿ, ಗೌರವಾಧ್ಯಕ್ಷ ವಿ. ಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಲಲಿತ ವರದ ರಾಜ್, ಯುವ ಘಟಕದ ಅಧ್ಯಕ್ಷ ಡಿ. ಪುನೀತ್, ಪ್ರಮುಖರಾದ ಜಗದೀಶ್ ಮಡಿಕೇರಿ, ನೀಲಕಂಠ, ಅಣ್ಣಯ್ಯಾಚಾರ್, ಬಿ.ಬಿ. ನಾಗರಾಜು ಶನಿವಾರಸಂತೆ, ಹೆಚ್.ಎನ್. ಸದಾನಂದ, ಟಿ.ಎಸ್. ಪ್ರಕಾಶಾಚಾರಿ, ಹೆಚ್.ಎನ್. ನಾಗಾಚಾರಿ, ಎಚ್. ಬಿ. ರಾಜಮೂರ್ತಿ, ಹೆಚ್.ಎನ್. ಸುಬ್ರಹ್ಮಣ್ಯ ಮತ್ತಿತರರು ಇದ್ದರು.

ದಾನಿಗಳಾದ ಸೋಮಶೇಖರ್ ಹೆಚ್.ವಿ, ಮಂಜುನಾಥ್ ಹೆಚ್. ವಿ ಮತ್ತು ಹೆಚ್. ವಿ. ಕಿಶೋರ್ ಕುಮಾರ್ ಅವರನ್ನು‌ ಸನ್ಮಾನಿಸಿ ಗೌರವಿಸಲಾಯಿತು.

-------------------------------

ಚಿತ್ರ ಕಾರ್ಯಕ್ರಮ ಸಂದರ್ಭ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿ ಸರ್ಕಾರದ ಕೊಡುಗೆಯಲ್ಲ, ಸಾಂವಿಧಾನಿಕ ಸಾಧನ
ಗೌರವ, ವಿನಯ, ಕೃತಜ್ಞತೆ ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿ: ಡಾ. ನೀಲ್ ರತನ್ ಶೆಂಡೆ