ಕನ್ನಡಪ್ರಭ ವಾರ್ತೆ ಲೋಕಾಪುರ
ಪಟ್ಟಣದ ಲೋಕೇಶ್ವರ ದೇವಸ್ಥಾನದಲ್ಲಿ ಅರಳಿಕಟ್ಟಿ-ಲಕ್ಷಾನಟ್ಟಿಯ ಸೃಷ್ಟಿಕರ್ತ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸೇವಾ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದಲ್ಲಿ ಮಾತನಾಡಿದರು. ವಿಶ್ವಕರ್ಮರ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಸೇವಾ ವೃತ್ತಿಯಲ್ಲೂ ಧರ್ಮ ಹಾಗೂ ತಾಂತ್ರಿಕತೆಯ ಸೃಜನಶೀಲತೆಯನ್ನು ತೋರಿದ್ದಾರೆ. ಅವರ ತಾಂತ್ರಿಕ ಸಾಮರ್ಥ್ಯ ಹಾಗೂ ಕೊಡುಗೆಗಳು ಇಡೀ ಜಗತ್ತಿಗೆ ಆದರ್ಶವಾಗಿವೆ ಎಂದರು.ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪಿ.ಬಿ.ಬಡಿಗೇರ ಮಾತನಾಡಿ, ಸಮಾಜದ ಯುವಜನರು ಹಾಗೂ ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳು ಮತ್ತು ನಿಗಮದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಕರೆ ನೀಡಿದರು.
ಸೃಷ್ಟಿಕರ್ತ ವಿಶ್ವಕರ್ಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಂಕ್ರಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.ಯಡಹಳ್ಳಿ ಗವಿಮಠದ ಜಗದ್ಗುರು ಮೌನೇಶ್ವರ ಅಭಿನವ ಮೌನೇಶ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಶಿರೂರ ಬ್ರಹ್ಮಾಂಡ ಭೇರಿ ಮಠದ ರಾಜೇಂದ್ರ ಮಹಾಸ್ವಾಮೀಜಿ ವಹಿಸಿದ್ದರು. ಹೆಸ್ಕಾಂ ಅಧಿಕಾರಿ ಮೌನೇಶ ಬಡಿಗೇರ, ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ನಿರ್ದೇಶಕ ಸೋಮಶೇಖರ ಲೋಹಾರ, ಸಂಘದ ಉಪಾಧ್ಯಕ್ಷ ವಿಠ್ಠಲ ಬಡಿಗೇರ ಸಂಘದ ಕಾರ್ಯದರ್ಶಿ ಹಣಮಂತ ಕಂಬಾರ, ಖಜಾಂಜಿ ವೀರಣ್ಣ ಬಡಿಗೇರ, ಅಶೋಕ ಕಂಬಾರ, ಮೌನೇಶ ಕಂಬಾರ, ಮಲ್ಲಿಕಾರ್ಜುನ ಕಂಬಾರ, ಪುಂಡಲೀಕ ಕಂಬಾರ, ಲೋಕಣ್ಣ ಕಂಬಾರ, ಮೌನೇಶ ಕಂಬಾರ, ಲಕ್ಷ್ಮಣ ಕಂಬಾರ, ಬೀರಪ್ಪ ಮಾಯನ್ನವರ, ಮಲ್ಲಪ್ಪ ಕಂಬಾರ, ಶೇಖರಗೌಡ ಪಾಟೀಲ, ಗುರುನಾಥ ಪಾಟೀಲ, ಮಲ್ಲಿಕಾರ್ಜುನ ಕಂಬಾರ, ಈರಣ್ಣ ಬಡಿಗೇರ, ಲೋಕಣ್ಣ ಬಡಿಗೇರ, ಮೌನೇಶ ಕಂಬಾರ ಹಾಗೂ ಮಹಿಳಾ ಮಂಡಳ ಎಲ್ಲಾ ಸದ್ಯಸರು ಇದ್ದರು.