ವಿಶ್ವಕರ್ಮ ಸಮಾಜ ಜಗತ್ತಿನ ನಾಗರಿಕತೆಯ ರೂವಾರಿ

KannadaprabhaNewsNetwork |  
Published : Sep 18, 2025, 01:10 AM IST
ಪೊಟೋ- ರಾಘವೇಂದ್ರ ಬಡಿಗೇರ ಅವರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು.  | Kannada Prabha

ಸಾರಾಂಶ

ವಿಶ್ವಕರ್ಮ ಎಂಬುದು ವ್ಯಕ್ತಿಯಾಗಿರದೇ ಅದು ದೈವೀ ಶಕ್ತಿಯಾಗಿದೆ. ಪ್ರಗತಿಶೀಲ ಸಮಾಜಕ್ಕೆ ವಿಶ್ವಕರ್ಮ ಸಮಾಜ ಬಾಂಧವರ ಕೊಡುಗೆ ಅಪಾರ

ಲಕ್ಷ್ಮೇಶ್ವರ: ಪಂಚ ಶ್ರೇಷ್ಠ ಕುಲಕಸುಬುಗಳ ಮೂಲಕ ಜಗತ್ತಿನ ಜನರ ಬೇಡಿಕೆ ಪೂರೈಸುತ್ತ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಡಿ ಬದುಕುವ ವಿಶ್ವಕರ್ಮರು ನಾಗರಿಕತೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ತಹಸೀಲ್ದಾರ ಧನಂಜಯ ಎಂ.,ಹೇಳಿದರು.

ಬುಧವಾರ ಪಟ್ಟಣದ ತಹಸೀಲ್ದಾರರ ಕಚೇರಿಯಲ್ಲಿ ಬುಧವಾರ ತಾಲೂಕಾಡಳಿತ ಮತ್ತು ತಾಲೂಕು ವಿಶ್ವಕರ್ಮ ಸಮಾಜದ ಆಶ್ರಯದಲ್ಲಿ ವಿಶ್ವಕರ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವಕರ್ಮ ಎಂಬುದು ವ್ಯಕ್ತಿಯಾಗಿರದೇ ಅದು ದೈವೀ ಶಕ್ತಿಯಾಗಿದೆ. ಪ್ರಗತಿಶೀಲ ಸಮಾಜಕ್ಕೆ ವಿಶ್ವಕರ್ಮ ಸಮಾಜ ಬಾಂಧವರ ಕೊಡುಗೆ ಅಪಾರವಾಗಿದ್ದು ಅವರನ್ನು ಜಾತಿ, ಧರ್ಮ ಮೀರಿ ಕಲಾರಾಧಕರಾಗಿ ಗೌರವಿಸುವುದು ಸಮಾಜದ ಕೆಲಸವಾಗಿದೆ. ವಿಶ್ವಕರ್ಮ ಸಮಾಜದ ಯುವಕ ದಿ. ರಾಘವೇಂದ್ರ ಬಡಿಗೇರ ಸೇನೆ ಸೇರಿ ಕಾರ್ಗಿಲ್ ಯುದ್ದದಲ್ಲಿ ವೀರಮರಣ ಹೊಂದಿದ್ದು ವಿಷಾದದ ಸಂಗತಿ, ಅಂತಹ ವೀರಯೋಧನನ್ನು ನಾಡಿಗೆ ನೀಡಿದ ಅವರ ತಂದೆ ಮಾದೇವಪ್ಪ ಬಡಿಗೇರ, ತಾಯಿ ಇಂದ್ರಾ ಅವರಿಗೆ ಗೌರವ ನಮನ ಸಲ್ಲಿಸುವದಾಗಿ ಹೇಳಿದರು.

ಈ ವೇಳೆ ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಬಡಿಗೇರ ಮತ್ತು ಕಾರ್ಯದರ್ಶಿ ಭಾಸ್ಕರ ಸೊರಟೂರ ಮಾತನಾಡಿ, ಪ್ರಸ್ತುತ ತಾಂತ್ರಿಕತೆಯ ಪ್ರಭಾವದಿಂದ ವಿಶ್ವ ಕರ್ಮ ಸಮಾಜದ ಕುಲಕಸುಬುಗಳಿಗೆ ಸಾಕಷ್ಟು ಪೆಟ್ಟು ಬಿದ್ದಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಎಲ್ಲ ಕ್ಷೇತ್ರದಲ್ಲೂ ಹಿಂದುಳಿದಿರುವ ಸಮಾಜದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಗಮನ ಹರಿಸಬೇಕು, ಯಳವತ್ತಿ ಗ್ರಾಮದವರಾದ ಮಾದೇವಪ್ಪ ಬಡಿಗೇರ ಮತ್ತು ಇಂದ್ರಾ ಬಡಿಗೇರ ಅವರಿಗೆ ಸಮಾಜದ ವತಿಯಿಂದ ಭಗವಾನ್ ವಿಶ್ವಕರ್ಮ ಪ್ರಶಸ್ತಿ ನೀಡುತ್ತಿರುವದು ವೀರಯೋಧ ದಿ. ರಾಘವೇಂದ್ರ ಅವರಿಗೆ ಸಮಾಜದಿಂದ ಸಲ್ಲಿಸುವ ಗೌರವಾಗಿದೆ ಎಂದರು.

ಸಮಾಜದ ಉಪಾಧ್ಯಕ್ಷ ರಾಮಚಂದ್ರ ಬಡಿಗೇರ, ಮನೋಹರ ಪತ್ತಾರ, ಲಕ್ಷ್ಮೇಶ್ವರ ಅಧ್ಯಕ್ಷ ಮೋಹನ ಸುತಾರ, ಅಶೋಕ ಸೊರಟೂರ, ಹೂವಪ್ಪ ಸೊರಟೂರ, ಜಯಣ್ಣ ಬೋರ್ಗೌಕರ, ಪ್ರೇಮಕ್ಕ ಬಡಿಗೇರ, ಶಶಿಕಲಾ ಬಡಿಗೇರ, ಮೌನೇಶ ಬಾಲೆಹೊಸೂರು, ಗಂಗಾಧರ ಬಾಲೆಹೊಸೂರ, ದ್ಯಾಮಣ್ಣ ಬಡಿಗೇರ, ದೇವಿಂದ್ರಪ್ಪ ಬಾಲೆಹೊಸೂರ, ಗಣಪತಿ ಹುಲಬಜಾರ, ರವಿ ಸುತಾರ, ಶಿವಾನಂದ ಬಡಿಗೇರ, ಅಪ್ಪಣ್ಣ ಸೊರಟೂರ, ಶ್ರೀಕಾಂತ ಪತ್ತಾರ, ಪ್ರಸನ್ನ ಬೆಂತೂರ, ಅಶೋಕ ಬಹದ್ದೂರಬಂಡಿ, ರಮೇಶ ಬಡಿಗೇರ, ಗಣೇಶ ಬಡಿಗೇರ, ಮೌನೇಶ ಬಾಲೆಹೊಸೂರು, ಮಾಂತೇಶ ಬಡಿಗೇರ, ತಹಸೀಲ್ದಾರ ಕಚೇರಿ ಸಿಬ್ಬಂದಿಗಳು ಸಮಾಜ ಬಾಂಧವರು ಸೇರಿದಂತೆ ಅನೇಕರಿದ್ದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ