ಕನ್ನಡಪ್ರಭ ವಾರ್ತೆ ಬೆಳಗಾವಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಕಣಾಚಾರ್ಯರು ವಿಶ್ವಕರ್ಮ ಸಮಾಜದ ಕಿರಿಟ. ಜಕಣಾಚಾರಿಗಳು ನಿರ್ಮಿಸಿದ ಶಿಲ್ಪಕಲೆಗಳಿಂದಾಗಿ ಭಾರತದ ಗರಿಮೆ ಉತ್ತುಂಗಕ್ಕೇರಿದೆ. ನಮ್ಮ ದೇಶದ ಶಿಲ್ಪಕಲೆಗಳ ಬಗ್ಗೆ ವಿದೇಶಿಗರು ಬಂದು ಆಧ್ಯಯನ ಮಾಡುತ್ತಿದ್ದಾರೆ. ಭಾರತದ ವಾಸ್ತುಶಿಲ್ಪ ಬಹಳ ಅತ್ಯುತ್ತಮವಾಗಿದೆ. ಅದರಲ್ಲಿಯು ಕರ್ನಾಟಕದ ವಾಸ್ತುಶಿಲ್ಪ ತುಂಬಾ ಶ್ರೇಷ್ಠವಾದದ್ದು. ಬೇಲೂರು, ಹಳೆಬೀಡು ಸೇರಿದಂತೆ ಹಲವಾರು ಸ್ಥಳಗಳಲ್ಲಿ ಜಕಣಾಚಾರಿಗಳು ರೂಪಿಸಿದ ದೇವಸ್ಥಾನ, ಮೂರ್ತಿಗಳು ಮತ್ತು ಶಿಲ್ಪಕಲೆಗಳು ನಮಗೆ ಕಂಡು ಬರುತ್ತವೆ ಎಂದು ಹೇಳಿದರು.ಬೇಲೂರಿನಲ್ಲಿ ಜಗತ್ಪ್ರಸಿದ್ಧ ಚನ್ನಕೇಶವನ ಮೂರ್ತಿಯನ್ನು ಅಮರ ಶಿಲ್ಪಿ ಜಕಣಾಚಾರ್ಯರು ನಿರ್ಮಿಸಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಮೂರ್ತಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ, ದೇವನಹಳ್ಳಿಯ ಕೆಂಪೇಗೌಡರ ಮೂರ್ತಿ ಮತ್ತು ಅಯೋಧ್ಯೆಯ ಬಾಲ ರಾಮನ ಮೂರ್ತಿ ಸೇರಿದಂತೆ ದೇಶದಲ್ಲಿ ಹಲವಾರು ಮೂರ್ತಿಗಳನ್ನು ವಿಶ್ವಕರ್ಮ ಸಮಾಜದ ಶಿಲ್ಪಕಾರರು ನಿರ್ಮಿಸಿದ್ದಾರೆ. ವಿಶ್ವಕರ್ಮ ಸಮಾಜ ದೇಶಕ್ಕೆ ಬಹಳಷ್ಟು ಕೊಡುಗೆಗಳನ್ನು ನೀಡಿದೆ. ಸಮಾಜದ ಜನ ಇನ್ನು ಜಾಗೃತರಾಗಿ ಸಮಾಜವನ್ನು ಸದೃಢವಾಗಿ ನಿರ್ಮಿಸಬೇಕು. ಪ್ರಸ್ತುತ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ವಿಶ್ವಕರ್ಮ ಸಮಾಜ ಕಾರಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಜ್ಞಾನೇಶ್ವರ ಬಡಿಗೇರ, ಅಶೋಕ ಸಾತಗಾಂವ, ರಮೇಶ ದೇಶಮುಖ, ಸಿದ್ಧಾರ್ಥ ಸುತಾರ, ಪೂರ್ಣಿಮಾ ಪತ್ತಾರ, ಅರ್ಚನಾ ಪತ್ತಾರ, ರೇಖಾ ಸುತಾರ, ರಮೇಶ ದೇಸೂರಕರ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.