ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ‘ವಿಶ್ವರೂಪ ದರ್ಶನಂ’

KannadaprabhaNewsNetwork |  
Published : Nov 04, 2025, 12:45 AM IST
03ವಿಶ್ವರೂಪಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಳದಲ್ಲಿ ವಿಶ್ವರೂಪ ದರ್ಶನ ನಡೆಯಿತು | Kannada Prabha

ಸಾರಾಂಶ

ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ಸಾಂಪ್ರದಾಯಿಕ ‘ವಿಶ್ವರೂಪ ದರ್ಶನ’ ನಡೆಯಿತು. ಮುುಂಜಾನೆ ಸೂರ್ಯೋದಯಕ್ಕೂ ಮೊದಲು ‘ಪಶ್ಚಿಮ ಜಾಗರ ಪೂಜೆ’ಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದು ಪುನೀತರಾದರು.

ಸಾವಿರಾರು ಹಣತೆ ದೀಪ । ಪಶ್ಚಿಮ ಜಾಗರ ಪೂಜೆ । ಅಪಾರ ಭಕ್ತರು ಭಾಗಿ

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆ ಸಾವಿರಾರು ಹಣತೆ ದೀಪಗಳಿಂದ ಸಾಂಪ್ರದಾಯಿಕ ‘ವಿಶ್ವರೂಪ ದರ್ಶನ’ ನಡೆಯಿತು. ಮುುಂಜಾನೆ ಸೂರ್ಯೋದಯಕ್ಕೂ ಮೊದಲು ‘ಪಶ್ಚಿಮ ಜಾಗರ ಪೂಜೆ’ಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದು ಪುನೀತರಾದರು.ವಿಶ್ವರೂಪ ದರ್ಶನದ ಅಂಗವಾಗಿ ದೇವಾಲಯದ ಆವರಣದಲ್ಲಿ ರಂಗೋಲಿಯಲ್ಲಿ ಮೂಡಿಬಂದ ವಿಠೋಬಾ ರುಖುಮಾಯಿ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ವೇದವ್ಯಾಸ ಮಹರ್ಷಿಗಳು, ಶ್ರೀ ವೆಂಕಟರಮಣ, ಶ್ರೀ ಮಹಾಗಣಪತಿ, ಶ್ರೀನಿವಾಸ, ಶ್ರೀ ವರಾಹ ರೊಪಂ, ರಾಮ, ಶಿವ ಇತ್ಯಾದಿ ವಿವಿಧ ದೇವರಗಳು, ಬಣ್ಣದ ಚಿತ್ತಾರದಲ್ಲಿ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಅವರ ಜನ್ಮಶತಾಬ್ದಿ ಚಿತ್ರಣ, ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ 550ನೇ ವರ್ಷಾಚರಣೆ ಮುಂತಾದ ಚಿತ್ರಣಗಳು ಹಣತೆಯ ಬೆಳಕಿನಲ್ಲಿ ಚಿತ್ತಾಕರ್ಷಕವಾಗಿ ಭಕ್ತರ ಮನ ಸೆಳೆದವು.

ದೇವಳ ಪ್ರಧಾನ ಅರ್ಚಕ ವಿನಾಯಕ ಭಟ್ ಮಹಾಪೂಜೆ ನೆರವೇರಿಸಿದರು. ಆಡಳಿತ ಮಂಡಳಿಯ ಸದಸ್ಯರು, ಜಿಎಸ್‌ಬಿ ಯುವಕ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಸಹಕರಿಸಿದರು. ಭಜನಾ ಮಹೋತ್ಸವ ಸಮಿತಿಯ ಸದಸ್ಯರು, ಶ್ರೀ ರಾಮನಾಮ ಜಪ ಅಭಿಯಾನ ಸಮಿತಿಯ ಸದಸ್ಯರು, ನೂರಾರು ಸಮಾಜಬಾಂಧವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ, ಕಾಕಡ ಆರತಿ, ಭಜನಾ ಕಾರ್ಯಕ್ರಮ, ವಿಶೇಷ ಹೂವಿನ ಅಲಂಕಾರ, ದೀಪಾರಾಧನೆ, ಮಂಗಳಾರತಿ, ಪ್ರಸಾದ ವಿತರಣೆ ವಿಜೃಂಭಣೆಯಿಂದ ನಡೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ