ಉಡುಪಿ ಲಕ್ಷ್ಮಿ ವೆಂಕಟೇಶ ದೇವಳದಲ್ಲಿ ''''''''ವಿಶ್ವರೂಪ ದರ್ಶನ''''''''

KannadaprabhaNewsNetwork |  
Published : Nov 24, 2026, 01:30 AM IST
23ವಿಶ್ವರೂಪ | Kannada Prabha

ಸಾರಾಂಶ

ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಸೋಮವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳ ಬೆಳಕಿನಲ್ಲಿ ವಿಶ್ವರೂಪ ದರ್ಶನ ನಡೆಯಿತು.

ಉಡುಪಿ: ಇಲ್ಲಿನ ತೆಂಕಪೇಟೆಯ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದಲ್ಲಿ ಉತ್ಥಾನ ದ್ವಾದಶಿಯ ಪ್ರಯುಕ್ತ ಸೋಮವಾರ ಮುಂಜಾನೆ 5 ಗಂಟೆಗೆ ಸಾವಿರಾರು ಹಣತೆ ದೀಪಗಳ ಬೆಳಕಿನಲ್ಲಿ ವಿಶ್ವರೂಪ ದರ್ಶನ ನಡೆಯಿತು.

ಈ ಸಂದರ್ಭದಲ್ಲಿ ದೇವರಿಗೆ ನಡೆದ ಪಶ್ಚಿಮ ಜಾಗರ ಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸರತಿ ಸಾಲಿನಲ್ಲಿ ಶ್ರೀ ದೇವರ ದರ್ಶನ ಪಡೆದರು.

ದೇವಳದ ಪ್ರಧಾನ ಅರ್ಚಕ ದಯಾಘನ್ ಭಟ್ ಮಹಾಪೂಜೆ ನೆರವೇರಿಸಿದರು. ದೇವಳದ ಧರ್ಮದರ್ಶಿ ಗುಜ್ಜಾಡಿ ಪ್ರಭಾಕರ ನಾಯಕ್, ಸೇವಾದಾರ ಗೋಕುಲದಾಸ ಭಟ್, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಜಿ.ಎಸ್‌.ಬಿ. ಯುವಕ - ಮಹಿಳಾ ಮಂಡಳಿಯ ಸದಸ್ಯರು, ಸ್ವಯಂಸೇವಕರು ಸಹಕರಿಸಿದರು.

ವಿವಿಧ ಭಜನಾ ಮಂಡಳಿಯ ಸದಸ್ಯರಿಂದ ಅಹೋರಾತ್ರಿ ಭಜನಾ ಕಾರ್ಯಕ್ರಮ ಜರಗಿತು. ಶ್ರೀ ದೇವರ ಸನ್ನಿಧಿಯಲ್ಲಿ ಸುಪ್ರಭಾತ, ದೀಪಾರಾಧನೆ, ಕಾಕಡ ಆರತಿ, ಪ್ರಸಾದ ವಿತರಣೆ ನಡೆಯಿತುವಿಶ್ವರೂಪ ದರ್ಶನದ ಹಿನ್ನೆಲೆಯಲ್ಲಿ ಶ್ರೀದೇವರ ಸನ್ನಿಧಿಯಲ್ಲಿ ವಿವಿಧ ಬಗೆಯ ಹೂಗಳಿಂದ ಹಾಗೂ ಬಣ್ಣಗಳಿಂದ ರಂಗೋಲಿಯಲ್ಲಿ ಜಯದುರ್ಗಾ ಪರಮೇಶ್ವರಿ, ವೆಂಕಟರಮಣ, ಶಂಖ, ಚಕ್ರ, ಶ್ರೀಲಕ್ಷ್ಮೀ, ಇಡುಗುಂಜಿ ಮಹಾಗಣಪತ, ಶ್ರೀರಾಮ, ಹರಿವಿಠಲ್, ಶ್ರೀನಿವಾಸ ದೇವರು, ಗೀತೋಪದೇಶ, ಶ್ರೀವಿಷ್ಣುವಿನ ಅವತಾರ ಮುಂತಾದ ಚಿತ್ತಾರ ಭಕ್ತರ ಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಯೋಜನೆಯಡಿ ದ.ಕ. ಜಿಲ್ಲೆಗೆ 4 ಸಾವಿರ ಕೋಟಿ ರು. ವ್ಯಯ: ಭರತ್‌
ಮೇಕೋಡು ಪ್ರಜಾಸೇವಾ ಆಂದೋಲನ