ರೋಶನ್ ಬೆಳ್ಮಣ್, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ರವಿ ಕಟಪಾಡಿ, ಸೂರಿ ಶೆಟ್ಟಿ ಕಾಪು, ವಿನಯ ಸಾಸ್ತನ ಮತ್ತು ತನುಲಾಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಕಾಪು
ಇಲ್ಲಿನ ಶಂಕರಪುರದ ‘ವಿಶ್ವಾಸದ ಮನೆ’ ಅನಾಥಾಶ್ರಮದ ರಜತ ಮಹೋತ್ಸವ ಸಂಭ್ರಮದಲ್ಲಿ ಜಿಲ್ಲೆಯ ಸಮಾಜ ಸೇವಕರಾದ ರೋಶನ್ ಬೆಳ್ಮಣ್, ವಿಶು ಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು, ರವಿ ಕಟಪಾಡಿ, ಸೂರಿ ಶೆಟ್ಟಿ ಕಾಪು, ವಿನಯ ಸಾಸ್ತನ ಮತ್ತು ತನುಲಾ ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ಹಿರಿಯ ನಾಗರಿಕ ಮತ್ತು ಸಬಲೀಕರಣ ಇಲಾಖೆ ಅಧಿಕಾರಿ ರತ್ನಾ, ಬಹುಭಾಷಾ ನಟ ಸುಮಂತ್ ತಲವಾರ್, ಉದ್ಯಮಿಗಳಾದ ಪ್ರಶಾಂತ್ ಜತ್ತನ್ನ, ಮೋಹನ್ ಶೆಟ್ಟಿ, ಮುಸ್ತಾಕ್ ಅಹಮ್ಮದ್, ಉಡುಪಿ ಪಾಸ್ಟರ್ ಅಸೋಶಿಯೇಶನ್‌ನ ಸೆಲ್ವಕುಮಾರ್, ವಿಜೇಂದ್ರ ಪಾರ್‍ಸೆಕರ್ ಮತ್ತು ಪ್ರೊ.ಶ್ರೀಜಿತ್ ಅತಿಥಿಗಳಾಗಿ ಆಗಮಿಸಿದ್ದರು.
ವಿಶ್ವಾಸದ ಮನೆಯ ಸಂಸ್ಥಾಪಕ ಸುನಿಲ್ ಡಿಸೋಜ ಪತ್ನಿ ಎಲಿಜಬೆತ್ ಡಿಸೋಜಾ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.