ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಶುಕ್ರವಾರ ನಗರಂಗೆರೆ ಗ್ರಾಪಂ ವ್ಯಾಪ್ತಿಯ ಸಿದ್ದಾಪುರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ದೂರದೃಷ್ಠಿ ಮತ್ತು ಗುರಿತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿ ಗ್ರಾಪಂ ಮಟ್ಟದಲ್ಲಿ ಇಂತಹ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ಇದರಿಂದ ಆಡಳಿತ ನಡೆಸುವ ಸದಸ್ಯರು ಮತ್ತು ಅನುಷ್ಠಾನಗೊಳಿಸುವ ಅಧಿಕಾರಿ ಮತ್ತು ಸಿಬ್ಬಂದಿ ನಡುವೆ ಸಾಮರಸ್ಯ ಮೂಡುತ್ತದಲ್ಲದೆ, ಸಾರ್ವಜನಿಕರಿಗೂ ಸಹ ಜಾಗೃತಿ ಮೂಡಿಸುವಲ್ಲಿ ಇದು ಸಹಕಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ನಾಗವೇಣಿ ಕರಿಯಣ್ಣ ಮಾತನಾಡಿ, ಶಿಬಿರವನ್ನು ಗ್ರಾಪಂ ಸದಸ್ಯರಿಗೆ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಸರ್ಕಾರ ನಿಯಮ ಮತ್ತು ಅನುಷ್ಠಾನ ಕುರಿತಂತೆ ಚುನಾಯಿತ ಸದಸ್ಯರಿಗೆ ಸ್ಪಷ್ಟ ನಿರ್ದೇಶನ ಇರುವುದಿಲ್ಲ. ಇಂತಹ ಶಿಬಿರಗಳಿಂದ ಸದಸ್ಯರು ಹೆಚ್ಚು, ಹೆಚ್ಚು ಕಲಿತು ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಶ್ರಮಿಸಬಹುದಾಗಿದೆ ಎಂದರು.ಗ್ರಾಪಂ ಸದಸ್ಯರಾದ ಎನ್.ಮಂಜುನಾಥ, ಅಂಗಡಿ ರಮೇಶ್, ಮಂಗಳಮ್ಮ, ರಂಗಸ್ವಾಮಿ, ರುದ್ರೇಶ್, ಚಂದ್ರಕುಮಾರ್, ಅನೋಡ್ ಗರ್ವನೆನ್ಸ್ ಫೌಂಡೇಶ್‌ನ ಲಿಂಗದೇವರು, ಕ್ರಿಸ್ಟಿಸನ್ನಿ, ಕ್ಷೇತ್ರ ಸಂಯೋಜಕ ಡಿ.ರವಿ, ಎಚ್.ಆರ್.ಮಧು, ಮಧುಸೂಧನ್, ಲಿಂಗರಾಜು ಮುಂತಾದವರಿದ್ದರು.