ಪಾಂಡವಪುರ:
ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಮಾತನಾಡಿ, ಮಕ್ಕಳನ್ನು ಪೋಲಿಯೋ ಮುಕ್ತ ಮಾಡುವ ಉದ್ದೇಶದಿಂದ ನಮ್ಮ ಸರ್ಕಾರಗಳು ಪ್ರತಿ ವರ್ಷ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿವೆ. 5 ವರ್ಷ ಒಳಪಟ್ಟ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಮಾತನಾಡಿ, ಮೂರು ದಿನಗಳ ಲಸಿಕೆ ಕಾರ್ಯಕ್ರಮದಲ್ಲಿ ನಾಳೆ ಮತ್ತು ನಾಳಿದ್ದು ಮನೆ ಮನೆಗೆ ಭೇಟಿ ಕೊಟ್ಟು ಲಸಿಕೆಯಿಂದ ಹೊರಗುಳಿದ ಮಕ್ಕಳಿಗೆ ಹಾಕಲಾಗುವುದು. ತಾಲೂಕಿನಲ್ಲಿ 11,053 ಮಕ್ಕಳಿದ್ದು ಎಲ್ಲರಿಗೂ ಲಸಿಕೆ ಹಾಕಲಾಗುವುದು ಎಂದರು.ಪಟ್ಟಣ ಸೇರಿದಂತೆ 57 ಬೂತ್ ಹಾಗೂ ಹೊರಗಿನಿಂದ ಬರುವ ಸಾರ್ವಜನಿಕರಿಗೆ ವಿಶೇಷವಾಗಿ ರೈಲ್ವೇ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಹೊಸಕನ್ನಂಬಾಡಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಬೂತ್ ನಿರ್ಮಿಸಲಾಗಿದೆ. ಲಸಿಕೆಗಾಗಿ 12 ಮೇಲ್ವಿಚಾರಕರು, 234 ಸಿಬ್ಬಂದಿ ಹಾಗೂ 13 ವಾಹನಗಳನ್ನು ಒಳಕೆ ಮಾಡಿಕೊಳ್ಳಲಾಗಿದೆ ಎಂದರು.
ಈ ವೇಳೆ ರಕ್ಷಾ ಸಮಿತಿ ಸದಸ್ಯ ಮಂಜುನಾಥ್, ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಕೆ.ಪುಟ್ಟಸ್ವಾಮಿ, ಡಾ.ಸುಪ್ರಿತ ಸೇರಿದಂತೆ ಹಲವರು ಇದ್ದರು.