ಬಿದ್ರೊಳ್ಳಿಗೆ ಆರೋಗ್ಯ ಸರ್ವೇಕ್ಷಣಾಧಿಕಾರಿಗಳ ಭೇಟಿ

KannadaprabhaNewsNetwork |  
Published : Jun 21, 2024, 01:07 AM IST
ಸರ್ವೇಕ್ಷಣಾ ತಂಡದ ಭೇಟಿ  | Kannada Prabha

ಸಾರಾಂಶ

ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಸ್ಥಳೀಯ ಗ್ರಾಪಂಕ್ಕೂ ಸೂಚನೆಗಳನ್ನು ನೀಡಿದ್ದು, ವಾಂತಿ- ಭೇದಿ ಬಾಧಿತ ರೋಗಿಗಳ ಆರೋಗ್ಯದ ಮೇಲೆ ನಿಗಾ ವಹಿಸಲು ಯಡೋಗಾ ಆರೋಗ್ಯ ಘಟಕಕ್ಕೆ ತಿಳಿಸಿದೆ.

ಹಳಿಯಾಳ: ವಾಂತಿ- ಭೇದಿ ಬಾಧಿತ ಬಿದ್ರೊಳ್ಳಿ ಗ್ರಾಮಕ್ಕೆ ಗುರುವಾರ ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿಗಳ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದಲ್ಲಿ ತುರ್ತು ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲು ಆದೇಶಿಸಿದೆ.ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಲು ಸ್ಥಳೀಯ ಗ್ರಾಪಂಕ್ಕೂ ಸೂಚನೆಗಳನ್ನು ನೀಡಿದ್ದು, ವಾಂತಿ- ಭೇದಿ ಬಾಧಿತ ರೋಗಿಗಳ ಆರೋಗ್ಯದ ಮೇಲೆ ನಿಗಾ ವಹಿಸಲು ಯಡೋಗಾ ಆರೋಗ್ಯ ಘಟಕಕ್ಕೆ ತಿಳಿಸಿದೆ. ಬಿದ್ರೊಳ್ಳಿಯಲ್ಲಿ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಯಾವುದೇ ಆತಂಕ ಪಡುವ ವಿಷಯವಿಲ್ಲ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ತಿಳಿಸಿದ್ದಾರೆ.ತುರ್ತು ಸಭೆ: ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಡಾ. ಅರ್ಚನಾ ನಾಯ್ಕ, ಡಾ. ರೇಣುಕಾ ಪ್ರಭು, ಡಾ. ಗೌರಿ ಮೊದಲಾದ ಪ್ರಮುಖ ವೈದ್ಯರ ತಂಡವು ಯಡೋಗಾ ಗ್ರಾಮದ ಆರೋಗ್ಯ ಘಟಕಕ್ಕೆ ಭೇಟಿ ನೀಡಿ ಬಿದ್ರೊಳ್ಳಿ ಗ್ರಾಮದಲ್ಲಿ ವ್ಯಾಪಿಸಿದ ವಾಂತಿ- ಭೇದಿಯ ಪರಿಸ್ಥಿತಿಯ ಅವಲೋಕನ ಸಭೆ ನಡೆಸಿದರು.

ಗ್ರಾಮದಲ್ಲಿ ವಾಂತಿ- ಭೇದಿ ಹರಡಲು ಕಾರಣವಾದ ಅಂಶಗಳ ಬಗ್ಗೆ ಮಾಹಿತಿ ಕಲೆಹಾಕಿ, ತಾಲೂಕು ವೈದ್ಯರಿಗೆ ಸೂಕ್ತ ನಿರ್ದೇಶನಗಳನ್ನು ನೀಡಿದರು. ಸಭೆಯಲ್ಲಿ ಸ್ಥಳಿಯ ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ, ಸ್ಥಳೀಯ ಆರೋಗ್ಯ ಘಟಕದ ವೈದ್ಯ ಡಾ. ಸ್ಟೇನ್ಲಿ ಇತರರು ಇದ್ದರು.ಸೂಕ್ತ ಚಿಕಿತ್ಸೆ: ಗುರುವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ವೈದ್ಯರ ತಂಡವು ಗ್ರಾಮಕ್ಕೆ ಭೇಟಿ ನೀಡಿದೆ. ವಾಂತಿ- ಭೇದಿ ಆರಂಭಗೊಂಡ ನಂತರ ಗ್ರಾಮದಲ್ಲಿ ಎರಡೂ ಜನ ಮೃತಪಟ್ಟಿದ್ದಾರೆ. ಆದರೆ ಇವರು ವಾಂತಿ ಭೇದಿಯಿಂದ ಮೃತಪಟ್ಟಿಲ್ಲ. ಅಸ್ವಸ್ಥರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಲಕುಮಾರ ನಾಯ್ಕ್ ತಿಳಿಸಿದರು.

ಕ್ಲೋರಿನೇಷನ್: ಜಿಲ್ಲಾ ವೈದ್ಯಾಧಿಕಾರಿಗಳ ತಂಡದ ನಿರ್ದೇಶನದಂತೆ ಪ್ರತಿ ದಿನ ಗ್ರಾಮದಲ್ಲಿ ಕ್ಲೋರಿನೇಷನ್ ಮಾಡಲಾಗುತ್ತಿದೆ. ಅಲ್ಲದೇ ಗ್ರಾಪಂ ವತಿಯಿಂದ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಮೊದಲಗೇರಾ ಗ್ರಾಪಂ ಪಿಡಿಒ ರವೀಂದ್ರ ಬಾಬು ತಿಳಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ