ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದ ಕನ್ನಡ ಭವನದ ಕೆ.ಎನ್.ರಾಜಣ್ಣ ಸಭಾಂಗಣದಲ್ಲಿ ಮಧುಗಿರಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವೇಕ ಚಿಂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ಬದಲಾಗದೇ ದೇಶ ಬದಲಾಗದು. ನಮ್ಮ ಚಿಂತನೆಗಳು ಪವಿತ್ರವಾಗಿದ್ದಾಗ ಮಾತ್ರ ಮುಂದಿನ ದಿನಗಳು ಉಜ್ವಲವಾಗತ್ತವೆ. ಜನರಲ್ಲಿ ಮೂಢನಂಬಿಕೆಗಳನ್ನು ಬಿತ್ತದೆ ಆತ್ಮವಿಶ್ವಾಸವನ್ನು ಬೆಳಸಿ ಎಂದು ವಿವೇಕಾನಂದರು ಭಾರತೀಯರಿಗೆ ಕರೆ ನೀಡಿದರು. ನಿಮ್ಮನ್ನು ನೀವು ನಂಬಿ ಇತರರ ವಿಚಾರ ಧಾರೆಗಳನ್ನು ಗೌರವಿಸಿ ಸಮಾಜದಲ್ಲಿ ಪವಿತ್ರವಾದುದನ್ನು ಬಿತ್ತಿ ಬೆಳಸಿ ಎಂಬ ವಿವೇಕಾನಂದರ ನುಡಿ ಸಾರ್ವಕಾಲಿಕವಾದುದು ಎಂದರು. ಮಧುಗಿರಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಮಲಾನಂದ ಸ್ವಾಮಿಜಿ ಮಾತನಾಡಿ, ಇಂದಿನ ಯುವ ಜನಾಂಗ ವಿವೇಕಾನಂದ ಆದರ್ಶ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭ್ಯುದಯ ಹಾಗೂ ಸಮಾಜದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸಹನಾ ನಾಗೇಶ್,ಶಾರದ ಮಂಡಳಿ ಅಧ್ಯಕ್ಷೆ ಶಕುಂತಲಾ ಗುಂಡುರಾವ್, ದೈಹಿಕ ಶಿಕ್ಷಕ ಯರಗಾಮಯ್ಯ ,ಶಹ ಶಿಕ್ಷಕ ಚಂದ್ರಶೇಖರ್ ಇತರರು ಇದ್ದರು.