ಗದಗ: ಶರಣರ ಸತ್ವಯುತ ವಚನಗಳು ವ್ಯಕ್ತಿತ್ವದ ಪ್ರಾಮಾಣಿಕ ಪ್ರತಿಬಿಂಬಗಳಂತೆ, ದಿನ ನಿತ್ಯದ ಬದುಕಿನಲ್ಲಿ ಪಾರಮಾರ್ಥಿಕ ಶಕ್ತಿ ತುಂಬಿದವು. ಅಂತೆಯೇ ವೈಚಾರಿಕ ನಿಲುವನ್ನು ಸದೃಢಗೊಳಿಸಿದವು. ವಚನಗಳು ಪೂರ್ಣತೆಯತ್ತ ಸಾಗುವ ಅಂತರಂಗದ ಅಭಿಪ್ಸೆಗೆ ಸಾಧನ ಮಾರ್ಗಗಳಾದವು ಚೈತನ್ಯ ಜೀವನಾಡಿಗಳಾಗಿ ಸಾರ್ವಕಾಲಿಕ ಮೌಲ್ಯ ಬಿತ್ತರಿಸಿದವು ಎಂದು ಹುಬ್ಬಳ್ಳಿ ಮಹೇಶ ಪಪೂ ಮಹಾವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಐ .ಎಸ್. ಹಿರೇಮಠ ಹೇಳಿದರು.
ಕನ್ನಡ ಸಾಹಿತ್ಯ ಪರಂಪರೆಯಲ್ಲಿ ತುಂಬಾ ವಿಶೇಷ ಸ್ಥಾನ ವಚನ ಸಾಹಿತ್ಯಕ್ಕೆ ಇದೆ. ಧರ್ಮ, ನೀತಿ, ತತ್ವ ಆಧ್ಯಾತ್ಮ, ಸಮಾಜ, ವಿಜ್ಞಾನ ಮನೋವಿಜ್ಞಾನ, ರಾಜಕೀಯ ಹೀಗೆ ಪರಿಶುದ್ಧ ಜೀವನಕ್ಕೆ ಬೇಕಾದ ಎಲ್ಲ ಸಂಗತಿಗಳೂ ಅಡಕವಾಗಿವೆ. ಕಳಬೇಡ ಕೊಲಬೇಡ ಎನ್ನುವ ವಚನ ಪ್ರತಿಯೊಬ್ಬ ಪರಿಪೂರ್ಣ ವ್ಯಕ್ತಿ ಪಾಲಿಸಬೇಕಾದ ಸಪ್ತ ಸೂತ್ರಗಳಾಗಿವೆ ಎಂದು ವಿವರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 20, 21 ಹಾಗೂ 22 ರಂದು ಮಂಡ್ಯದಲ್ಲಿ ಜರುಗಲಿದ್ದು, ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ಗದಗ ಜಿಲ್ಲೆಯಲ್ಲಿ ಸೆ. 28 ಹಾಗೂ 29 ರಂದು ಲಕ್ಷ್ಮೇಶ್ವರ-ಶಿರಹಟ್ಟಿ-ಮುಂಡರಗಿ-ಗಜೇಂದ್ರಗಡ-ರೋಣ-ನರಗುಂದ ಮಾರ್ಗವಾಗಿ ಗದಗ-ಬೆಟಗೇರಿಯಲ್ಲಿ ಸಂಚರಿಸಲಿದೆ. ಕನ್ನಡ ರಥವನ್ನು ಅದ್ಧೂರಿಯಿಂದ ಸ್ವಾಗತಿಸಲು ತಾವೆಲ್ಲ ಸೇರಬೇಕೆಂದು ವಿನಂತಿಸಿದರು.ಈ ವೇಳೆ ಪ್ರೊ.ಐ.ಎಸ್. ಹಿರೇಮಠ, ಕೆ.ಜಿ.ವ್ಯಾಪಾರಿ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಕೆ.ಎಚ್.ಬೇಲೂರ, ಪ್ರಾ. ಚಂದ್ರಶೇಖರ ವಸ್ತ್ರದ, ಅಜಿತ್ ಘೋರ್ಪಡೆ, ಸುರೇಶ ಕುಂಬಾರ, ಡಾ. ರಾಜಶೇಖರ ದಾನರಡ್ಡಿ, ಎಚ್.ಡಿ.ಕುರಿ, ಜಗನ್ನಾಥ ಟೀಕಂದಾರ, ಸಿದ್ದಲಿಂಗೇಶ ಸಜ್ಜನಶೆಟ್ಟರ, ಶೇಕಣ್ಣ ಕಳಸಾಪುರ, ಬಸವರಾಜ ಗಣಪ್ಪನವರ, ಜೆ.ಎ.ಪಾಟೀಲ, ಶಿವಾನಂದ ಭಜಂತ್ರಿ, ಅಶೋಕ ಸತ್ಯರಡ್ಡಿ, ಎಂ.ಎಂ.ಶೆಟವಾಜಿ, ಆರ್.ಡಿ.ಕಪ್ಪಲಿ, ಪರಮೇಶ್ವರ ಐರಣಿ, ಆರ್.ವಿ.ಕುಪ್ಪಸ್ತ, ಪಿ.ಸಿ.ಕನಾಜ, ಶರಣಪ್ಪ ಹೊಸಂಗಡಿ, ರಾಜಶೇಖರ ಕರಡಿ, ಎನ್.ಎಂ.ಪವಾಡಿಗೌಡ್ರ, ಕೆ.ಎಸ್. ಪಲ್ಲೇದ, ಬಸವರಾಜ ತೋಟಿಗೇರ, ಡಿ.ಎಸ್. ಬಾಪೂರಿ, ಸತೀಶಕುಮಾರ ಚನ್ನಪ್ಪಗೌಡ್ರ, ಶಶಿಕಾಂತ ಕೊರ್ಲಹಳ್ಳಿ, ಮಲ್ಲಿಕಾರ್ಜುನ ನಿಂಗೋಜಿ, ರತ್ನಕ್ಕ ಪಾಟೀಲ, ಶಾಂತಲಾ ಹಂಚಿನಾಳ,ಶೈಲಜಾ ಗಿಡ್ನಂದಿ, ಶಾಂತಾ ಗಣಪ್ಪನವರ, ರತ್ನಾ ಪುರಂತರ, ಶಾರದಾ ಬಾಣದ ಇದ್ದರು.
ಗೌರವ ಕಾರ್ಯದರ್ಶಿ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.