ಕನ್ನಡಪ್ರಭ ವಾರ್ತೆ ಕೋಲಾರಜೀವನ ಕೌಶಲ ಕಲಿಸುವ ವೃತ್ತಿಶಿಕ್ಷಣ ಸ್ವಾವಲಂಬಿ ಬದುಕಿಗೆ ಗಟ್ಟಿಯಾದ ಬುನಾದಿಯಾಗಿದ್ದು, ಮಕ್ಕಳ ಸರ್ವತೋಮುಖ ಬೆಳೆವಣಿಗೆಗೆ ಸಹಕಾರಿಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎಸ್.ಆರ್.ವೀಣಾ ತಿಳಿಸಿದರು.ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿಶಿಕ್ಷಣ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಮಾಸಿಕ ಸಭೆ ಹಾಗೂ ಶೈಕ್ಷಣಿಕ ಕಾರ್ಯಾಗಾರದಲ್ಲಿ ಮಾತನಾಡಿದರು.ಕಲಿಕೆಯ ಜತೆಗೆ ಗಳಿಕೆ
ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮಾತನಾಡಿ, ಶಾಲೆಗಳಲ್ಲಿ ವೃತ್ತಿಶಿಕ್ಷಣ ಮತ್ತು ದೈಹಿಕ ಶಿಕ್ಷಣ ತರಗತಿಯ ಅವಧಿ ಸದಾ ಪಠ್ಯ ಓದು, ಗೃಹಪಾಠ ಬರೆ ಎಂಬ ಇತರ ವಿಷಯಗಳ ಒತ್ತಡ ಕಡಿಮೆ ಮಾಡಿ ಮಕ್ಕಳಲ್ಲಿ ನೆಮ್ಮದಿ,ಸಂತೃಪ್ತಿ ತಂದುಕೊಡುತ್ತದೆ. ಕೃಷಿ, ತೋಟಗಾರಿಕೆ, ಹೊಲಿಗೆ, ರೇಷ್ಮೆ, ಬಡಗಿ, ಚಿತ್ರಕಲೆ, ಸಂಗೀತ ಮತ್ತಿತರ ತರಗತಿಗಳು ಮಕ್ಕಳಲ್ಲಿ ಕೌಶಲ್ಯ ತುಂಬಿ ಅವರು ಬದುಕುಕಟ್ಟಿಕೊಳ್ಳಲು ಮಾರ್ಗದರ್ಶನ ನೀಡುತ್ತವೆ ಎಂದರು.
ಗೃಹ ಕೈಗಾರಿಕೆಗೆ ಒತ್ತು ನೀಡಿವಿಷಯ ಪರಿವೀಕ್ಷ ಸಮೀವುಲ್ಲಾ ಮಾತನಾಡಿ, ಗಾಂಧೀಜಿಯವರ ಕನಸಾದ ಗೃಹ ಕೈಗಾರಿಕೆಗಳನ್ನು ನಾವು ಮರೆತಿದ್ದರಿಂದಲೇ ಇಂದು ನಿರುದ್ಯೋಗ ತಾಂಡವವಾಡುತ್ತಿದೆ, ಬಾಪು ಕನಸಿಕನ ಮೂಲ ಶಿಕ್ಷಣವನ್ನು ನಾವು ಬಲಗೊಳಿಸಬೇಕಾಗಿದೆ ಎಂದು ತಿಳಿಸಿದರು. ವಿಷಯ ಪರಿವೀಕ್ಷಕಿ ಬಬಿತಾ ಮಾತನಾಡಿ, ವೃತ್ತಿಶಿಕ್ಷಕರು ಹಸಿರೀಕರಣ ಮಾಡುವುದು ಮಾತ್ರವಲ್ಲ ಶಾಲೆಯ ವಿವಿಧ ಚಟುವಟಿಕೆಗಳಲ್ಲೂ ಮುಖ್ಯಪಾತ್ರ ವಹಿಸುತ್ತಿದ್ದು, ನಮಗೆ ಪ್ರತ್ಯೇಕ ಪಠ್ಯ ಪುಸ್ತಕ ಇಲ್ಲ, ಈ ಕೊರಗು ನಿವಾರಿಸಲು ಇಲಾಖೆ ಅಗತ್ಯ ಕ್ರಮವಹಿಸಬೇಕು ಎಂದರು.ನಿಕಟಪೂರ್ವ ವಿಷಯ ಪರಿವೀಕ್ಷಕ ವೆಂಕಟೇಶಬಾಬು ಮಾತನಾಡಿ, ಇತರೆ ಪಠ್ಯ ವಿಷಯಗಳಂತೆ ನಮ್ಮ ಪಠ್ಯಕ್ಕೂ ಮಾನ್ಯತೆ ಇದೆ. ಮಕ್ಕಳಲ್ಲಿ ಸ್ವಚ್ಛತೆ, ಶುಚಿತ್ವದ ಅರಿವು ನೀಡುವ ಮೂಲಕ ಶಾಲೆಯ ಪರಿಸರವನ್ನು ರೋಗ ಮುಕ್ತಗೊಳಿಸುವ ಕಾರ್ಯದಲ್ಲಿ ನಮ್ಮ ಪಾತ್ರ ಮರೆಯಲು ಸಾಧ್ಯವಿಲ್ಲ ಎಂದರು.ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿ
ಅಧಿಕಾರಿಗಳಿಗೆ ಸನ್ಮಾನ
ವೃತ್ತಿಶಿಕ್ಷಕರ ಸಂಘದ ರಾಜ್ಯಪ್ರತಿನಿಧಿ ಜಿ.ಟಿ.ರಾಮಚಂದ್ರ ನಿರೂಪಿಸಿದ ಕಾರ್ಯಕ್ರಮದಲ್ಲಿ ಸಂಘದ ಖಜಾಂಚಿ ಟಿ.ಎ.ಪ್ರಕಾಶ್‌ಬಾಬು, ಉಪಾಧ್ಯಕ್ಷೆ ಧನಲಕ್ಷ್ಮಿ, ಮುರಳಿ, ಚಿತ್ರಕಲಾ ಮತ್ತು ವೃತ್ತಿ ಶಿಕ್ಷಕರಾದ ನಾಗರಾಜ್, ರಾಜಶೇಖರ್, ಚಲಪತಿ, ಆರ್.ವೆಂಕಟಪತಿ, ನಾಗರತ್ನಮ್ಮ, ಚೌಡಮ್ಮ,ಪದ್ಮಾವತಿ,ಶಾಂತಮ್ಮ ಮತ್ತಿತರರಿದ್ದು, ಚಿತ್ರಕಲಾಶಿಕ್ಷಕ ಗುಲ್ಜಾರ್ ಪ್ರಾರ್ಥಿಸಿ, ಶ್ರೀನಿವಾಸಲು ಸ್ವಾಗತಿಸಿದರು.