ಶಿಕ್ಷಣದ ಜತೆ ವೃತ್ತಿಕೌಶಲವೂ ಅಗತ್ಯ

KannadaprabhaNewsNetwork |  
Published : Jan 15, 2025, 12:50 AM IST
೧೩ಕೆಎಲ್‌ಆರ್-೧೧ಕೋಲಾರದ ಮೆಥೋಡಿಸ್ಟ್ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ವಸ್ತುಪ್ರದರ್ಶನವನ್ನು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್, ಬಿಇಒ ಉಮಾ, ಶಿಕ್ಷಣಾಧಿಕಾರಿ ವೀಣಾ, ಸಗೀರಾ ಅಂಜುಂ ಉದ್ಘಾಟಿಸಿದರು. | Kannada Prabha

ಸಾರಾಂಶ

ಕಲಿಕೆಯ ಜತೆಗೆ ಗಳಿಕೆ ಹಾಗೂ ಸ್ವಾವಲಂಬಿ ಬದುಕಿಗೆ ದಾರಿ ತೋರುವ ಜೀವನ ಶಿಕ್ಷಣವೇ ವೃತ್ತಿ ಶಿಕ್ಷಣವಾಗಿದ್ದು, ಮಕ್ಕಳ ಬಹುಮುಖ ಪ್ರತಿಭೆ ಅನಾವರಣದ ಜತೆಗೆ ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡುತ್ತದೆ. ಬದುಕು ಕಟ್ಟಿಕೊಳ್ಳುವ ಶಿಕ್ಷಣವೇ ವೃತ್ತಿ ಶಿಕ್ಷಣವಾಗಿದ್ದು, ಯಾವುದೇ ಶಾಲೆಯಲ್ಲಿ ಸುಂದರ ಪರಿಸರ ನಿರ್ಮಾಣಕ್ಕೆ ಆಯಾ ಶಾಲೆಯ ವೃತ್ತಿಶಿಕ್ಷಕರೇ ಕಾರಣ.

ಕನ್ನಡಪ್ರಭ ವಾರ್ತೆ ಕೋಲಾರಯುವ ಜನತೆಗೆ ಶಿಕ್ಷಣದೊಂದಿಗೆ ವೃತ್ತಿ ಕೌಶಲ್ಯ ನೀಡಿದಾಗ ಮಾತ್ರ ಸ್ವಾವಲಂಬಿ ಬದುಕಿನ ಜತೆಗೆ ದೇಶಕ್ಕೆ ಉತ್ತಮ ಮಾನವ ಸಂಪನ್ಮೂಲ ಒದಗಿಸಿದಂತಾಗುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಕೆ.ಶ್ರೀನಿವಾಸ್ ಅಭಿಪ್ರಾಯಪಟ್ಟರು.ನಗರದ ಮೆಥೋಡಿಸ್ಟ್ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರೌಢಶಾಲಾ ವೃತ್ತಿ ಶಿಕ್ಷಣ ವಸ್ತುಪ್ರದರ್ಶನ ಹಾಗೂ ವೃತ್ತಿ ಶಿಕ್ಷಣ ಮಕ್ಕಳ ಶೈಕ್ಷಣಿಕ ಕಲಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.ಬದುಕಿಗೆ ಪ್ರೇರಣೆ:

ಕಲಿಕೆಯ ಜತೆಗೆ ಗಳಿಕೆ ಹಾಗೂ ಸ್ವಾವಲಂಬಿ ಬದುಕಿಗೆ ದಾರಿ ತೋರುವ ಜೀವನ ಶಿಕ್ಷಣವೇ ವೃತ್ತಿ ಶಿಕ್ಷಣವಾಗಿದ್ದು, ಮಕ್ಕಳ ಬಹುಮುಖ ಪ್ರತಿಭೆ ಅನಾವರಣದ ಜತೆಗೆ ಸ್ವಾವಲಂಬಿ ಜೀವನಕ್ಕೆ ಪ್ರೇರಣೆ ನೀಡುತ್ತದೆ ಎಂದು ತಿಳಿಸಿದರು.ವೃತ್ತಿಶಿಕ್ಷಣದಿಂದ ಕ್ರಿಯಾಶೀಲತೆ

ಬಿಇಒ ಕೆ.ಉಮಾ ಮಾತನಾಡಿ, ಶಾಲೆಗಳಲ್ಲಿ ಕ್ರಿಯಾಶೀಲತೆಗೆ ಆದ್ಯತೆ ನೀಡಬೇಕು, ಮಕ್ಕಳಲ್ಲಿ ಆಸಕ್ತಿ ಬೆಳೆಸಲು ಇದು ಅಗತ್ಯ. ಮಕ್ಕಳಲ್ಲಿನ ಪ್ರತಿಭೆ ಹೊರತೆಗೆದು ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಬದುಕು ಕಟ್ಟಿಕೊಳ್ಳುವ ಶಿಕ್ಷಣವೇ ವೃತ್ತಿ ಶಿಕ್ಷಣವಾಗಿದ್ದು, ಯಾವುದೇ ಶಾಲೆಯಲ್ಲಿ ಸುಂದರ ಪರಿಸರ ನಿರ್ಮಾಣಕ್ಕೆ ಆಯಾ ಶಾಲೆಯ ವೃತ್ತಿಶಿಕ್ಷಕರೇ ಕಾರಣ ಎಂದರು.

ವಿಷಯ ಪರಿವೀಕ್ಷಕ ಸಮೀವುಲ್ಲಾ, ವೆಂಕಟೇಶಬಾಬು, ವೃತ್ತಿಶಿಕ್ಷಕರ ಸಂಘದ ಅಧ್ಯಕ್ಷ ಆಂಜನೇಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಣಾಧಿಕಾರಿ ಸಗೀರಾಅಂಜುಂ, ಶಿಕ್ಷಣ ಸಂಯೋಜಕ ಸಿ.ಎಂ.ವೆಂಕಟರಮಣಪ್ಪ, ವೃತ್ತಿ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಟಿ.ಎ.ಪ್ರಕಾಶ್ ಬಾಬು, ಮಾರ್ಕಂಡೇಶ್ವರ್, ಮುರಳಿ, ವೆಂಕಟಪತಿ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ