ಕನ್ನಡಪ್ರಭ ವಾರ್ತೆ ತೇರದಾಳ
ಸೋಮವಾರ ಸಂಸ್ಥೆಯ ಎಸ್ಡಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರೀಯ ಪಠ್ಯಕ್ರಮ ವ್ಯವಸ್ಥೆಯಲ್ಲಿ ನಮ್ಮ ರಾಜ್ಯಕ್ಕೆ 8ನೇ ಕ್ರಮಾಂಕವಿದ್ದು, ನಮ್ಮ ಸಂಸ್ಥೆಗೆ ಈ ಬಾರಿ ವ್ಹಾಲಿಬಾಲ್ ಪಂದ್ಯಾವಳಿ ಆಯೋಜಿಸಲು ಕೇಂದ್ರ ಬೋರ್ಡ್ ಅನುಮತಿಸಿರುವುದು ಸಂಸ್ಥೆಯ ಹಿರಿಮೆ ಹೆಚ್ಚಿಸಿದೆ. ಒಟ್ಟು ರಾಜ್ಯಾದ್ಯಂತ ಇರುವ ಸಿಬಿಎಸ್‌ಸಿ 338 ಶಾಲೆಗಳಿಂದ 314 ಬಾಲಕರ ಹಾಗೂ 152 ಬಾಲಕಿಯರ ತಂಡಗಳು ಪಾಲ್ಗೊಳ್ಳಲಿದ್ದು, ಒಟ್ಟು 5906 ಕ್ರೀಡಾಳುಗಳು, 676 ಅಧಿಕಾರಿಗಳು, ತಾಂತ್ರಿಕ ಸಮಿತಿ ಸದಸ್ಯರು ಹಾಗೂ 85 ಕೇಂದ್ರದ ಅಧಿಕೃತ ತೀರ್ಪುಗಾರರು ಪಾಲ್ಗೊಳ್ಳಿದ್ದಾರೆ. ಕ್ರೀಡಾಕೂಟಗಳ ಸಮಗ್ರ ವೀಕ್ಷಣೆಗೆ ಇಬ್ಬರು ಕೇಂದ್ರದ ಅಧಿಕಾರಿಗಳು ಆಗಮಿಸಲಿದ್ದು, ಸ್ಥಳೀಯ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ನಿಯೋಜನೆಗೊಂಡ ದೈಹಿಕ ಶಿಕ್ಷಕರು, ಪೋಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಕೆಪಿಟಿಸಿಎಲ್ ಸಿಬ್ಬಂದಿ, ತಂಡಗಳ ವ್ಯವಸ್ಥಾಪಕರು, ತರಬೇತುದಾರರು ಸೇರಿ 7 ಸಾವಿರಕ್ಕೂ ಅಧಿಕ ಸಿಬ್ಬಂದಿ ಕ್ರೀಡಾಕೂಟಗಳ ಯಶಸ್ಸಿಗೆ ಶ್ರಮಿಸಲಿದ್ದಾರೆ.
ಅತೀ ಹೆಚ್ಚು ಗ್ರೇಟ್ ಬೆಂಗಳೂರು ಜಿಲ್ಲೆಯ ತಂಡಗಳು ನೋಂದಣಿಯಾಗಿದ್ದು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಕೊಡಗು, ಮಂಗಳೂರು, ಬಾಗಲಕೋಟೆ, ವಿಜಯಪುರ, ರಾಯಚೂರ, ವಿಜಯನಗರ, ಬಳ್ಳಾರಿ, ಬೆಳಗಾವಿ ಸೇರಿದಂತೆ ಬಹುತೇಕ ಪ್ರದೇಶಗಳ ಕ್ರೀಡಾಳುಗಳು ದಿ.23ರಂದು ಕುಡಚಿ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ಅವರನ್ನು ಕರೆತರಲು ವಾಹನಗಳ, ವಸತಿ, ಭದ್ರತೆ, ಗುಣಮಟ್ಟದ ಊಟ-ಉಪಹಾರಗಳ ಹಾಗೂ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳ ವ್ಯವಸ್ಥೆಗೊಳಿಸಲಾಗಿದೆ.24ರಂದು ಬೆಳಗ್ಗೆ 9ಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಹಾಗೂ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ, 26ರಂದು ಸಂಜೆ ಮುಖ್ಯ ಅತಿಥಿಗಳು, ವಿಶೇಷ ಆವ್ಹಾನಿತರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ಜರುಗಲಿದೆಯೆಂದು ವಿವರಿಸಿದರು. ಸಂಸ್ಥೆಯ ಡೀನ್ ವಿಶ್ವನಾಥ ರೆಡ್ಡಿ, ಪ್ರಾಚಾರ್ಯ ಸಂದೀಪ ಸಮಸೋಲೆ, ವ್ಯವಸ್ಥಾಪಕ ರಾಜೇಂದ್ರ ಪರೀಟ, ಶ್ರೀಧರ ಬೆಳಗಲಿ, ಶಾಂತಿಸಾಗರ ಪದಮಗೊಂಡ, ಕ್ರೀಡಾ ನಿರ್ದೇಶಕ ರಾಮು ಹಾಡಕರ ಸೇರಿದಂತೆ ಸಿಬ್ಬಂದಿಗಳಿದ್ದರು.