ಗಿರೀಶ್ ಮಾದೇನಹಳ್ಳಿಕನ್ನಡಪ್ರಭ ವಾರ್ತೆ ಬೆಂಗಳೂರು
ಮೊದಲೆಲ್ಲ ಠಾಣೆಗಳ ನಡುವೆ ‘ಗಡಿರೇಖೆ’ ಎಳೆದುಕೊಂಡು ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು. ಕೆಲವು ಬಾರಿ ನಾಗರಿಕರ ನೋವಿಗೆ ಸ್ಪಂದಿಸಲು ಗಡಿ ಸಬೂಬು ಹೇಳಿ ಹೊಣೆಗಾರಿಕೆಯಿಂದ ಖಾಕಿಧಾರಿಗಳು ಜಾರಿಗೊಳುತ್ತಿದ್ದರು. ಈ ಗಡಿ ಸಮಸ್ಯೆಗೆ ಸಾರ್ವಜನಿಕರ ತೀವ್ರ ಆಕ್ಷೇಪಣೆ ವ್ಯಕ್ತವಾದ ಹಿನ್ನಲೆಯಲ್ಲಿ ಜಾಗೃತರಾದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಜಂಟಿ ಆಯುಕ್ತ ಕುಲದೀಪ್ ಕುಮಾರ್ ಜೈನ್ ಅವರು ಕೊನೆಗೆ ಪೊಲೀಸರ ‘ಗಡಿಮಿತಿ’ಯನ್ನು ತೆರವುಗೊಳಿಸಿದ್ದಾರೆ. ಇದರ ಫಲಪ್ರದವಾಗಿ ನೊಂದವರ ಪ್ರಾಣ ಉಳಿಯುವಂತಾಗಿದೆ.
ಕರೆ ಬಂದರೆ ಕೂಡಲೇ ಸ್ಪಂದಿಸಿ:ಪೊಲೀಸ್ ಕೆಲಸಗಳಿಗೆ ಯಾವುದೇ ಗಡಿ ಇಲ್ಲ. ಜನರ ಸಮಸ್ಯೆಗೆ ಸ್ಪಂದಿಸಲು ಠಾಣಾ ವ್ಯಾಪ್ತಿ ತಕರಾರು ಮಾಡಬಾರದು. ಹೀಗಾಗಿಯೇ ನಗರ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ತುರ್ತು ಕರೆಗಳು ಸ್ವೀಕರಿಸಿದ ತಕ್ಷಣವೇ ಸಂಕಷ್ಟದಲ್ಲಿ ಸಿಲುಕುವ ನಾಗರಿಕರಿಗೆ ಪೊಲೀಸರ ನೆರವು ಸಿಗುವಂತೆ ವ್ಯವಸ್ಥೆ ಸುಧಾರಿಸಿದ್ದೇವೆ ಎಂದು ಜಂಟಿ ಪೊಲೀಸ್ ಆಯುಕ್ತ (ಆಡಳಿತ) ಕುಲದೀಪ್ ಕುಮಾರ್ ಜೈನ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನಮ್ಮ ಠಾಣಾ ಸರಹದ್ದಿಗೆ ಬರುವುದಿಲ್ಲ ಎಂದೆಲ್ಲ ಕಾರಣಗಳನ್ನು ಹೇಳುವಂತಿಲ್ಲ. ತುರ್ತು ಸಂದೇಶ ರವಾನಿಸಿದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ನಮೂದಾಗಿರುತ್ತದೆ. ಸುಳ್ಳು ಹೇಳಿ ಕರ್ತವ್ಯಲೋಪವೆಸಗಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕಳೆದ ಜನವರಿಯಿಂದ ಜೂನ್‌ವರೆಗೆ ಆತ್ಮಹತ್ಯೆಗೆ ಯತ್ನಿಸಿದ 60 ಜನರನ್ನು ಪೊಲೀಸರು ರಕ್ಷಿಸಿದ್ದಾರೆ. ಇನ್ನು ಕಾಣೆಯಾದವರ ಪತ್ತೆಯಲ್ಲಿ ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಫೆಬ್ರವರಿಯಿಂದ ಜೂನ್‌ವರೆಗೆ 672 ಜನರನ್ನು ಪೊಲೀಸರು ಹುಡುಕಿ ಪೋಷಕರಿಗೆ ತಲುಪಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಅಪ್ರಾಪ್ತ ಮಕ್ಕಳು ಹಾಗೂ ಮಹಿಳೆಯರ ನಾಪತ್ತೆ ಹಿಂದೆ ಮಾನವ ಕಳ್ಳ ಸಾಗಾಣಿಕೆ ಕರಿನೆರಳಿದೆ ಎಂಬ ಆರೋಪಗಳಿವೆ. ಇಂದು ಪೊಲೀಸರ ತುರ್ತು ಸ್ಪಂದನೆ ಪರಿಣಾಮ ನಗರದಲ್ಲಿ ನಾಪತ್ತೆ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಅಂಕಿ ಅಂಶಗಳು ಸಾಕ್ಷ್ಯ ನುಡಿಯುತ್ತಿವೆ. ಕಳೆದ 5 ತಿಂಗಳಲ್ಲಿ ಪೊಲೀಸ್ ನಿಯಂತ್ರಣ ಕೊಠಡಿಗೆ ಮಕ್ಕಳು, ವಯಸ್ಕರು ಹಾಗೂ ಹಿರಿಯ ನಾಗರಿಕರ ನಾಪತ್ತೆ ಸಂಬಂಧ 1169 ಕರೆಗಳು ಬಂದಿವೆ. ಇದರಲ್ಲಿ 998 ಜನರು ಪತ್ತೆಯಾಗಿದ್ದಾರೆ. ಈ ಪೈಕಿ 181 ವಯಸ್ಕರು ಹಾಗೂ 217 ಮಕ್ಕಳನ್ನು ಹೊಯ್ಸಳ ಸಿಬ್ಬಂದಿ ರಕ್ಷಿಸಿ ಹೆತ್ತವರ ಮಡಿಲಿಗೆ ಸೇರಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಸ್ಪಂದಿಸುವ ಸಲುವಾಗಿ 65 ಬೈಕ್‌ಗಳನ್ನು ರಕ್ಷಣಾ ಕಾರ್ಯಾಚರಣೆಗೆ ಅಧಿಕಾರಿಗಳು ಬಳಸುತ್ತಿದ್ದಾರೆ. ಕಾರು ಓಡಾಡಲು ಸಾಧ್ಯವಾಗದ ಸ್ಥಳಗಳಿಗೆ ಬೈಕ್‌ಗಳನ್ನು ಉಪಯೋಗಿಸಲಾಗುತ್ತದೆ. ಇವುಗಳು ಹಗಲು ಹೊತ್ತು ಗಸ್ತು ತಿರುಗಾಟ ನಡೆಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಕಷ್ಟದಲ್ಲಿರುವ ಜನರಿಗೆ ಸರಾಸರಿ 6.5 ನಿಮಿಷದಲ್ಲಿ ಪೊಲೀಸರು ನೆರವು ಸಿಗುತ್ತಿದ್ದು, ಇದನ್ನು ಮತ್ತಷ್ಟು ಸುಧಾರಿಸಲು ಹೆಚ್ಚಿನ ಹೊಯ್ಸಳ ವಾಹನ ಒದಗಿಸುವಂತೆ ಸರ್ಕಾರಕ್ಕೆ ಪೊಲೀಸರು ಕೋರಿಕೆ ಸಲ್ಲಿಸಿದ್ದಾರೆ. ಮುಂಬೈನಲ್ಲಿ 5 ನಿಮಿಷಗಳಿಗೆ ಪೊಲೀಸರು ಘಟನಾ ಸ್ಥಳದಲ್ಲಿರುತ್ತಾರೆ. ಆ ಮಹಾನಗರದಲ್ಲಿ 800 ಹೊಯ್ಸಳಗಳಿವೆ ಎನ್ನುತ್ತಾರೆ ಅಧಿಕಾರಿಗಳು.
ವರ್ಷರಕ್ಷಣೆಪತ್ತೆಯಾಗದವರುಸಾವು2026(ಜನವರಿ-ಮೇ)479741620257962245ಒಟ್ಟು128681310ವಯಸ್ಸುವಯಸ್ಕರುವೃದ್ಧರುಮಕ್ಕಳುಒಟ್ಟು
ಪತ್ತೆಯಾದವರು12060171301ಕಾಣೆಯಾದವರು18199217497
ಎಫ್‌ಐಆರ್12071029ನಾಗರಿಕರಿಗೆ ಪೊಲೀಸ್ ಸೇವೆ ಮತ್ತಷ್ಟು ಸರಳೀಕರಣಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿ ಯೋಜನೆ ರೂಪಿಸಲಾಗುತ್ತಿದೆ. ಸಂಕಷ್ಟದಲ್ಲಿ ಸಿಲುಕುವ ಜನರಿಗೆ ನೆರವಾಗುವ ಸಲುವಾಗಿ ಕನ್ನಡ ಹಾಗೂ ಇಂಗ್ಲಿಷ್ ಮಾತ್ರವಲ್ಲದೆ ಇತರೆ ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡಲಾಗುತ್ತಿದೆ.
-ಕುಲದೀಪ್ ಕುಮಾರ್.ಆರ್.ಜೈನ್, ಜಂಟಿ ಪೊಲೀಸ್ ಆಯುಕ್ತ (ಆಡಳಿತ), ಬೆಂಗಳೂರು ನಗರ