ಕನ್ನಡಪ್ರಭ ವಾರ್ತೆ ಸವದತ್ತಿ
ಸ್ಥಳೀಯ ಕೆಜಿಎಫ್ ಫೌಂಡೇಶನ್, ಎಐಸಿಸಿ ಮಾನವ ಹಕ್ಕುಗಳ ಸಮಿತಿಯ ಆಶ್ರ್ರಯದಲ್ಲಿ ರೋಗಿಗಳಿಗೆ ಎಳನೀರು, ಬಿಸ್ಕೇಟ್ ಹಾಗೂ ಶುದ್ಧ ಕುಡಿಯುವ ನೀರನ್ನು ವಿತರಿಸಲಾಯಿತು. ಕೆಜಿಎಫ್ ಫೌಂಡೇಶನ್ ಅಧ್ಯಕ್ಷ ಎಫ್.ವೈ.ಗಾಜಿ, ಎಐಸಿಸಿ ಮಾನವ ಹಕ್ಕುಗಳ ಸಮಿತಿಯ ತಾಲೂಕು ಅಧ್ಯಕ್ಷ ಬಸವರಾಜ ಆಯಟ್ಟಿ, ತಾಲೂಕು ಬ್ಲಾಕ್ ಒಬಿಸಿ ಅಧ್ಯಕ್ಷ ಸಂತೋಷ ನರಿಯವರ, ಭಾರತಿ ಗೌಡರ, ಎಂ.ಎನ್.ಕುರಿ, ಗದಿಗೆಪ್ಪ ಕುರಿ, ಲತೀಪ್ ಸವದತ್ತಿ, ಬಸವರಾಜ ತಳವಾರ, ಈಶ್ವರ ಮೇಟಿ, ಪವಿತ್ರಾ ನವಲಗುಂದ, ವನಜಾಕ್ಷಿ ಸಾಬನ್ನವರ, ವಿಜಲಕ್ಷ್ಮೀ ತೊಡಕರ, ಮೈಲಾರಪ್ಪ ಹೊಸಮನಿ, ಗಂಗಪ್ಪ ಹೊರಕೇರಿ, ಶಿವಾನಂದ ಮಾದರ ಇತರರು ಉಪಸ್ಥಿತರಿದ್ದರು.
-----------ಆಸ್ಪತ್ರೆಗೆ ದಾಖಲಾದ ಎಲ್ಲರೂ ಗುಣಮುಖರಾಗುತ್ತಿದ್ದಾರೆ. ಬುಧವಾರ ಮತ್ತೆ 5 ಜನರು ದಾಖಲಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಈಗ 30 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರ 15ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗುತ್ತಿದೆ.
-ಡಾ.ಮಲ್ಲನಗೌಡ, ಮುಖ್ಯವೈದ್ಯಾಧಿಕಾರಿ.