ಮತ ಚಲಾಯಿಸಿ ಪ್ರಜಾಪ್ರಭುತ್ವ ಸದೃಢಗೊಳಿಸಿ

KannadaprabhaNewsNetwork |  
Published : Mar 30, 2024, 12:53 AM IST
ಅಳ್ನಾವರದಲ್ಲಿ ಮತದಾನ ಜಾಗೃತಿ ಜಾಥಾಕ್ಕೆ ಧಾರವಾಡ ಜಿಲ್ಲಾ ಸ್ವೀಪ ಸಮಿತಿ ಅದ್ಯಕ್ಷರು ಹಾಗೂ ಜಿ.ಪಂ ಸಿಇಒ ಸ್ವರೂಪ ಟಿ.ಕೆ ಅವರು ಚಾಲನೆ ನೀಡಿದರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆ ಸಮಯದಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಬೇಕು.

ಅಳ್ನಾವರ:

ಲೋಕಸಭೆ ಚುನಾವಣೆ ಸಮಯದಲ್ಲಿ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಮತದಾನದ ಪ್ರಮಾಣ ಹೆಚ್ಚಿಸಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಟಿ.ಕೆ. ಸ್ವರೂಪ ಹೇಳಿದರು.

ಪಟ್ಟಣದಲ್ಲಿ ಆಯೋಜಿಸಿದ್ದ ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಅವರು, ಕಳೆದ ಚುನಾವಣೆ ವೇಳೆ ಕಡಿಮೆ ಮತದಾನವಾದ ಕೇಂದ್ರ ಗುರುತಿಸಿ ಅಲ್ಲಿ ಮತದಾರರನ್ನು ಭೇಟಿಯಾಗಿ ಸ್ವಯಂ ಪ್ರೇರಿತರಾಗಿ ಮತ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಮನವೊಲಿಸುವ ಕೆಲಸವನ್ನು ಚುನಾವಣಾ ಸಿಬ್ಬಂದಿ ಮಾಡುತ್ತಿದ್ದಾರೆ. ಅಂಗವಿಕಲರು, ಅಶಕ್ತರು, ವೃದ್ಧರು ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಚುನಾವಣಾ ಆಯೋಗ ಒದಗಿಸಿದ್ದು ಇದಕ್ಕೆ ಮುಂಚಿತವಾಗಿ ಹೆಸರು ನೋಂದಾಯಿಸಿಕೊಳ್ಳುವುದು ಅವಶ್ಯವಿದೆ ಎಂದರು.

ಸಂವಿಧಾನದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅರ್ಹ ಭಾರತೀಯ ಪ್ರಜೆಗೆ ಒದಗಿಸಿರುವ ಮತದಾನದ ಹಕ್ಕು ಮತ್ತು ಕರ್ತವ್ಯ ಆರಿತುಕೊಂಡು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಆನಂತರ ಮಾರುಕಟ್ಟೆಗೆ ತೆರಳಿ ವ್ಯಾಪಾರಸ್ಥರಿಗೆ ಮತದಾನದ ಮಹತ್ವ ಮತ್ತು ಅದರ ವ್ಯವಸ್ಥೆ ವಿವರಿಸಿದರು. ಸಹಿ ಸಂಗ್ರಹಣೆ ಅಭಿಯಾನದಲ್ಲಿ ಪಾಲ್ಗೊಂಡು ಜಾಗೃತಿ ಜಾಥಾದ ಮೂಲಕ ಪಟ್ಟಣ ಪಂಚಾಯಿತಿಗೆ ತೆರಳಿ ಸಾರ್ವಜನಿಕರೊಂದಿಗೆ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸ್ವ-ಸಹಾಯ ಸಂಘದ ಮಹಿಳೆಯರು ಕುಂಭದೊಂದಿಗೆ ಜಾಥಾದಲ್ಲಿ ಭಾಗವಹಿಸಿದ್ದರು. ಹೊನ್ನಾಪುರದ ಮಹಿಳಾ ಡೊಳ್ಳು ತಂಡದ ಪ್ರದರ್ಶನ ಆಕರ್ಷಣೆಗೆ ಪಾತ್ರವಾಯಿತು.

ತಹಸೀಲ್ದಾರ್‌ ಬಸವರಾಜ ಬೆಣ್ಣಿಶಿರೂರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ತಾಲೂಕು ಸ್ವಿಪ್‌ ಸಮಿತಿ ಅಧ್ಯಕ್ಷ ಪ್ರಶಾಂತ ತುರಕಾಣಿ, ಚುನಾವಣಾ ತಹಸೀಲ್ದಾರ್‌ ಸುಧೀರ್‌ ಸಾಹುಕಾರ, ಸಹಾಯಕ ನಿರ್ದೇಶಕ ಸಂತೋಷ ತಳಕಲ್, ಮುಖ್ಯಾಧಿಕಾರಿ ಪ್ರಕಾಶ ಮಗದುಮ, ಪಿಡಿಒಗಳಾದ ಆನಂದ ಪಾಟೀಲ, ನಾಗರಾಜ ಪುಡಕಲಕಟ್ಟಿ, ಸುಜಾತಾ ಲಕ್ಕಪ್ಪನವರ, ರೇಣುಕಾ ಕೊಪ್ಪದ, ಸಂಘಟನಾಧಿಕಾರಿಗಳಾದ ಮಾಂತೇಶ ಬೆಂತೂರ, ನಾಗರಾಜ ಗುರ್ಲಹೋಸುರ, ಕಸಾಪ ಅಧ್ಯಕ್ಷ ಗುರುರಾಜ ಸಬನೀಸ ಸೇರಿದಂತೆ ಇತರರು ಇದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ