ಮಹಿಳಾ ದಿನಾಚರಣೆ ಮಹಿಳೆಯರಿಗೆ ವಿಶೇಷ ಸ್ಫೂರ್ತಿ: ರಾಜೇಶ್ವರಿ ಕಲೂತಿ

KannadaprabhaNewsNetwork | Published : Mar 30, 2024 12:53 AM

ಸಾರಾಂಶ

ಬೆಳಗಾವಿ ಯ ಮಹಾಂತೇಶ ನಗರದಲ್ಲಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಲ ಹಾಗೂ ಆಶೀರ್ವಾದ ಜುವೇಲ್ಲರ್ಸ್ ಇವರ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆಯರಿಗೆ ವಿಶೇಷ ಸ್ಫೂರ್ತಿ ಹಾಗೂ ಪ್ರೇರಣೆ ನೀಡುವ ದಿನವಾಗಿದೆ ಎಂದು ಸಮಾಜ ಸೇವಕಿ ರಾಜೇಶ್ವರಿ ಕಲೂತಿ ಹೇಳಿದರು.

ಇಲ್ಲಿನ ಮಹಾಂತೇಶ ನಗರದಲ್ಲಿ ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಲ ಹಾಗೂ ಆಶೀರ್ವಾದ ಜುವೇಲ್ಲರ್ಸ್ ಇವರ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಅಡುಗೆ ಕೆಲಸ ಮಾಡುವ ಮಹಿಳೆಯರು ಇಂದಿನ ದಿನಗಳಲ್ಲಿ ವಿಮಾನ ನಡೆಸಬಲ್ಲಳು ಎಂದು ಸಾಧಿಸಿ ತೋರಿದ್ದಾರೆ. ಮಹಿಳೆ ವಿಜ್ಞಾನ, ತಂತ್ರಜ್ಞಾನ, ಕೃಷಿ, ಕೈಗಾರಿಕೆ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಸೇನೆ, ನಾಟಕ, ಸಿನಿಮಾ, ಬಾಹ್ಯಾಕಾಶ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ ಎಂದರು.

ಮಹಿಳೆಯರು ಚಿನ್ನಾಭರಣ ಉದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮಹಿಳೆಯರ ಸೌಂದರ್ಯ ಹೆಚ್ಚಿಸುವ ಚಿನ್ನವೂ ಎಲ್ಲರಿಗೂ ಅವಶವಾಗಿದೆ. ಶ್ರೀ ಮಹಾಲಕ್ಷ್ಮಿ ಮಹಿಳಾ ಮಂಡಲ ಕೂಡ ಸಾಂಸ್ಕೃತಿಕ ಕಾರ್ಯ, ಸಮಾಜ ಸೇವೆ ನಿರಂತರವಾಗಿ ಸಾಗಲಿ ನಿಮ್ಮ ಮಹಿಳಾ ಸಂಘಟನೆ ಎತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಮೋನಿಕಾ ಸಾವಂತ, ಸಿಮರನ್‌ ಗುಡ್ಡಾಕಾಯಿ, ಸುಜಾತಾ ಹುಂಚಾನಟ್ಟಿ, ಅಧ್ಯಕ್ಷೆ ಸುನೀತಾ ಪಾಟೀಲ, ಶೋಭಾ ಪಾಟೀಲ, ಲತಾ ಕರಡಿಗುದ್ದಿ, ರಾಜೇಶ್ವರ ಹಿರೇಮಠ, ಶಾರದಾ ಪಾಟೀಲ, ವಿದ್ಯಾ ಗೌಡರ , ಶಿವಲೀಲಾ ಕೊಕಂಣಿ, ಕೆ.ರೂಪಾ ಪ್ರಸಾದ, ಶೀಲಾ ಗುಡಸ, ಸ್ನೇಹಾ ಮುಧೋಳಿ, ಲಕ್ಷ್ಮೀ ಪಾಟೀಲ, ರೇಣುಕಾ ಯಡಾಲ, ರಾಜೇಶ್ವರಿ ಮಗದುಮ್ಮ, ಶ್ರೀದೇವಿ ಹರದಗಟ್ಟಿ, ನಂದಾ ಬಗಲಿ ಹಾಗೂ ಇತರರು ಇದ್ದರು.

Share this article