ಬಿಜೆಪಿ ಅಭ್ಯರ್ಥಿ ಕ್ರ.ಸಂ.1ಕ್ಕೆ ಮತ ನೀಡಿ: ಗಾಯತ್ರಿ

KannadaprabhaNewsNetwork | Published : Apr 24, 2024 2:15 AM

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ್ ಕ್ರಮ ಸಂಖ್ಯೆ 1ಕ್ಕೆ ಮತ ಹಾಕಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಎಂದು ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.

- ಜಗಳೂರು ತಾಲೂಕಿನ ಗ್ರಾಮಗಳಲ್ಲಿ ಮತಯಾಚನೆ । ಮೋದಿ ಮತ್ತೆ ಪ್ರಧಾನಿಯಾಗಲು ಬಿಜೆಪಿ ಬೆಂಬಲಿಸಲು ಮನವಿ - - - ಕನ್ನಡಪ್ರಭ ವಾರ್ತೆ ಜಗಳೂರು

ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿಯಾದ ಗಾಯತ್ರಿ ಸಿದ್ದೇಶ್ವರ್ ಕ್ರಮ ಸಂಖ್ಯೆ 1ಕ್ಕೆ ಮತ ಹಾಕಿ, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿ ಎಂದು ಗಾಯತ್ರಿ ಸಿದ್ದೇಶ್ವರ್ ಮನವಿ ಮಾಡಿದರು.

ತಾಲೂಕಿನ ಹಾಲೇಕಲ್ಲು, ಗುತ್ತಿದುರ್ಗ, ದೇವಿಕೆರೆ, ಬಿಳಿಚೋಡು, ಸಂತೆಮುದ್ದಾಪುರ, ಬಿಸ್ತುವಳ್ಳಿ, ಪಲ್ಲಾಗಟ್ಟೆ ಗ್ರಾಮಗಳಲ್ಲಿ ಮಂಗಳವಾರ ಬಹಿರಂಗ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ವೇಳೆ ದೊಡ್ಡ ಮಟ್ಟದಲ್ಲಿ ನನ್ನನ್ನು ಬೆಂಬಲಿಸಿದ್ದೀರಿ. ಜಗಳೂರು ಕ್ಷೇತ್ರದಲ್ಲಿ ಮಾಜಿ ಶಾಸಕ ರಾಜಾಹುಲಿ ರಾಮಚಂದ್ರ, ರಸ್ತೆಗಳ ರಾಜ ಎಚ್.ಪಿ. ರಾಜೇಶ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಮಾನಸದಲ್ಲಿ ಉಳಿದಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಶೂನ್ಯ ಎಂದು ವಾಗ್ದಾಳಿ ನಡೆಸಿದರು.

ದೇಶದ ಅಭಿವೃದ್ಧಿ, ಹಿತ ಬಯಸುವ ನಾಯಕ ಪ್ರಧಾನಿ ನರೇಂದ್ರ ಮೋದಿ ಮಾತ್ರ. 27 ಪಕ್ಷಗಳ ಐಎನ್‌ಡಿಐಎ ಮೈತ್ರಿಕೂಟದಲ್ಲಿ ಹೇಳಿಕೊಳ್ಳುವಂತಹ ನಾಯಕರಿಲ್ಲ. ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಏಕೈಕ ನಾಯಕ ಎಂದರೆ ಅದು ಮೋದಿಜೀ ಮಾತ್ರ. ದೇಶದ ರಕ್ಷಣೆ, ಮಹಿಳೆಯರ ಸಬಲೀಕರಣ, ಯುವಕರ ಭವಿಷ್ಯಕ್ಕೆ, ರೈತರ ಏಳಿಗೆಗಾಗಿ, ಒಳ್ಳೆಯ ನಾಯಕನ ಆಯ್ಕೆಗಾಗಿ ನಿಮ್ಮ ಮತ ಬಿಜೆಪಿಗೆ ಹಾಕಬೇಕು ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್, ಎಲ್ಲ ವರ್ಗದ ಒಟ್ಟಿಗೆ ಕೊಂಡೊಯ್ಯುವ ನೇತಾರ ಇದ್ದರೆ ಅದು ನರೇಂದ್ರ ಮೋದಿ ಮಾತ್ರ. ದೇಶದ ಆರ್ಥಿಕ ಪ್ರಗತಿಯನ್ನು ವಿಶ್ವದ ಮೂರನೇ ಸ್ಥಾನಕ್ಕೆ ಕೊಂಡೊಯ್ದಿದ್ದಾರೆ. ಕಾಂಗ್ರೆಸ್‌ನಲ್ಲಿ ಹೇಳಿಕೊಳ್ಳುವಂತಹ ನಾಯಕರಿಲ್ಲ. 545 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 200 ಕ್ಷೇತ್ರಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಹಾಕಿದೆ. ಅವರಿಗೆ ಈ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಇದೆಯಾ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ಶಾಸಕನಾಗಿದ್ದಾಗ ಬರಪೀಡಿತ ಜಗಳೂರು ತಾಲೂಕಿನ ಜನತೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿಸಿಕೊಂಡು ಬಂದೆ. ಈಗಿನ ಸರ್ಕಾರ ಇನ್ನು ಕಾಮಗಾರಿ ಆರಂಭಿಸಿಲ್ಲ. 57 ಕೆರೆ ನೀರಾವರಿ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. ಕ್ಷೇತ್ರವು ಸಮಗ್ರ ನೀರಾವರಿ ಆಗಬೇಕಾದರೆ ಅದು ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯ. ಆದ್ದರಿಂದ ಗಾಯತ್ರಿ ಸಿದ್ದೇಶ್ವರ ಅವರನ್ನು ಬೆಂಬಲಿಸಲು ಮನವಿ ಮಾಡಿದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಲೇರುದ್ರೇಶ್ ಮಾತನಾಡಿದರು. ಈ ವೇಳೆ ಗಾಯತ್ರಿ ಸಿದ್ದೇಶ್ವರ್ ಪುತ್ರ ಅನಿತ್ ಸಿದ್ದೇಶ್ವರ್, ಬಿಜೆಪಿ ಮುಖಂಡರಾದ ಪಲ್ಲಾಗಟ್ಟೆ ಮಹೇಶ್, ಎಸ್.ಕೆ. ಮಂಜುನಾಥ್, ಉಮಾ ವೆಂಕಟೇಶ್, ಸೊಕ್ಕೆ ನಾಗರಾಜ್, ಡಿ.ವಿ. ನಾಗಪ್ಪ, ಕಲ್ಲೇವೇವರಪುರ ಕೃಷ್ಣಮೂರ್ತಿ, ಸುರೇಂದ್ರ, ಬಸವರಾಜ್, ಪ್ರಸನ್ನ, ರಾಜಕುಮಾರ್ ಸೇರಿದಂತೆ ಅನೇಕರು ಇದ್ದರು.

- - - -23ಜೆಎಲ್ಆರ್ 2:

ಜಗಳೂರು ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ ಬಹಿರಂಗ ಪ್ರಚಾರ ನಡೆಸಿದರು.

Share this article