ಕಾಂಗ್ರೆಸ್‌ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲಗೆ ಮತ ನೀಡಿ

KannadaprabhaNewsNetwork | Published : May 31, 2024 2:31 AM

ಸಾರಾಂಶ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರಿಗೆ ಮತ ಹಾಕಬೇಕು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರಿಗೆ ಮತ ಹಾಕಬೇಕು ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ ವಿನಂತಿಸಿಕೊಂಡರು.

ತಾಲೂಕಿನ ಹನುಮನಾಳದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಪರವಾಗಿ ನಡೆದ ಮತಯಾಚನೆಯ ಸಭೆಯಲ್ಲಿ ಮಾತನಾಡಿದರು. ಈ ವಿಧಾನಪರಿಷತ್ತು ಚುನಾವಣೆಯು ಪ್ರಜ್ಞಾವಂತರ ಚುನಾವಣೆಯಾಗಿದ್ದು, ಅತ್ಯಂತ ಜಾಗರೂಕತೆಯಿಂದ ಮತ ಹಾಕಬೇಕು ಎಂದರು.

ನಮ್ಮ ಪಕ್ಷದ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಹೆಸರಿನ ಮುಂದೆ ಕ್ರಮಸಂಖ್ಯೆ ಬರೆಯುವುದಾಗಲಿ, ಅಂಕಿ-ಸಂಖ್ಯೆ ಬರೆಯುವುದಾಗಲಿ ಮಾಡಬಾರದು ಒಂದು ಗೆರೆ ಎಳೆಯುವ ಮೂಲಕ ಮತದಾನ ಮಾಡಬೇಕು. ಅಂಕಿ-ಸಂಖ್ಯೆ ಬರೆದರೆ ಆ ಮತವು ತಿರಸ್ಕಾರಗೊಳ್ಳಲಿದೆ. ಈ ಹಿಂದಿನ ಚುನಾವಣೆಯಲ್ಲಿ ಇಂತಹ ತಪ್ಪುಗಳು ನಡೆದಿದ್ದು, ಈ ಸಲ ಜಾಗರೂಕತೆಯಿಂದ ಮತ ಹಾಕಬೇಕು ಎಂದರು.

ಕಾಂಗ್ರೆಸ್ ಹಿರಿಯ ಮುಖಂಡರಾದ ಕೆ.ಬಿ. ತಳವಾರ, ಸೋಮಶೇಖರ ವೈಜಾಪೂರ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಸೇರಿದಂತೆ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಹನುಮಸಾಗರ ಬ್ಲಾಕ್ ಅಧ್ಯಕ್ಷ ಕಲ್ಲಪ್ಪ ತಳವಾರ, ಬಸವಂತಪ್ಪ ಕುರುಬನಾಳ, ಶೇಖಣ್ಣ ವಡಗೇರಿ, ಉಮಾದೇವಿ ಪಾಟೀಲ, ಭುವನೇಶ್ವರಿ ಮೋಟಿಗಿ ಸೇರಿದಂತೆ ಅನೇಕರು ಇದ್ದರು.

ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಪರ ಮತಯಾಚನೆ:ಈಶಾನ್ಯ ಪದವೀಧರ ಚುನಾವಣೆ ವಿದ್ಯಾವಂತರ ಚುನಾವಣೆಯಾಗಿದ್ದು, ಪದವೀಧರರ ಕುಂದು ಕೊರತೆಗಳನ್ನು ನೀಗಿಸುವುದು ಅಭ್ಯರ್ಥಿಗಳ ಕರ್ತವ್ಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್ ಬಯ್ಯಾಪುರ ಹೇಳಿದರು.

ಹನುಮಸಾಗರ ಗ್ರಾಮದ ಎಪಿಎಂಸಿಯ ಮಳಿಗೆಯೊಂದರಲ್ಲಿ ಸೋಮವಾರ ನಡೆದ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಕಾಯ್ದೆ, ಕಾನೂನು ಸರಿಪಡಿಸಲು ಮೇಲ್ಮನೆ ಅವಶ್ಯಕವಾಗಿದೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ೪೨ ತಾಲೂಕುಗಳ ಪೈಕಿ ೧ ಲಕ್ಷ ೬೬ ಸಾವಿರ ಪದವೀಧರರು ನೋಂದಣಿಯನ್ನು ಮಾಡಿಸಿ ಮತದಾರರ ಪಟ್ಟಿಯಲ್ಲಿದ್ದಾರೆ. ಕಳೆದ ಬಾರಿ ಸಾವಿರಕ್ಕೂ ಹೆಚ್ಚು ಮತದಾನ ಮಾಡುವಾಗ ತಪ್ಪು ಮಾಡಿರುತ್ತಾರೆ. ವಿದ್ಯಾವಂತರಾದವರು ಹಾಗೇ ಆಗದಂತೆ ನೋಡಿಕೊಂಡು ಮತದಾನ ಮಾಡಬೇಕು ಎಂದರು.ಪ್ರಮುಖರಾದ ವಿಶ್ವನಾಥ ಕನ್ನೂರ, ಮಹಾಂತೇಶ ಅಗಸಿಮುಂದಿನ, ಸಂಗಯ್ಯ ವಸ್ತ್ರದ, ಶಿವಶಂಕರಗೌಡ ಕಡೂರ, ಮೈನುದ್ದಿನ ಖಾಜಿ, ವಿಠ್ಠಲಸಾ ಸಿಂಗ್ರಿ, ಅಬ್ದುಲ್ ರಜಾಕ್ ಟೇಲರ್, ಸುರೇಶ ಕುಂಟನಗೌಡ್ರ, ಮಹಾಂತೇಶ ವಜ್ಜಲ, ಸಂಗಮೇಶ ಕರಂಡಿ, ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

Share this article