ಕನ್ನಡಪ್ರಭ ವಾರ್ತೆ, ಮೊಳಕಾಲ್ಮುರು
ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಅವರನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.ತಾಲೂಕಿನ ರಾಂಪುರ ಗ್ರಾಮದ ಎಸ್‌ಪಿಎಸ್‌ಆರ್ ಶಾಲೆಯಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ. ಸದಾ ಶಿಕ್ಷಕೆರ ಪರವಾಗಿರುವ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ.ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಶಿಕ್ಷಕರ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವ ರಾಗಿದ್ದಾರೆ.ನೆಚ್ಚಿನ ಶಿಕ್ಷಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಬೇಕು ಈ ಕ್ಷೇತ್ರದಿಂದ ಹೆಚ್ಚಿನ ಮತಗಳನ್ನು ಕೊಡಿಸಬೇಕು ಎಂದರು.
ಇಲ್ಲಿನ ಸಮಸ್ಯೆಗಳನ್ನು ಆಲಿಸದ ಬಿಜಪಿಯವರು ಕೇವಲ ಬರವಸೆಗಳನ್ನು ನೀಡುತ್ತಾರೆ. ಅವರ ಮಾತಿಗೆ ಮರುಳಾಗಬಾರದು.ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡುವ ಮೂಲಕ ಆಶೀರ್ವದಿಸಬೇಕು ಎಂದರು.ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ ಮಾತನಾಡಿ, ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನೇಕ ಕೊಡುಗೆಗಳಿಂದಾಗಿ ಶಿಕ್ಷಕರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.ಕ್ಷೇತ್ರದಲ್ಲಿ ಉತ್ತಮ ಬೆಂಬಲ ಸಿಗುತ್ತಿದೆ.ಏಳನೆ ವೇತನ ಆಯೋಗ ಜಾರಿ ಸೇರಿದಂತೆ ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಶಿಕ್ಷಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬೆಂಬಲಿಸಬೇಕು ಎಂದರು.
ಈ ವೇಳೆ ಮಾಜಿ ಶಾಸಕಿ ಪೂರ್ಣಿಮ ಶ್ರೀನಿವಾಸ, ಮುಖಂಡ ಎಚ್.ಟಿ.ನಾಗರೆಡ್ಡಿ, ಸಂಸ್ಥೆಯ ಅಧ್ಯಕ್ಷ ಬಿ.ಪಿ.ಜಯಪ್ರಕಾಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಉಲ್ಲಾ, ಕಾರ್ಯದರ್ಶಿ ಬಿ.ಟಿ.ನಾಗಭೂಷಣ ಇದ್ದರು.ಮೃತ ವಿ.ಪ.ಅಭ್ಯರ್ಥಿ ಪತಿ ಡಿ.ಟಿ.ಶ್ರೀನಿವಾಸ್ ಬೆಂಬಲಿಸುವಂತೆ ಪೂರ್ಣಿಮಾ ಮನವಿಚಳ್ಳಕೆರೆ: ಇಲ್ಲಿನ ಗಾಂಧಿನಗರದಲ್ಲಿ ವಾಸವಿರುವ ತಳಕು ಹೋಬಳಿಯ ತಿಮ್ಮಣ್ಣನಹಳ್ಳಿ ಮೂಡಲಗಿರಿಯಪ್ಪ ಗ್ರಾಮೀಣ ಪ್ರೌಢಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್.ಶಿವಕುಮಾರ್ ಇತ್ತೀಚೆಗೆ ಮೃತಪಟ್ಟಿದ್ದು, ಅವರ ಮನೆಗೆ ತೆರಳಿದ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದರಲ್ಲದೆ, ಆರ್ಥಿಕ ನೆರವು ನೀಡಿದರು.ಇದೇ ಸಂದರ್ಭದಲ್ಲಿ ದಿವಂಗತ ಶಿವಕುಮಾರ್ ಪತ್ನಿ ಮಹಾಲಕ್ಷ್ಮೀಗೆ ಭರವಸೆ ನೀಡಿದ ಅವರು, ವಿಧಾನ ಪರಿಷತ್ ಚುನಾವಣೆ ನಂತರ ತಮ್ಮ ಮೂವರು ಪುತ್ರಿಯರಲ್ಲಿ ಯಾರಿಗಾದರೂ ಸರ್ಕಾರಿ ನೌಕರಿ ಕೊಡಿಸುವ ಭರವಸೆ ನೀಡಿದರು. ವಿಜ್ಞಾನ ಶಿಕ್ಷಕರಾಗಿದ್ದ ಎಸ್.ಶಿವಕುಮಾರ್‌ರವರ ಸೇವೆಯ ಬಗ್ಗೆ ಇಲ್ಲಿನ ಶಿಕ್ಷಕರು ಮಾಹಿತಿ ನೀಡಿದರು. ಇನ್ನೂ ಐದು ವರ್ಷಗಳ ಕಾಲ ಅವರ ಸೇವೆ ಇದ್ದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಗ್ರಾಮೀಣ ಭಾಗದ ಪ್ರೌಢಶಾಲೆ ಯಲ್ಲಿ ಸುಮಾರು ೧೫ ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಬೋಧನೆ ಮಾಡಿದ್ದಾರೆ. ಅವರ ಹೆಸರು ಈ ತಾಲ್ಲೂಕಿನಲ್ಲಷ್ಟೇ ಅಲ್ಲ, ಇಡೀ ಜಿಲ್ಲೆಯಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದರು.ನಂತರ ಅವರು ನಗರದ ವಾಸವಿ ಕಾಲೇಜಿಗೆ ತೆರಳಿ ಬರುವ ಜೂನ್ ೩ರಂದು ನಡೆಯುವ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನನ್ನ ಪತಿ ಡಿ.ಟಿ.ಶ್ರೀನಿವಾಸ್ ಅಭ್ಯರ್ಥಿ ಯಾಗಿ ಎರಡನೇ ಬಾರಿಗೆ ಸ್ಪರ್ಧಿಸಲಿದ್ದು, ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ನಗರದ ವಿವಿಧ ಪ್ರೌಢಶಾಲೆ, ಕಾಲೇಜಿಗೆ ತೆರಳಿ ಪತಿಯಪರ ಮತಯಾಚನೆ ಮಾಡಿದರು.
ಪ್ರೌಢಶಾಲಾ ಶಿಕ್ಷಕ ಜಿ.ಟಿ.ವೀರಭದ್ರಸ್ವಾಮಿ, ರುದ್ರಮುನಿ, ದೊಡ್ಡಯ್ಯ, ಸಿದ್ದಲಿಂಗಪ್ಪ,. ಮೂಡಲಗಿರಿಯಪ್ಪ, ಡಿ.ಟಿ.ಶ್ರೀನಿವಾಸ್, ಸಿ.ಟಿ.ವೀರೇಶ್, ವೆಂಕಟೇಶ್, ಕೆ.ಎಸ್.ಶ್ರೀಕಾಂತ್, ಮಂಜಣ್ಣ, ಚಿಕ್ಕಣ್ಣ, ಮರವಾಯಿಶ್ರೀನಿವಾಸ್, ಜಿ.ಕೆ.ವೀರಣ್ಣ, ವಕೀಲರಾದ ಶ್ರೀನಿವಾಸ್‌ಮೂರ್ತಿ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.