ಕನ್ನಡಪ್ರಭ ವಾರ್ತೆ ಬೀದರ್
ಬೀದರ್ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸಾಗರ ಖಂಡ್ರೆ ಅವರ ಹಸ್ತದ ಗುರುತಿಗೆ ಮತ ನೀಡುವಂತೆ ಮಾಜಿ ಶಾಸಕ ಅಶೋಕ ಖೇಣಿ ಮನವಿ ಮಾಡಿದರು.ಅವರು ಬೀದರ್ ದಕ್ಷಿಣ ಕ್ಷೇತ್ರದ ರಂಜೊಳ ಖೇಣಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ ಖಂಡ್ರೆ ಪರ ಪ್ರಚಾರದಲ್ಲಿ ಮಾತನಾಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಭೀಮಣ್ಣ ಖಂಡ್ರೆ ಅವರ ಮೊಮ್ಮಗ, ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ ಖಂಡ್ರೆ ಅವರ ಈ ಮನೆತನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮನೆತನ. ಸದಾ ಜನ ಸೇವೆಯಲ್ಲಿ ಬೆರೆತು ಜನರ ಕಷ್ಟ ಸುಖದಲ್ಲಿ ಭಾಗಿಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಎಲ್ಲಾ ಸಮುದಾಯದ ಜನರನ್ನು ಕೊಂಡ್ಯೊಯುವರು. ಕಲ್ಯಾಣ ಕರ್ನಾಟಕದಲ್ಲಿ ತಮ್ಮದೆ ಛಾಪು ಮೂಡಿಸಿದ ಖಂಡ್ರೆ ಮನೆತನ. ಈ ಮನೆತನದ ಯುವ ಅಭ್ಯರ್ಥಿ ಸಾಗರ್ ಖಂಡ್ರೆಗೆ ಸಂಸದರಾಗಿ ದೆಹಲಿಗೆ ಕಳುಸಿದರೆ, ಇಡೀ ದೇಶದಲ್ಲಿ ಬೀದರ್ ಕೀರ್ತಿ ಹೆಚ್ಚುತ್ತದೆ. ಆದ ಕಾರಣ ತಾವು ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆಗೆ ಹೆಚ್ಚಿನ ಮತಗಳು ನೀಡಿ ಆಶಿರ್ವಾದಿಸಬೇಕೆಂದು ಮನವಿ ಮಾಡಿದರು.ಸಾಗರ ಖಂಡ್ರೆ ಮಾತನಾಡಿ, ಭಗವಂತ ಖೂಬಾ ಅವರ ಸಾಧನೆ ಶೂನ್ಯ 10 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲಾ ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಮೀನಾಕ್ಷಿ ಸಂಗ್ರಾಮ, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಚಂದ್ರಶೇಖರ ಚನಶಟ್ಟಿ, ಕೆಪಿಸಿಸಿ ಸಂಯೋಜಕರಾದ ಪಾತಾಪ್ಪ, ಕೆಪಿಸಿಸಿ ದಕ್ಷಿಣ ಕ್ಷೇತ್ರದ ಉಸ್ತುವಾರಿ ಸಂಜಯ್ ಜಾಗಿರದಾರ್, ಮುಖಂಡರಾದ ತನ್ವೀರ ಆಹ್ಮದ್ ಖಾನ್, ಮುಜೀಬ್ ಪಟೇಲ್ ಗ್ರಾಮದ ಮುಖಂಡರಾದ ಬಸವರಾಜ ಪಾಟೀಲ, ಸುಭಾಷ್ ನೇಳಗೆ, ನಂದಕುಮಾರ್ ಪಾಟೀಲ, ಭದ್ರೆಶ್ ಖೇಣಿ, ವೈಜಿನಾಥ ನಾಟಿಕಾರ, ರಾಜಕುಮಾರ ಗಿರಿಮಲ್, ರೋಹಿದಾಸ ಘೊಡೆ ಉಪಸ್ಥಿತರಿದ್ದರು.