ನಿರ್ಭಿತಿಯಿಂದ ಮತ ಚಲಾಯಿಸಿ: ಜಿಲ್ಲಾಧಿಕಾರಿ ಸುಶೀಲಾ

KannadaprabhaNewsNetwork |  
Published : May 05, 2024, 02:07 AM IST
ಕೊಡೇಕಲ್ ಪಟ್ಟಣದಲ್ಲಿ ಲೋಕಸಭಾ ಮತ್ತು ಸುರಪುರ ಮತಕ್ಷೇತ್ರದ ಉಪ ಚುನಾವಣೆಯ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಸುಶೀಲಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗಿತಾ ಅವರ ನೇತೃತ್ವದಲ್ಲಿ ಅರೆಸೇನಾ ಪಡೆ ವತಿಯಿಂದ ಪಥ ಸಂಚಲನ ನಡೆಯಿತು. | Kannada Prabha

ಸಾರಾಂಶ

ಶಾಂತಿಯುತ ಮತ್ತು ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆ, ದುರ್ಬಲ, ಅಶಕ್ತ ಮತದಾರರು ಸೇರಿದಂತೆ ಎಲ್ಲರೂ ನಿರ್ಭಿತಿಯಿಂದ ಮತ ಚಲಾಯಿಸಿ, ನಿಮ್ಮೊಂದಿಗೆ ನಾವಿದ್ದೇವೆ. ಯಾವುದೆ ಕಾರಣಕ್ಕೂ ಮತದಾನದಿಂದ ವಂಚಿತರಾಗಬೇಡಿ.

ಕನ್ನಡಪ್ರಭ ವಾರ್ತೆ ಕೊಡೇಕಲ್

ಲೋಕಸಭಾ ಚುನಾವಣೆ ಮತ್ತು ಸುರಪುರ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಕೊಡೇಕಲ್ ಪಟ್ಟಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಅರೆಸೇನಾ ಪಡೆ ವತಿಯಿಂದ ಪಥ ಸಂಚಲನ ನಡೆಯಿತು.

ಪಟ್ಟಣದ ಪೊಲೀಸ್ ಠಾಣೆಯಿಂದ ಜಿಲ್ಲಾಧಿಕಾರಿ ಡಾ. ಸುಶೀಲಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರ ನೇತೃತ್ವದಲ್ಲಿ ಆರಂಭಗೊಂಡ ಪಥ ಸಂಚಲನ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಗದ್ದೆಮ್ಮ ದೇವಿ ಕಟ್ಟೆಯವರೆಗೆ ನಡೆದು ಪುನಹ ಪ್ರಮುಖ ಬೀದಿಗಳ ಮೂಲಕ ಠಾಣೆಯಲ್ಲಿ ಕೊನೆಗೊಂಡಿತು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು, ಈಗಾಗಲೇ ಲೋಕಸಭೆ ಮತ್ತು ಸುರಪುರ ವಿಧಾನಸಭೆ ಉಪ ಚುನಾವಣೆಗಾಗಿ ಜಿಲ್ಲಾಡಳಿತ ಸರ್ವ ರೀತಿಯಿಂದ ಸನ್ನದ್ಧಗೊಂಡಿದ್ದು, ಜಿಲ್ಲೆಯಲ್ಲಿ ಅರೆಸೇನಾ ಪಡೆಯಿಂದ ಪಥ ಸಂಚಲನ ನಡೆಸಲಾಗುತ್ತಿದೆ. ಶಾಂತಿಯುತ ಮತ್ತು ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆ, ದುರ್ಬಲ, ಅಶಕ್ತ ಮತದಾರರು ಸೇರಿದಂತೆ ಎಲ್ಲರೂ ನಿರ್ಭಿತಿಯಿಂದ ಮತ ಚಲಾಯಿಸಿ, ನಿಮ್ಮೊಂದಿಗೆ ನಾವಿದ್ದೇವೆ. ಯಾವುದೆ ಕಾರಣಕ್ಕೂ ಮತದಾನದಿಂದ ವಂಚಿತರಾಗಬೇಡಿ ಎಂದು ಹೇಳಿದರು.

ಇಲಾಖೆಯ ಸಿಬ್ಬಂದಿಗಳು ಕೂಡ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ನಿಗಾವಹಿಸಿ ಅತ್ಯಂತ ನಿಷ್ಠೆಯಿಂದ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಮಾತನಾಡಿ, ಚುನಾವಣೆಯ ಸಂದರ್ಭದಲ್ಲಿ ಸಮಾಜದಲ್ಲಿ ಶಾಂತಿ ನಿರ್ಮಾಣ ಮಾಡುವ ಉದ್ದೇಶದಿಂದ ಪಥ ಸಂಚಲನ ನಡೆಸಲಾಗುತ್ತಿದೆ. ಒಂದು ವೇಳೆ ಗಲಾಟೆ, ದೊಂಬಿ ಸೇರಿದಂತೆ ಇನ್ನಿತರ ಸಮಾಜಘಾತುಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾವುದೆ ಕಾರಣಕ್ಕೂ ಜನತೆ ಭಯ ಪಡುವ ಅಗತ್ಯ ಇಲ್ಲ. ನಿರ್ಭಿತರಾಗಿ ಮತದಾನ ಮಾಡಬೇಕು ಎಂದರು.

ಡಿವೈಎಸ್ಪಿ ಜಾವಿದ್ ಇನಾಮದಾರ, ಸಿಪಿಐಗಳಾದ ಸಚಿನ್ ಚಲುವಾದಿ, ನ್ಯಾಮೇಗೌಡ, ಪಿಐಗಳಾದ ಆನಂದ ವಾಗ್ಮೋರೆ, ಎಸ್.ಎಂ. ಪಾಟೀಲ್, ರಾಜಶೇಖರ ರಾಠೋಡ್, ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ, ಸುರಪುರ ತಹಸೀಲ್ದಾರ್ ನಾಗಮ್ಮ ಸೇರಿದಂತೆ ಕೊಡೇಕಲ್, ನಾರಾಯಣಪುರ, ಹುಣಸಗಿ, ಕೇಂಬಾವಿ, ಗೋಗಿ, ಸುರಪುರ ಠಾಣಾಧಿಕಾರಿಗಳು, ಗ್ರಾಮ ಪಂಚಾಯ್ತಿ ಪಿಡಿಒ ಮತ್ತು ಸಿಬ್ಬಂದಿಗಳು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಸೇರಿದಂತೆ ಇತರರಿದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್