ಲಕ್ಷ್ಮೇಶ್ವರ: ಮತ ಚಲಾಯಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಬಲಪಡಿಸಲು ಸಾಧ್ಯ ಎಂದು ಗೋವನಾಳ ಗ್ರಾಪಂ ಅಭಿವೃದ್ಧಿ ಅಧಿಕಾರ ಜೆ.ಆರ್. ಕರುಬರು ಹೇಳಿದರು.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನ ಜನರ ಪ್ರಮುಖ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾನ ಮತ್ತು ಚುನಾವಣೆ ಎರಡು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಚುನಾವಣೆಯ ಯಶಸ್ಸು ಮತದಾನ ಅವಲಂಭಿಸಿದೆ. ಆದ್ದರಿಂದ ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಲು ಮನವಿ ಮಾಡಿದರು. ಮೇ 7 ರಂದು ಲೋಕಸಭೆ ಚುನಾವಣೆಗೆ ಮತದಾನಕ್ಕೆ ನಿಗದಿಯಾಗಿದ್ದು, ಎಲ್ಲರು ಪ್ರಜಾಪ್ರಭುತ್ವದ ಮತದಾನದಲ್ಲಿ ಭಾಗಿಯಾಗುವಂತೆ ತಿಳಿಸಿದರು. ಈ ಬೇಸಿಗೆ ಅವಧಿಯಲ್ಲಿ ಹೆಚ್ಚು ಕೆಲಸ ಒದಗಿಸಲು ನರೇಗಾ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದು, ರೈತರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಬಿಎಫ್‍ಟಿ ತೀರಕಪ್ಪ ಬಾಲೆಹೊಸೂರ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು. ಡಿಇಒ ಶಿವಯೋಗಿ ಸೊರಟೂರ, ಮೌನೇಶ ಬಡಿಗೇರ, ಗ್ರಾಪಂ ಸಿಬ್ಬಂದಿ, ನರೇಗಾ ಕಾಯಕ ಬಂಧುಗಳು, ಕೂಲಿಕಾರ್ಮಿಕರು ಇತರರಿದ್ದರು.