ಕನ್ನಡಪ್ರಭ ವಾರ್ತೆ ಹಲಗೂರುಡಿ.ಹಲಸಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಿದ್ದಾಚಾರಿ ಮತದಾರರಲ್ಲಿ ಮನವಿ ಮಾಡಿದರು.
ಏ.10 ರಂದು ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ನಡೆಯುವ ಸಂಘದ ಚುನಾವಣೆಗೆ ತೊರೆಕಾಡನಹಳ್ಳಿ ಗ್ರಾಮದಲ್ಲಿ ಮತಯಾಚಿಸಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ 10 ಸೇರಿ 11 ಮಂದಿ ಸ್ಪರ್ಧಿಸಿದ್ದು, ಎಲ್ಲರನ್ನು ಗೆಲ್ಲಿಸಿ ಸಂಘವನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕು ಎಂದು ಕೋರಿದರು.ಈ ವೇಳೆ ಅಭ್ಯರ್ಥಿಗಳಾದ ಎಚ್.ಸಿದ್ದಾಚಾರಿ, ಎಸ್.ಸಿದ್ದಲಿಂಗೇಗೌಡ, ಬಿ.ರವಿ, ಅಬ್ದುಲ್ ಮುಹೀಬ್( ರಿಜ್ವಾನ್), ಕೆ.ಎಂ.ಮೈತ್ರಿ, ಬಿ.ಟಿ.ರಮೇಶ್, ರತ್ನಮ್ಮ, ಸಣ್ಣಯ್ಯ , ಮಂಜು ಸ್ವಾಮಿ, ನಾನ್ ಬರೆರೋ ಅಭ್ಯರ್ಥಿ ಮಹದೇವಸ್ವಾಮಿ, ಸೇರಿದಂತೆ ,ಮುಖಂಡರಾದ ತೊರೆಕಾಡನಹಳ್ಳಿ ಗ್ರಾಪಂ ಸದಸ್ಯ ಟಿ.ಪಿ.ರಾಜು, ಶಿವರಾಜು, ಮುನಿಕಾಳಯ್ಯ, ಉಮೇಶ್, ಕಾಂತರಾಜ್, ನಂಜುಂಡಸ್ವಾಮಿ, ಸೇರಿದಂತೆ ಇತರರು ಇದ್ದರು.
ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಮಂಡ್ಯ: ಸರ್ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ ಮತ್ತು ಕಲ್ಮಂಟಿದೊಡ್ಡಿ ಸಹಯೋಗದೊಡನೆ ಕೆಎನ್‌ಎಸ್ ಇನ್‌ಪ್ರಾಸ್ಟ್ರಕ್ಚರ್ಸ್‌ನ ಪ್ರಾಯೋಜಕತ್ವದೊಂದಿಗೆ ಕಲ್ಮಂಟಿದೊಡ್ಡಿ ಪ್ರಿಮಿಯರ್ ಲೀಗ್ (ಕೆಪಿಎಲ್) ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯನ್ನು ಅನ್ನು ಏಪ್ರಿಲ್ ೧೦ರಿಂದ ೧೩ರವರೆಗೆ ಕೆರಗೋಡು ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಕಲ್ಮಂಟಿದೊಡ್ಡಿ ಗ್ರಾಮದ ಸುರೇಂದ್ರ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯಲ್ಲಿ ೧೦ ತಂಡಗಳು ಭಾಗವಹಿಸಲಿದ್ದು, ಎರಡು ಗುಂಪುಗಳಾಗಿ ವಿಂಗಡನೆಗೊಂಡು ಲೀಗ್ ಹಂತದಲ್ಲಿ ಪಂದ್ಯಾವಳಿ ನಡೆಯಲಿವೆ ಎಂದರು.ಐಪಿಎಲ್ ಮಾದರಿಯಲ್ಲಿಯಲ್ಲಿ ನಗರ ಪ್ರದೇಶಗಳಿಗೆ ಕಮ್ಮಿಯಿಲ್ಲ ಎಂಬಂದ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾವಳಿ ಆಯೋಜಿಸಲಾಗಿದ್ದು, ಒಂದು ಲಕ್ಷ ಪಾಯಿಂಟ್ಸ್‌ಗಳನ್ನು ನೀಡಿ ಫ್ರಾಂಚೈಸಿಗಳ ಮೂಲಕ ಆಟಗಾರರ ಆಯ್ಕೆ ಮಾಡಲಾಗುವುದು ಎಂದರು.
ಸದರಿ ಪಂದ್ಯಾವಳಿಗೆ ಕೊಪ್ಪ, ಕೆರಗೋಡು, ಬಸರಾಳು ಹೋಬಳಿಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಆಟಗಾರರು, ಮಂಡ್ಯ ಗ್ರಾಮಾಂತರ ಪ್ರದೇಶದ ಸಾತನೂರು, ಕೊಮ್ಮೇರಹಳ್ಳಿ, ಚಿಕ್ಕಮಂಡ್ಯ, ಹೊನಗಾನಹಳ್ಳಿ ಮತ್ತು ಗೋಪಾಲಪುರ ಗ್ರಾಮಗಳ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.ಫ್ರಾಂಚೈಸಿಗಳಿಂದ ತಂಡಗಳಿಗೆ ಆಟಗಾರರ ಆಯ್ಕೆ ಸಂದರ್ಭದಲ್ಲಿ ೨೦ ಸಾವಿರ ಪಡೆದಿರುವುದು ಬಿಟ್ಟರೆ ಯಾವುದೇ ಪ್ರವೇಶ ಶುಲ್ಕ ವಿಧಿಸಿಲ್ಲ, ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ೧,೧೧,೧೧೧ ರೂ, ದ್ವಿತೀಯ ಬಹುಮಾನ ೫೫,೫೫೫ ರೂ, ತೃತೀಯ ೨೨,೨೨೨, ನೀಡಲಿದ್ದು, ನಾಲ್ಕನೇ ಬಹುಮಾನವನ್ನು ೧೧,೧೧೧ ರೂ ನೀಟಿ ಗೌರವಿಸಲಾಗುವುದು ಎಂದು ಇದೇ ವೇಳೆ ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ಚೇತನ್, ಆನಂದ್, ಮಧು ಇದ್ದರು.