ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಆರಂಭ

KannadaprabhaNewsNetwork |  
Published : Aug 29, 2024, 12:57 AM IST
ಪೋಟೋ೨೭ಸಿಎಲ್‌ಕೆ೦೧ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತಾಯಿಸಿ ಬಿಎಲ್‌ಒಗಳು ಮನವಿ ನೀಡಿದರು. ಪೋಟೋ೨೭ಸಿಎಲ್‌ಕೆ೦೧ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತಾಯಿಸಿ ಬಿಎಲ್‌ಒಗಳು ಮನವಿ ನೀಡಿದರು. ಪೋಟೋ೨೭ಸಿಎಲ್‌ಕೆ೦೧ ಚಳ್ಳಕೆರೆ ನಗರದ ತಾಲ್ಲೂಕು ಕಚೇರಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತಾಯಿಸಿ ಬಿಎಲ್‌ಒಗಳು ಮನವಿ ನೀಡಿದರು.  | Kannada Prabha

ಸಾರಾಂಶ

Voter list revision work started

-ಹೊಸ ಸೇರ್ಪಡೆ ಮತ್ತು ಹೆಸರು ಕೈಬಿಡಲು ಅವಕಾಶ । ಗಳಿಕೆ ರಜೆ ಮಂಜೂರಾತಿಗೆ ಬಿಎಲ್‌ಒಗಳ ಮನವಿ

-----

ಚಳ್ಳಕೆರೆ ಕನ್ನಡಪ್ರಭ ವಾರ್ತೆ

ರಾಷ್ಟ್ರೀಯ ಚುನಾವಣಾ ಆಯೋಗ ಮತದಾರರ ಪಟ್ಟಿ, ಸೇರ್ಪಡೆ ಹಾಗೂ ಮೃತಪಟ್ಟವರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಮತಗಟ್ಟೆ ಅಧಿಕಾರಿ ಪ್ರತಿ ಮನೆಗೂ ತೆರಳಿ ಸಂಪೂರ್ಣ ಮಾಹಿತಿ ಪಡೆದು ದಾಖಲಿಸಬೇಕು. ತಾಲೂಕಿನ ಎಲ್ಲಾ ಮತಗಟ್ಟೆ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕೂಡಲೇ ಕಾಯೋನ್ಮೂಖರಾಗಬೇಕೆಂದು ತಹಸೀಲ್ದಾರ್‌ ರೇಹಾನ್ ಪಾಷ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಪಟ್ಟಿಯನ್ನು ಸಿದ್ದಪಡಿಸಲು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ್ದೀರ. ದೋಷ ರಹಿತ ಮತದಾರರ ಪಟ್ಟಿಯನ್ನು ಅಂತಿಮಗೊಳಿಸಲು ನಿಮ್ಮೆಲ್ಲರ ಸಹಕಾರ ಅತಿಮುಖ್ಯ. ೧೭ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರ ಪಟ್ಟಿ ಸೇರ್ಪಡೆಗೆ ಆರ್ಹರಿದ್ದು, ಮನೆ, ಮನೆಗೂ ತೆರಳಿ ಅವರಿಂದ ದಾಖಲೆ ಪಡೆದು, ಫಾರಂ ನಂ.೬ರಲ್ಲಿ ನಮೂದಿಸಬೇಕು. ಮತಗಟ್ಟೆ ವ್ಯಾಪ್ತಿಯಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಮಾಹಿತಿ ಪಡೆದು ಫಾರಂ ನಂ. ೭ರಲ್ಲಿ ದಾಖಲಿಸಬೇಕು. ಮತದಾರರ ಪಟ್ಟಿ ಸಿದ್ದಪಡಿಸುವಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಮತಗಟ್ಟೆ ಕೇಂದ್ರಗಳ ಮತಗಟ್ಟೆ ಅಧಿಕಾರಿಗಳು ಸರ್ಕಾರಕ್ಕೆ ಲಿಖಿತ ಮನವಿ ನೀಡಿ ೫೫ ವರ್ಷ ಮೇಲ್ಪಟ್ಟ ಮತಗಟ್ಟೆ ಅಧಿಕಾರಿಗಳನ್ನು ಚುನಾವಣಾ ಕಾರ್ಯದಿಂದ ವಿಮುಕ್ತಿಗೊಳಿಸಬೇಕು. ಗಳಿಕೆ ರಜೆ ಪಡೆಯಲು ಅವಕಾಶ ಮಾಡಿಕೊಡಬೇಕು. ಈಗಾಗಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮತಗಟ್ಟೆ ಅಧಿಕಾರಿಗಳು ಗಳಿಕೆ ರಜೆಯ ಸೌಲಭ್ಯವನ್ನು ಪಡೆದಿದ್ದಾರೆ. ಆದೇಶದ ಪ್ರತಿಯೊಂದು ಮನವಿ ನೀಡುತ್ತಿದ್ದು, ಕೂಡಲೇ ಅದನ್ನು ಪರಿಷ್ಕರಿಸುವಂತೆ ಮನವಿ ಮಾಡಿದರು.

ತಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳಿಸಿಕೊಡುವ ಭರವಸೆಯನ್ನು ತಹಶೀಲ್ಧಾರ್ ಪರವಾಗಿ ಮನವಿ ಸ್ವೀಕರಿಸಿದ ಶಿರಸ್ತೇದಾರ್ ಗಿರೀಶ್ ತಿಳಿಸಿದರು. ಈ ಸಂದರ್ಭದಲ್ಲಿ ರಾಜಣ್ಣ, ಕೆಂಚವೀರನಹಳ್ಳಿಮಲ್ಲೇಶ್, ಎಚ್.ಹನುಮಂತರಾಯ, ತಿಪ್ಪಮ್ಮ, ಶಾಂತಕುಮಾರಿ, ರಾಮಾಂಜನೇಯ, ಸಮೀವುಲ್ಲಾ, ನಿರಂಜನ್‌ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

-----

ಪೋಟೋ: ೨೭ಸಿಎಲ್‌ಕೆ೧

ಚಳ್ಳಕೆರೆ ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಬಿಎಲ್‌ಒಗಳು.

----

ಪೋಟೋ: ೨೭ಸಿಎಲ್‌ಕೆ೦೧

ಚಳ್ಳಕೆರೆ ನಗರದ ತಾಲೂಕು ಕಚೇರಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಒತಾಯಿಸಿ ಬಿಎಲ್‌ಒಗಳು ಮನವಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು