ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಅಕ್ಟೋಬರ್ 23ರಂದು ಚುನಾವಣೆ ನಡೆಯಲಿದೆ. ಆದರೆ, ಈಗ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಅಭ್ಯರ್ಥಿಗಳಿಗೆ ಮತದಾರರನ್ನು ಭೇಟಿಯಾಗಲು ದಸರಾ ರಜೆ ಅಡ್ಡಿಯಾಗಿದೆ.
ಮನೆಗೆ ಹೋದರೂ ಸಿಗದ ಶಿಕ್ಷಕರು:
ಬೆಂಗಳೂರು ಶಿಕ್ಷಕರ ಕ್ಷೇತ್ರ 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿದೆ. ಮತದಾನ ದಿನವೂ ನಿಗದಿಯಾಗಿದೆ. ಆಡಳಿತರೂಢ ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತ್ತು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ಅವರ ಬೆಂಬಲಿಗರು ಕಾಲಿಗೆ ಚಕ್ರಕಟ್ಟಿಕೊಂಡು ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಮನೆಗಳ ಕದ ತಟ್ಟುತ್ತಿದ್ದಾರೆ. ಆದರೆ, ಅಭ್ಯರ್ಥಿಗಳಿಗೆ ಶಿಕ್ಷಕರ ದರ್ಶನವಾಗುವುದೇ ಕಷ್ಟವಾಗಿದೆ.ದಸರಾ ರಜೆ ಹಿನ್ನೆಲೆಯಲ್ಲಿ ಬಹುತೇಕ ಶಿಕ್ಷಕರು ಕುಟುಂಬ ಸಮೇತ ಸಂಬಂಧಿಕರ ಊರು ಸೇರಿದ್ದಾರೆ. ರಜೆ ಮುಗಿದ ಮರು ದಿನವೇ ಚುನಾವಣೆ ಇರುವುದರಿಂದ ಅಭ್ಯರ್ಥಿಗಳಲ್ಲಿ ಆತಂಕ ಹೆಚ್ಚಿಸಿದೆ. ಶಿಕ್ಷಕರನ್ನು ಒಟ್ಟಿಗೆ ಸೇರಿಸಿ ಮತ ಭಿಕ್ಷೆ ಪಡೆಯುವುದು ಹೇಗೆ ಎಂಬುದು ಅಭ್ಯರ್ಥಿಗಳ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಮನೆ ಮನೆ ಪ್ರಚಾರ ಶುರು ಮಾಡಿರುವ ಅಭ್ಯರ್ಥಿಗಳ ಬೆಂಬಲಿಗರು, ಮತದಾರ ಶಿಕ್ಷಕರ ದೂರುವಾಣಿ ಸಂಖ್ಯೆ ಸಂಗ್ರಹ ಮಾಡುತ್ತಿದ್ದಾರೆ. ಫೋನ್ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಅಲ್ಲದೆ, ಶಿಕ್ಷಕರು ಇರುವ ಊರುಗಳಿಗೆ ಹೋಗಿ ಕರಪತ್ರದ ಜೊತೆಗೆ ಉಡುಗೊರೆಯ ಆಶ್ವಾಸನೆ ಕೊಟ್ಟು ನಮ್ಮ ಪರವಾಗಿ ಮತ ಚಲಾಯಿಸಬೇಕು ಎಂದು ದುಂಬಾಲು ಬೀಳುತ್ತಿದ್ದಾರೆ.
ಶಿಕ್ಷಕರು ನೇರವಾಗಿ ಸಿಗದಿದ್ದರೂ , ದೂರವಾಣಿ, ವಾಟ್ಸ್ ಆಪ್ , ಟ್ವಿಟರ್ ಮೂಲಕ ಅವರನ್ನು ತಲುಪುವ ಪ್ರಯತ್ನ ನಡೆದಿದೆ. ಪ್ರತಿಯೊಬ್ಬ ಮತದಾರನಿಗೆ ಕರೆ ಮಾಡಿ ಮತ ಯಾಚನೆ ನಡೆಸುವುದಕ್ಕಾಗಿಯೇ ಪ್ರತಿಯೊಬ್ಬ ಅಭ್ಯರ್ಥಿಗೂ ಐಟಿ ಸೆಲ್ ತೆರೆದಿದ್ದಾರೆ. ಆನ್ ಲೈನ್ , ವಿಡಿಯೋ ಕಾಲ್ ಗಳು, ಟೆಕ್ಸ್ಟ್ ಸಂದೇಶಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಬಹಿರಂಗ ಸಮಾವೇಶಗಳನ್ನು ನಡೆಸಲು ದಸರಾ ರಜೆ ಅಡ್ಡಿಯಾಗಿರುವುದರಿಂದ ಪರ್ಯಾಯ ಮಾರ್ಗಗಳ ಮೂಲಕ ಮತದಾರರ ಮನವೊಲಿಸುವ ಪ್ರಯತ್ನಗಳು ನಡೆದಿವೆ.
ಕೈ ಮತ್ತು ಎನ್ಡಿಎ ಮೈತ್ರಿಕೂಟಕ್ಕೆ ಸವಾಲು:
ಕಳೆದ ನಾಲ್ಕು ಅವಧಿಯಿಂದಲೂ ಪಕ್ಷಕ್ಕಿಂತ ವೈಯಕ್ತಿಕ ವರ್ಚಸ್ಸಿನ ಮೇಲೆಯೇ ಪುಟ್ಟಣ್ಣ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿಯಂತೆ ಈಗಲೂ ಶಿಕ್ಷಕರೇ ಪುಟ್ಟಣ್ಣ ಪರವಾಗಿ ಮತಯಾಚನೆ ಮಾಡುತ್ತಿದ್ದು, ಇದು ಅವರು ಶಿಕ್ಷಕರೊಂದಿಗೆ ಉತ್ತಮ ಒಡನಾಟ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಶಿಕ್ಷಕರ ಪರವಾಗಿ ತಾವು ಮಾಡಿರುವ ಕೆಲಸ ಹಾಗೂ ಹೋರಾಟಗಳು ತಮ್ಮನ್ನು ಮತ್ತೊಮ್ಮೆ ಗೆಲುವಿನ ದಡ ಸೇರಿಸಲಿದೆ ಎಂಬ ಉಮೇದಿನಲ್ಲಿ ಪುಟ್ಟಣ್ಣ ಇದ್ದಾರೆ.
ಆಡಳಿತ ಮತ್ತು ವಿಪಕ್ಷಗಳು ಚುನಾವಣೆ ಗೆಲ್ಲಲು ಎಲ್ಲಾ ರೀತಿಯಲ್ಲಿ ಕಸರತ್ತು ನಡೆಸುತ್ತಿವೆ. ಉಭಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ತಮ್ಮದೇ ಆದ ತಂತ್ರ ಹೂಡುತ್ತಿದ್ದಾರೆ. ಹೀಗಾಗಿ ಚುನಾವಣಾ ಅಖಾಡ ರಂಗೇರುತ್ತಿದೆ. ಮತದಾರರ ಒಲವು ಗಳಿಸಲು ಎರಡು ಪಕ್ಷದ ಅಭ್ಯರ್ಥಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಲೆಕ್ಕಾಚಾರಗಳು ಬುಡಮೇಲಾಗುವ ಸಾಧ್ಯತೆಗಳು ಇವೆ.
ಕೈ ಕಾರ್ಯಕರ್ತರಿಗೆ ಶಿಕ್ಷಕರ ಬಲ:
ಬಾಕ್ಸ್.................
ಎನ್ಡಿಎ ಉಸ್ತುವಾರಿಗಳ ನಿಯೋಜನೆ:ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿರುವ ಉಭಯ ಪಕ್ಷಗಳ ನಾಯಕರು ಮತದಾರ ಶಿಕ್ಷಕರ ಮನವೊಲಿಸಲು ಎನ್ ಡಿಎ ಉಸ್ತುವಾರಿಗಳನ್ನು ನಿಯೋಜನೆ ಮಾಡಿದೆ.
10ರಿಂದ 15 ಶಿಕ್ಷಕ ಮತದಾರರಿಗೆ ಗ್ರಾಮಗಳಲ್ಲಿ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ವಾರು ಜೆಡಿಎಸ್ - ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡಂತೆ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಇವರು ನಿರಂತರವಾಗಿ ಶಿಕ್ಷಕರ ಸಂಪರ್ಕದಲ್ಲಿದ್ದು, ಎನ್ ಡಿಎ ಅಭ್ಯರ್ಥಿ ರಂಗನಾಥ್ ಪರ ಮತ ಚಲಾವಣೆ ಮಾಡುವಂತೆ ಮನವೊಲಿಸುತ್ತಿದ್ದಾರೆ.17ಕೆಆರ್ ಎಂಎನ್ 5,6.ಜೆಪಿಜಿ
5.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ6.ಜೆಡಿಎಸ್ - ಬಿಜೆಪಿ ಅಭ್ಯರ್ಥಿ ಎ.ಪಿ.ರಂಗನಾಥ್