ನಗರ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಕಡಿಮೆ

KannadaprabhaNewsNetwork | Published : Apr 27, 2024 1:16 AM

ಸಾರಾಂಶ

ಇಂದು ನಗರ ಪ್ರದೇಶದಲ್ಲಿಯೇ ವಿವಿಧ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳಿಂದ, ಇಲಾಖೆಯಿಂದ ಮತದಾನದ ಜಾಗೃತಿ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಇಂದು ನಗರ ಪ್ರದೇಶದಲ್ಲಿಯೇ ವಿವಿಧ ಕಾರಣಗಳಿಂದ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ವಿದ್ಯಾರ್ಥಿಗಳಿಂದ, ಇಲಾಖೆಯಿಂದ ಮತದಾನದ ಜಾಗೃತಿ ಕಾರ್ಯ ಅತ್ಯಂತ ಪ್ರಸ್ತುತವಾಗಿದೆ ಎಂದು ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಪಂ, ಜಿಲ್ಲಾ ಸ್ವೀಪ್ ಸಮಿತಿ, ತಾಲೂಕಾಡಳಿತ ಹಾಗೂ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯ ಸಿಂದಗಿಗಳಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಮತ ನಮ್ಮ ಹಕ್ಕು ಅದನ್ನು ಶ್ರದ್ಧೆಯಿಂದ ಮಾಡಬೇಕು. ಒಂದು ಮತ ದೇಶದ ಭದ್ರತೆಯನ್ನು ಎತ್ತಿ ಹಿಡಿಯುತ್ತದೆ. ಚುಣಾವಣೆ ದಿನವನ್ನು ರಜೆ ಎಂದು ಭಾವಿಸಿ ಬಹುತೇಕರ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ನಮ್ಮ ಜವಾಬ್ದಾರಿಯನ್ನು ನಾವೇ ಪಾಲಿಸಿ ಕಡ್ಡಾಯವಾಗಿ ಮತದಾನ ಮಾಡುವಂತೆ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಿರ್ಭೀತರಾಗಿ ಧರ್ಮ-ಜನಾಂಗ, ಜಾತಿ-ಮತ-ಭಾಷೆ ಯಾವುಕ್ಕು ಪ್ರಭಾವಿತರಾಗದೇ ಮತ ಚಲಾಯಿಸಬೇಕು. ಮತದಾನದ ಪ್ರಮಾಣ ೧೦೦ಕ್ಕೆ ೧೦೦ ಪ್ರತಿಶತವಾಗಬೇಕು. ಆ ನಿಟ್ಟಿನಲ್ಲಿ ಜನಜಾಗೃತಿ ಅವಶ್ಯವಾಗಿದೆ. ಭಾರತ ಚುಣಾವಣಾ ಆಯೋಗ ಮತದಾನವನ್ನು ಹೆಚ್ಚಿಸಲು ಎಲ್ಲ ಕ್ರಮಗಳನ್ನು ಕೈಗೊಂಡಿದೆ. ನಾಗರಿಕರು ತಮ್ಮ ಹಕ್ಕನ್ನು ಚಲಾವಣೆ ಮಾಡುವಂತೆ ತಿಳಿಸಿದರು.

ಜಾಗೃತಿ ಅಭಿಯಾನ ಸಾರಂಗಮಠದಿಂದ ಪ್ರಾರಂಭವಾಗಿದ್ದು ಕನಕದಾಸ ವೃತ್ತ, ಗೌಡರ ಓಣಿ, ಮಲ್ಲಿಕಾರ್ಜುನ ದೇವಸ್ಥಾನ, ಹೆಗ್ಗೇರೇಶ್ವರ ದೇವಸ್ಥಾನ, ಮಲ್ಲದ ಓಣಿ, ,ಅಶೋಕ ಚೌಕ್‌, ಹಳೇಬಜಾರ ಮಾರ್ಗವಾಗಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಕೊನೆಗೊಂಡಿತು. ಮಾರ್ಗ ಮಧ್ಯದಲ್ಲಿ ಪ್ರಶಿಕ್ಷಣಾರ್ಥಿಗಳು ಮನೆಮನೆಗೆ ತೆರೆಳಿ ಮತದಾನದ ಜಾಗೃತಿ ಕರಪತ್ರನೀಡಿ ಮತದಾನ ಜಾಗೃತಿ ಮೂಡಿಸಿದರು.

ಅಭಿಯಾನದಲ್ಲಿ ಪ್ರಾಚಾರ್ಯ ಜೆ.ಸಿ.ನಂದಿಕೋಲ, ಉಪನ್ಯಾಸಕರಾದ ಸುಧಾಕರ ಚವ್ಹಾಣ, ಪ್ರಶಾಂತ ಕುಲಕರ್ಣಿ, ಆರ್.ಎ,ಹಾಲಕೇರಿ, ಸಿ.ಜಿ.ಕತ್ತಿ, ಮಹಾದೇವಿ ಹಿರೇಮಠ, ವಿದ್ಯಾ ಮೋಗಲಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

Share this article