ಕಳೆದ ವರ್ಷದಲ್ಲಿ ನಡೆದ ವಿಧಾನಸಭೆ ಚುನಾವಣೆ । ಇದೀಗ ಲೋಕಸಭಾ ಚುನಾವಣೆ ಮತದಾನದಲ್ಲಿ ಶೇ. 3.16 ರಷ್ಟು ಇಳಿಮುಖ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಕಳೆದ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಮತದಾನದಲ್ಲಿ ಏರಿಕೆ ಕಂಡಿದೆ. ಆದರೆ, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಶೇ.78.30 ರಷ್ಟು ಮತದಾನ ವಾಗಿತ್ತು. ಆದರೆ, ಇದೇ ಏಪ್ರಿಲ್ 26 ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 75.14 ರಷ್ಟು ಮಾತ್ರ ಮತದಾನ ವಾಗಿದೆ. ಶೇ. 3.16 ರಷ್ಟು ಕಡಿಮೆ ಮತದಾನವಾಗಿದೆ.
ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ಅಷ್ಟೇನೂ ಉತ್ಸಾಹ ಇರಲಿಲ್ಲ. ಇದಕ್ಕೆ ಕಾರಣ, ಬಿಸಿಲಿನ ಝಳದಿಂದಾಗಿ ಜನರು ಮತಗಟ್ಟೆಗೆ ಬರಲಿಲ್ಲ ಎಂದು ಹೇಳಲಾಗದು. ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿರುವ ಬಹಳಷ್ಟು ಮಂದಿ ಈ ಬಾರಿ ಮತಗಟ್ಟೆಗೆ ಹೋಗಲೇ ಇಲ್ಲ. ಈ ಕುರಿತು ಪತ್ರಿಕೆ ಹಲವರನ್ನು ಮಾತನಾಡಿಸಿದಾಗ ಆಸಕ್ತಿ ಇಲ್ಲ, ಯಾಕೆ ವೋಟ್ ಮಾಡಬೇಕೆಂಬ ಅಭಿಪ್ರಾಯವನ್ನು ತಮ್ಮ ಸರಿಕರೊಂದಿಗೆ ಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಬಗ್ಗೆ ಈ ರೀತಿ ತೀರ್ಮಾನಕ್ಕೆ ಬಂದಿರುವುದು ಅಪಾಯಕಾರಿ ಬೆಳವಣಿಗೆ ಈ ಬಾರಿ ಚುನಾವಣೆಯಲ್ಲಿ ವ್ಯಕ್ತವಾಗಿದೆ.
ಈ ಎಲ್ಲಾ ಕಾರಣದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದೆ.-------- ಬಾಕ್ಸ್----
----- ----- ------
------------------------------------------------
-----------------------------------------------
---------------------------------------------
ತರೀಕೆರೆ79.3574.29---------------------------------------------
ಕಡೂರು80.8674.73-----------------------------------------------
ಒಟ್ಟು78.30 75.14--------------------------------------------- 29 ಕೆಸಿಕೆಎಂ 6ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನಕ್ಷೆ.