ಮತದಾನ ಪ್ರಮಾಣ ಶೇ.80ಕ್ಕಿಂತ ಹೆಚ್ಚಲಿ: ಜಿಪಂ ಸಿಇಒ ಕಾಂದೂ

KannadaprabhaNewsNetwork |  
Published : Feb 15, 2024, 01:35 AM IST
ಬೈಕ್ ರ್ಯಾಲಿ  | Kannada Prabha

ಸಾರಾಂಶ

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ. 80ಕ್ಕಿಂತ ಹೆಚ್ಚು ಮಾಡುವ ಗುರಿಯೊಂದಿಗೆ ಮತದಾನ ಜಾಗೃತಿ ಮಾಡಬೇಕು..

ಹಳಿಯಾಳ:

ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಶೇ. 80ಕ್ಕಿಂತ ಹೆಚ್ಚು ಮಾಡುವ ಗುರಿಯೊಂದಿಗೆ ಮತದಾನ ಜಾಗೃತಿ ಮಾಡಬೇಕೆಂದು ಜಿಪಂ ಸಿಇಒ ಈಶ್ವರಕುಮಾರ ಕಾಂದೂ ಹೇಳಿದರು.ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಮತದಾರ ನೋಂದಣಿ ಹಾಗೂ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೆನರಾ ಕ್ಷೇತ್ರವು 75% ಮತದಾನವಾಗಿದೆ. ಇದು ರಾಜ್ಯದಲ್ಲಿಯೇ ಅತ್ಯಂತ ಗರಿಷ್ಠ ಮತದಾನ ಪ್ರಮಾಣವಾಗಿತ್ತು. ಕಳೆದ ಬಾರಿ ಮತದಾನದ ಪ್ರಮಾಣದ ದಾಖಲೆ ಮೀರಿಸುವ ಗುರಿಯೊಂದಿಗೆ ಮತದಾನ ಜಾಗೃತಿ ಹಮ್ಮಿಕೊಳ್ಳಬೇಕಾಗಿದೆ. ಮಹಿಳೆಯರು, ಯುವಕರು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರೇರೇಪಿಸಲು ಯೋಜನೆ, ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗಿದೆ. ಕಳೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾಗಿದ್ದ ಬೂತ್‌ ಗುರುತಿಸಿ ಆ ಭಾಗದ ಮತದಾರರನ್ನು ಜಾಗೃತಗೊಳಿಸಲು ಆಸಕ್ತಿ ವಹಿಸಬೇಕಾಗಿದೆ ಎಂದರು.ತಾಪಂ ಇಒ ಪರಶುರಾಮ ಘಸ್ತೆ, ಗ್ರೇಡ್-2 ತಹಸೀಲ್ದಾರ್‌ ಜಿ.ಕೆ. ರತ್ನಾಕರ, ಬಿಇಒ ಪ್ರಮೋದ ಮಹಾಲೆ, ಸಿಡಿಪಿಒ ಡಾ. ವಿಜಯಲಕ್ಷ್ಮೀ, ಕೃಷಿ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ಶಿರಸ್ತೆದಾರ ಅನಂತ ಚಿಪ್ಪಲಗಟ್ಟಿ, ಪಶು ವೈದ್ಯಾಧಿಕಾರಿ ಡಾ. ಕೆ. ನದಾಫ್‌ ಹಾಗೂ ಇತರರು ಇದ್ದರು.ಸಭಾ ಕಾರ್ಯಕ್ರಮದ ನಂತರ ಪಟ್ಟಣದ ಮುಖ್ಯ ಬೀದಿಗಳಲ್ಲಿ ಬೈಕ್ ರ್‍ಯಾಲಿ ನಡೆಯಿತು. ಜಿಪಂ ಸಿಇಒ ಬೈಕ್ ರೈಡ್ ಮಾಡಿ ರ್‍ಯಾಲಿ ಮುನ್ನೆಡೆಸಿದರು. ಪಿಡಿಒಗಳು ಹಾಗೂ ಗ್ರಾಪಂ ಸಿಬ್ಬಂದಿ ಹಾಗೂ ಇತರ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ